ಭಟ್ಕಳ: ಮೈಸೂರಿನ ಚಾಮುಂಡಿ ವಿಹಾರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಜ್ಯೂನಿಯರ್ ಅಥ್ಲೆಟಿಕ್ಸ್ 2024 ಕ್ರೀಡಾಕೂಟದಲ್ಲಿ ತಾಲೂಕಿನ ಚಿತ್ರಾಪುರದ ಕುಲದೀಪಕುಮಾರ್ 20 ವರ್ಷ ವಯೋಮಿತಿಯ ಜಾವಲೀನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇನ್ನೊಂದೆಡೆ ಮಾವಿನಕಟ್ಟೆ ಬೇಂಗ್ರೆಯ ರಶ್ಮೀತಾ ಗಣಪತಿ ದೇವಡಿಗ 16 ವರ್ಷ ವಯೋಮಿತಿಯ ಎತ್ತರಜಿಗಿತ ಸ್ಪರ್ಧೆಯಲ್ಲಿ ಬೆಳ್ಳಿಪದಕಕ್ಕೆ ಕೊರಳೊಡ್ಡಿದ್ದಾಳೆ.
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಹಿಳಾ ASI ಗೆ ಗುದ್ದಿದ ಕಾರು
ಕುಲದೀಪಕುಮಾರ ಸಾಯಿ ಸ್ಪೋರ್ಟ್ಸ್ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದು ರಶ್ಮೀತಾ ನಿಟ್ಟೆ ಉಡುಪಿ ಕ್ರೀಡಾವಸತಿ ನಿಲಯದ 9 ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಈ ಇಬ್ಬರೂ ವಿದ್ಯಾರ್ಥಿಗಳು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಾಪುರದ ಹಳೆಯ ವಿದ್ಯಾರ್ಥಿಗಳಾಗಿದ್ದು ,ಈ ಕುರಿತಾಗಿ ಶಾಲೆಯ ಶಿಕ್ಷವೃಂದ ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.