ಒಂದೇ ದಿನ ತಾಲೂಕಿನಲ್ಲಿ ಗರಿಷ್ಠ ಪ್ರಮಾಣದ ಸೋಂಕು ದಾಖಲು
ತಾಲೂಕಿನ ಎಲ್ಲೆಡೆ ಹಬ್ಬಿದ ಮಹಾಮಾರಿ ನಂಜು
ತಾಲೂಕು ಪಂಚಾಯತ್ & ಬ್ಯಾಂಕ್ ಸಿಬ್ಬಂದಿಗೂ ಪಾಸಿಟಿವ್
ಹೊನ್ನಾವರ: ತಾಲೂಕಿನಲ್ಲಿ ಕರೊನಾ ಇಂದು ಅಕ್ಷರಶ: ರಣಕೇಕೆ ಹಾಕಿದೆ. ಭಾನುವಾರ ಒಂದೇ ದಿನ 63 ಕರೊನಾ ಪಾಸಿಟಿವ್ ಬಂದಿದೆ. ಪ್ರಭಾತನಗರ, ಕಡತೋಕಾ, ಖರ್ವಾ, ನವಿಲಗೋಣ, ಕೆಳಗಿನೂರು, ಗೇರುಸೊಪ್ಪಾ, ಸಾಲಿಕೇರಿ, ಜಡ್ಡಿಗದ್ದೆ, ಕರ್ಕಿ, ಹೊಸಳ್ಳಿ, ದುರ್ಗಾಕೇರಿ ಭಾಗದಲ್ಲಿ ಹಲವು ಕೇಸ್ ಗಳು ದೃಢಪಟ್ಟಿದೆ. ಪ್ರಭಾತನಗರ ಭಾಗದಲ್ಲಿ 8, ಮಾವಿನಕುರ್ವಾದಲ್ಲಿ 3, ಕಡತೋಕಾ ಭಾಗದಲ್ಲಿ 10, ಹಳದೀಪುರ 4, ಕೆಳಗಿನೂರು 3 ಸೇರಿದಂತೆ ಹಲವು ಭಾಗದಲ್ಲಿ ಇಂದು ಹೆಚ್ಚೆಚ್ಚು ಕೇಸ್ ಗಳು ದೃಢಪಟ್ಟಿದೆ.
ಕಡತೋಕಾದ 35 ವರ್ಷದ ಪುರುಷ, 24 ವರ್ಷದ ಪುರುಷ, 48 ವರ್ಷದ ಪುರುಷ, 45 ವರ್ಷದ ಪುರುಷ, 70 ವರ್ಷದ ಪುರಷನಲ್ಲಿ ಸೋಂಕು ಕಾಣಿಸಿಕೊಂಡಿದೆ. ನವೀಲಗೋಣದ ಅಂಸಳ್ಳಿಯ 50 ವರ್ಷದ ಪುರುಷ, ಗೇರುಸೋಪ್ಪಾದ 44 ವರ್ಷದ ಮಹಿಳೆ, ಜಡ್ಡಿಗದ್ದೆಯ 34 ವರ್ಷದ ಪುರುಷ, ಸಾಲಿಕೇರಿಯ 28 ವರ್ಷದ ಪುರುಷ, ಹಬ್ಬುಗದ್ದೆಯ 53 ವರ್ಷದ ಪುರುಷ, 45 ಮತ್ತು 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಹೊಸಾಡದ 54 ವರ್ಷದ ಪುರುಷ, ಗುಣವಂತೆಯ 32 ವರ್ಷದ ಪುರುಷ, ಕಾಸರಗೋಡ ಟೊಂಕಾದ 32 ವರ್ಷದ ಪುರುಷ, ಖರ್ವಾದ 52 ವರ್ಷದ ಪುರುಷ, ಕರ್ಕಿಯ 85 ವರ್ಷದ ವೃದ್ಧ ಹೀಗೆ ಬಹುತೇಕ ತಾಲೂಕಿನ ಎಲ್ಲಾ ಭಾಗದಲ್ಲಿ ಇಂದು ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ, ಬ್ಯಾಂಕ್ ಸಿಬ್ಬಂದಿ ಮತ್ತು ತಾಲೂಕಾ ಪಂಚಾಯತ್ ಸಿಬ್ಬಂದಿಯಲ್ಲೂ ಸೋಂಕು ದೃಢಪಟ್ಟಿದೆ.
ಈ ಕುರಿತ ವಿವರವಾದ ಮತ್ತು ಸಂಪೂರ್ಣ ಮಾಹಿತಿಯನ್ನು ರತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಚಿಂತಿಸುವ ಅವಶ್ಯಕತೆ ಇಲ್ಲ, ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ
ಶ್ರೀ ಕೇರಳ, ಕರಾವಳಿ ಮತ್ತು ತುಳುನಾಡಿನ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು.
ಸರ್ವ ಸಮಸ್ಯೆಗಳಿಗೂ ಪರಿಹಾರ ಇವರಲ್ಲಿ ಮಾತ್ರ ಸಾಧ್ಯ. ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಡೈವೋರ್ಸ್, ಕೋರ್ಟ್ ಕೇಸ್, ವಿದ್ಯೆ, ಉದ್ಯೋಗ, ಮದುವೆ ವಿಳಂಬ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ – ನಷ್ಟ, ರಾಜಕೀಯ, ವಿದೇಶ ಪ್ರಯಾಣ, ಸಾಲಬಾಧೆ, ಶತ್ರು ಪೀಡೆ, ಎಷ್ಟೇ ಸಂಪತ್ತಿದ್ದರೂ ಮನಶಾಂತಿಯ ಕೊರತೆ, ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆ ಆಗದೇ ನೊಂದಿದ್ದರೆ, ಇನ್ನು ನಿಮ್ಮ ಜೀವನದ ಯಾವುದೇ ಗುಪ್ತ ಹಾಗೂ ಕಠಿಣ ಸಮಸ್ಯೆಗಳೇನೆ ಇದ್ದರೂ ಅದರ ಮೂಲವನ್ನು ಶೋಧಿಸಿ ಶೀಘ್ರ ಹಾಗೂ ಶಾಶ್ಟತ ಪರಿಹಾರ ಮಾಡಿಕೊಡುತ್ತಾರೆ. ಪಂಡಿತ ಶ್ರೀ ಶ್ರೀ ಬ್ರಹ್ಮ ಕುಮಾರ ಗುರೂಜಿ:-8884997762
( ಜಾಹೀರಾತು )