ಮೃತ ಕಡಲಾಮೆಯ ಎರಡು ಕಳೇಬರ ಕಡಲತೀರದಲ್ಲಿ ಪತ್ತೆ

ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾ ದಲ್ಲಿ ಮೃತ ಕಡಲಾಮೆಯ ಕಳೇಬರಗಳು ಕಡಲತೀರದಲ್ಲಿ ಕಂಡುಬoದಿದೆ. ಟೊಂಕಾ ಕಾಸರಕೋಡಿನಲ್ಲಿ ಕಡಲಾಮೆ ಮೊಟ್ಟೆ ಇಡುವ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡುಬoದ ಮೃತ ಆಲಿವ್ರೆಡ್ಲಿ ಹಾಗೂ ಗ್ರೀನ್ ಜಾತಿಯ ಎರಡು ಕಡಲಾಮೆಯು ಕಂಡುಬoದಿದೆ. ಇದೆ ತಿಂಗಳಲ್ಲಿ ಒಟ್ಟು 5 ಕಡಲಾಮೆಗಳು ಮೃತವಾಗಿದ್ದು, ಇವುಗಳ ಕಳೆಬರಗಳು ಕಾಸರಕೋಡ ಕಡಲತೀರದಲ್ಲಿ ಕಂಡುಬoದಿದೆ. ಮೀನುಗಾರರ ಮಿತ್ರ ಕಡಲಾಮೆಯ ಸಂರಕ್ಷಣೆಗಾಗಿ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಉದ್ಯೋಗಾವಕಾಶ: 1 ಲಕ್ಷದ ವರೆಗೆ ವೇತನ: SSLC, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ

ಅಂತಿಮ ಸಂಸ್ಕಾರದಲ್ಲಿ ಹೊನ್ನಾವರ ಅರಣ್ಯ ವಲಯದ ಸಿಬ್ಬಂದಿಗಳಾದ ವಿನೋದ ನಾಯ್ಕ, ಶಿವಾನಂದ ನಾಯ್ಕ, ರೀಘ ವಾಕ್ ನ ರಾಮಚಂದ್ರ, ಕಾಸರಕೋಡ ಟೊಂಕಾ ಖಾರ್ವಿ ವಾಡೆಯ ರಾಜೇಶ ಗೋವಿಂದ ತಾಂಡೇಲ್, ದೇಶದ ನಾನಾ ರಾಜ್ಯದಿಂದ ಕಡಲತೀರ ಸಂದರ್ಶನ ಅಭ್ಯಾಸಕ್ಕೆ ಬಂದ ಬೆಂಗಳೂರಿನ ಅಜೀಂ ಪ್ರೇಮ ಜೀ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಕಡಲ ವಿಜ್ಞಾನಿ ಪ್ರಕಾಶ ಮೇಸ್ತಾ ಹಾಗೂ ಮೀನುಗಾರರು ಪಾಲ್ಗೊಂಡರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version