ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಹೀಗಾಗಿ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದೀಗ ಹೊನ್ನಾವರ ತಾಲೂಕಿನ ಕಳಸಿನಮೋಟೆಯಿಂದ ಸಾಗಾಟ ಮಾಡಲಾಗುತ್ತಿದ್ದ ಅಕ್ರಮ ಮರಳು ವಾಹನವನ್ನು ಹೊನ್ನಾವರ ಪೊಲೀಸ್ ಇಲಾಖೆಯಿಂದ ವಶಪಡಿಸಿಕೊಳ್ಳಲಾಗಿದೆ.
ನೇಮಕಾತಿ: ಭಾರತೀಯ ರೈಲ್ವೆಯಲ್ಲಿ ಬೃಹತ್ ಉದ್ಯೋಗಾವಕಾಶ: 3445 ಹುದ್ದೆಗಳು
ಪಿ. ಎಸ್. ಐ ಮಮತಾ ನಾಯ್ಕ ಮತ್ತು ಸಂಗೀತಾ ಅವರ ನೇತೃತ್ವದಲ್ಲಿ ಉಳಿದ ಸಿಬ್ಬಂದಿಗಳೊoದಿಗೆ ರಾತ್ರಿ ಕಾರ್ಯಾಚರಣೆ ನಡೆಸಿ ತಾಲೂಕಿನ ಕಳಸಿನಮೋಟೆಯಿಂದ ಮರಳು ಸಾಗಾಟ ಮಾಡಲಾಗುತ್ತಿದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಎರಡು ಬುಲೆರೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಕೆಲವು ದಿನದ ಹಿಂದೆ ಇದೇ ಸ್ಥಳದಿಂದ ಮರಳು ಸಾಗಾಟ ಮಾಡಲಾಗುತ್ತಿದ್ದ ಟಿಪ್ಪರ್ ವಶಕ್ಕೆ ಪಡೆಯಲಾಗಿತ್ತು. ಇದನ್ನು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಹಸ್ತಾಂತರಿಸಲಾಗಿದೆ.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ