ಶಿರೂರು ದುರಂತ: ಮತ್ತೆ ಶೋಧ ಕಾರ್ಯಾಚರಣೆ ಶುರು: ನದಿಯಲ್ಲಿ ಸಿಕ್ಕಿದ್ದೇನು? ಮೂಡಿದ ಹೊಸ ಭರವಸೆ

ನಾಪತ್ತೆಯಾದವರ ಅವಶೇಷಗಳಿಗಾಗಿ ಹುಡುಕಾಟ

ಅಂಕೋಲಾ : ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿ ಎರಡು ತಿಂಗಳು ಗತಿಸಿ ಹೋಗಿದ್ದು,ಗಂಗಾವಳಿ ನದಿ ನೀರಿನಲ್ಲಿ ಜರಿದು ಬಿದ್ದ ಗುಡ್ಡದ ಮಣ್ಣು ಹಾಗೂ ಕಲ್ಲು ಬಂಡೆಗಳ ರಾಶಿ ರಾಶಿಯ ನಡುವೆ ಸಿಲುಕಿಕೊಂಡಿರಬಹುದಾದ, ಸ್ಥಳೀಯ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ್ ನಾಯ್ಕ ಮತ್ತು ಕೇರಳದ ಅರ್ಜುನ್ ಮತ್ತು ಆತನ ಬೆಂಜ್ ಲಾರಿ ಪತ್ರೆಗೆ,ಪೂರ್ವ ನಿಗದಿಯಂತೆ ಶುಕ್ರವಾರ ಬೆಳಿಗ್ಗೆಯಿಂದ ಮತ್ತೆ ಕಾರ್ಯಾಚರಣೆ ಶುರುವಾಗಬೇಕಿತ್ತು. ಅದಕ್ಕಾಗಿ ಸಕಲ ಸಿದ್ಧತೆ ಕೈಗೊಂಡಿದ್ದ ಸ್ಥಳೀಯ ಶಾಸಕ ಸತೀಶ್ ಸೈಲ್ ವಿಶೇಷ ನೇತೃತ್ವ ಹಾಗೂ ಕಾಳಜಿಯಲ್ಲಿ, ಹಾಗೂ ಜಿಲ್ಲಾಡಳಿತ, ಗೋವಾದಿಂದ ಕಾರವಾರ ವರೆಗೆ ಸಮುದ್ರ ಮಾರ್ಗವಾಗಿ,ಡ್ರೆಜ್ಜಿಂಗ್ ಮಶೀನ್ ಎಳೆದು ತರುತ್ತಿದ್ದ ಟಗ್ ಬೋಟ್ ಇತ್ತು.ಅಲ್ಲಿಂದ ಮುಂದೆ ಅಂಕೋಲಾ ತಾಲೂಕಿನ ಮಂಜುಗುಣಿ ಬಳಿ ಸಮುದ್ರದಲ್ಲಿಯೇ ಸಾಗಿ ಬಂದಿದ್ದ ಈ ಯಂತ್ರಗಳು, ಮಂಜಗುಣಿ ಬಳಿ ನದಿ ಮತ್ತು ಸಮುದ್ರ ಸಂಗಮ(ಅಳಿವೆ ಬಾಯಿ) ಪ್ರದೇಶದಲ್ಲಿ ಒಳ ಬಂದು ಗಂಗಾವಳಿ ನದಿಯಲ್ಲಿ ಲಂಗರು ಹಾಕಿತ್ತು.

ಇದನ್ನೂ ಓದಿ: ಮಗನಿಗೆ ಸರ್ವಸ್ವ ತ್ಯಾಗ ಮಾಡಿದಳು: ದೊಡ್ಡವನಾದ ಬಳಿಕ ವೃದ್ಧೆ ತಾಯಿಯನ್ನು ಮನೆಯಿಂದ ಹೊರಹಾಕಿದ ಮಗ

ಸಮುದ್ರದ ಏರಿಳಿತದ ( Low Tide & High Tide ) ನದಿ ನೀರಿನ ಮಟ್ಟದ ಮೇಲೂ ನೇರ ಪರಿಣಾಮ ಬೀರುವುದರಿಂದ,ಕೆಲ ಹೊತ್ತು ಅಲ್ಲಿಯೇ ಲಂಗರು ಹಾಕಿದ್ದ ಈ ಯಂತ್ರಗಳನ್ನು, ಗುರುವಾರ ಸಂಜೆಯ ವೇಳೆಗೆ ಮಂಜುಗುಣಿ ಗಂಗಾವಳಿ ಸೇತುವೆಯ ಕೆಳ ಭಾಗದಲ್ಲಿ ಜಲ ಮಾರ್ಗದ ಮೂಲಕವೇ ನಿಧಾನವಾಗಿ ಪಾಸ ಮಾಡಿ ಸಾಗಾಟ ಮುಂದುವರಿಸಲಾಗಿತ್ತು. ಈ ನಡುವೆ ನೀರಿನ ಇಳಿತದಿಂದಾಗಿ ( Low Tide) ಅಗ್ರಗೋಣ ಹಾಗೂ ಕೂರ್ವೆ ಗಡಿ ಪ್ರದೇಶದಲ್ಲಿ ಮುಂದೆ ಸಾಗಲಾಗದೇ ,ರಾತ್ರಿ ಬೆಳಗಾಗುವ ತನಕ ಕಾಯುವಂತಾಗಿತ್ತು.

ಶುಕ್ರವಾರ ಮುಂಜಾನೆಯಿಂದ ಮತ್ತೆ ಎಂದಿನಂತೆ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ( High Tide ) ಈ ವೇಳೆ ಗಂಗಾವಳಿ ನದಿಯಲ್ಲಿ ಸಾಗಾಟ ಮುಂದುವರೆಸಿ, ಶಿರೂರು ಬಳಿ ಕೊಂಕಣ ರೈಲ್ವೆ ಸೇತುವೆ ಕೆಳಗಿಂದ ಹಾದು ಹೋಗಿ,ಉಳುವರೆ ಶಿರೂರು ಮಧ್ಯ ಭಾಗದ ನಿಗದಿತ ಸ್ಥಳ ತಲುಪಬೇಕಿದೆ. ಈ ನಡುವೆ ಕೂರ್ವೆ,ಮೋಟನ ಕೂರ್ವೆ, ಹಿಚ್ಕಡ, ಸಗಡಗೇರಿ ಮತ್ತಿತರ ಗ್ರಾಮಗಳ ಗಡಿ ಪ್ರದೇಶವನ್ನು ದಾಟಿ ಬಂದಿದ್ದು,ನದಿಯ ಆಳ ಅಂದಾಜಿಸದೇ ಒಮ್ಮೆಲೆ ಬಂದರೆ,ದಡದಂಚಿಗೆ ಅಥವಾ ಇತರೆಡೆ ಸಿಲುಕಿಕೊಳ್ಳುವ ಸಾಧ್ಯತೆ ಇರುವುದರಿಂದ,ಸುಗಮ ಸಂಚಾರಕ್ಕೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಲು,ಬಂದರು ಮತ್ತಿತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಮಾರ್ಗದರ್ಶನ ನೀಡಿದ್ದರು.

ಹೀಗಾಗಿ ಕಾರ್ಯಾಚರಣೆ ನಡೆಸಬೇಕಿರುವ ನಿಗದಿತ ಸ್ಥಳ ತಲುಪಲು ಸ್ವಲ್ಪ ವಿಳಂಬವಾಗಿತ್ತು. ಮಂಜಗುಣಿ ಮತ್ತಿತರ ಸ್ಥಳೀಯರ ಸಹಕಾರದಲ್ಲಿ ಬೆಳಿಗ್ಗೆ 10 ರ ಸುಮಾರಿಗೆ ಶಿರೂರು ಕೊಂಕಣ ರೈಲ್ವೆ ಬ್ರಿಡ್ಜ್ ಕಡೆಯಿಂದ ಗಂಗಾವಳಿ ನದಿಯಲ್ಲಿ ಸರಾಗವಾಗಿ ಮುನ್ನಡೆದು ಬೆಳಿಗ್ಗೆ ನಿಗದಿತ ಪ್ರದೇಶ ತಲುಪುವ ಪೂರ್ವ, ಕಾರ್ಯಚರಣೆಗೆ ಅನುಕೂಲ ಆಗುವಂತೆ ಯಂತ್ರಗಳನ್ನು ಜೋಡಿಸಿ ಸನ್ನದ್ದ ಸ್ಥಿತಿಯಲ್ಲಿ ಇಡಲಾಗಿತ್ತು. ಈ ಮೂಲಕ ಶಾಸಕ ಸತೀಶ್ ಎಡೆಬಿಡದ ಪ್ರಯತ್ನಕ್ಕೆ ಮೊದಲ ಯಶಸ್ಸು ದೊರೆತಂತಾಗಿದ್ದು, ಕಾರ್ಯಾಚರಣೆಯು ಯಶಸ್ವಿಯಾಗಲಿ ಎಂದು ಹಲವರು ಪ್ರಾರ್ಥಿಸುತ್ತಿದ್ದರು.

ಶುಕ್ರವಾರ ಮೊದಲ ದಿನದ ಕಾರ್ಯಾಚರಣೆಗೆ ಶುಭಾರಂಭ ನೀಡಲಾಗಿದ್ದು, ಈ ವೇಳೆ ನದಿಯಲ್ಲಿ ಹುದುಗಿದ್ದ ಮರವೊಂದು, ಹಗ್ಗ ಮತ್ತಿತರ ಕೆಲ ತುಂಡುಗಳು, ಗ್ಯಾಸ್ ಒಲೆ ಮಾದರಿಯ ವಸ್ತು ದೊರೆತಿದ್ದು, ಶನಿವಾರ ಮತ್ತೆ ಕಾರ್ಯಚರಣೆ ಮುಂದುವರಿಯಲಿದೆ.

Arecanut: ಅಡಿಕೆ ಧಾರಣೆ: ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಹೇಗಿದೆ?

ಶಾಸಕ ಸತೀಶ ಸೈಲ್ ಹಾಗೂ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿದ ವಿಶೇಷ ಪ್ರಯತ್ನವಾಗಿ ಗೋವಾದಿಂದ ಕಾರವಾರ ಸಮುದ್ರ ಮಾರ್ಗವಾಗಿ, ಅಭಿಷೇನಿಯಾ ಓಶನ್ ಸರ್ವೀಸ್ ಕಂಪನಿಯಿಂದ ಪ್ಲೋಟಿಂಗ್ ಕ್ರಾಫ್ಟ್, ಎರಡು ಟಗ್, ಕ್ರೇನ್ ಕಂಬ್ಯಾಕ್ ಹೊಯ್ ಮೌಂಟೆಡ್ ಡ್ರಜ್ಜಿಂಗ್ ಮಷೀನ್ ನ್ನು ಶಿರೂರು ಗುಡ್ದ ಕುಸಿತದ ಸ್ಥಳಕ್ಕೆ ಗಂಗಾವಳಿ ನದಿ ನೀರಿನಲ್ಲಿ ತಂದು ನಿಲ್ಲಿಸಿ, ಸಂಕಷ್ಟಿ ಹಾಗೂ ಶುಕ್ರವಾರದ ಶುಭ ದಿನದಂದು ಪೂಜೆ ಸಲ್ಲಿಸಿ ಕಾರ್ಯಾಚರಣೆಗೆ ಶುಭಾರಂಭ ನೀಡಲಾಗಿದೆ ಶಾಸಕ ಸತೀಶ ಸೈಲ್, ಡಿಸಿ ಲಕ್ಷ್ಮೀಪ್ರಿಯಾ, ಎಸ್ಪಿ ನಾರಾಯಣ ಎಂ, ಮಹೇಂದ್ರ, ರಾಜಕುಮಾರ ಹೆಡೆ ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಕೇರಳ – ಮಂಜೇಶ್ವರ ಶಾಸಕ ಅಶ್ರಫ್, ಪ್ರಮುಖರಾದ ಸಾಯಿ ಗಾಂವಕರ, ಪುರುಷೋತ್ತಮ ನಾಯ್ಕ ಇತರರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version