Important
Trending

ವಿದ್ಯಾರ್ಥಿನಿಯರು ಬಸ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ಯಾಕೆ ನೋಡಿ?

ಹೊನ್ನಾವರ: ಸಮಯಕ್ಕೆ ಸರಿಯಾಗಿ ಬಸ್ ಬಿಡದೇ ಇರುವುದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಬಸ್ ನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಘಟನೆ ಹೊನ್ನಾವರದಲ್ಲಿ ನಡೆದಿದೆ. ತಾಲೂಕಿನ ನಗರಬಸ್ತಿಕೇರಿಗೆ ಹೋಗುವ ಬಸ್ ಸರಿಯಾದ ಸಮಯಕ್ಕೆ ಬಾರದ ಕಾರಣದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಾರಿಗೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೆ, ಬಸ್ ತಡೆದು ಪ್ರತಿಭಟನೆ ಮಾಡಿದರು.

ಇದನ್ನೂ ಓದಿ: Arecanut Price: ಅಡಿಕೆ ಧಾರಣೆ: ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ದರದ ವಿವರ ನೋಡಿ

ಪ್ರತಿದಿನ ಮಧ್ಯಾಹ್ನ 1.30ಕ್ಕೆ ಬರುತ್ತಿದ್ದ ಬಸ್ ಇಂದು 3 ಗಂಟೆಗೆ ಬಂದಿದೆ. ಒಂದೂವರೆ ಗಂಟೆ ತಡವಾಗಿ ಬಂದಿದೆ. ಈ ವೇಳೆ ಪ್ರಯಾಣಿಕರಾದ ಮಂಜುನಾಥ ನಾಯ್ಕ ಮಾತನಾಡಿ ಪ್ರತಿದಿನವೂ ಕೂಡ ಇದೇ ರೀತಿ ಸಮಸ್ಯೆಯಾಗುತ್ತಿದೆ. ಇವತ್ತು ಗಾಡಿ ಪಂಚರ್ ಆಗಿತ್ತು ಅಂತಾ ಕಾರಣ ಹೇಳುತ್ತಾರೆ. ಆದ್ರೆ ಪ್ರತಿದಿನ ತಡವಾಗಿ ಬರ್ತಾರೆ. ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಬಸ್ ಇಳಿದ ನಂತರ ನಾಲ್ಕೈದು ಕಿ.ಮೀ ನಡೆದುಕೊಂಡು ಹೋಗಬೇಕು. ನಿಮಗೆ ಬೇಕಾದಾಗ ಬಸ್ ಬಿಟ್ಟರೇ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನೂ ವಿಧ್ಯಾರ್ಥಿನಿ ಮಾತನಾಡಿ ಪ್ರತಿದಿವಸ ಒಂದಲ್ಲಾ ಒಂದು ಸಮಸ್ಯೆ ಪ್ರತಿ ದಿವಸ ನಡೆಯುತ್ತಿದ್ದು, ಹಳ್ಳಿಗಳಿಗೆ ಹೋಗುವುದರಿಂದ ನೆಟವರ್ಕ ಸಮಸ್ಯೆಯಿರುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು. ಈ ವೇಳೆ ವಿಸ್ಮಯ ಟಿ.ವಿಯೊಂದಿಗೆ ಮಾತನಾಡಿದ ಸಾರಿಗೆ ಸಿಬ್ಬಂದಿ, ಆನಂದ ನಾಯ್ಕ ಜನರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ಗಾಡಿ ಸ್ವಲ್ಪ ತಾಂತ್ರಿಕ ದೋಷದಿಂದ ತಡವಾಗಿ ಬಂದಿದೆ. ಕೆಲವೊಂದು ಸಾರಿ ತಡವಾಗುತ್ತದೆ. ಆದ್ರೆ ಜನರು ಸಹಕಾರ ನೀಡಬೇಕು. ಹಳ್ಳಿಯಿಂದ ಬರುವಾಗ ಕೆಲವೊಂದಿಷ್ಟು ಸಮಸ್ಯಗಳಿರುತ್ತೆ. ರೋಡ್, ಟ್ರಾಫಿಕ್ ಹೀಗೆ ಅನೇಕ ಸಮಸ್ಯಗಳಿರುತ್ತವೆ ಎಂದು ವಿವರಿಸಿದರು.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button