Important
Trending

ಕಾಣೆಯಾಗಿದ್ದಾಳೆ: ಯುವತಿ ಕುರಿತು ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಅಂಕೋಲಾ: ತನ್ನ ಕುಟುಂಬದೊಂದಿಗೆ ವಾಸವಾಗಿದ್ದ ಯುವತಿಯೋರ್ವಳು, ಗೆಳತಿಯ ಮನೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ºಹೋದವಳು, ಮನೆಗೆ ವಾಪಸ್ಸಾಗದೇ ಕಾಣೆಯಾದ ಘಟನೆ ತಾಲೂಕಿನ ಪುರಸಭೆ ವ್ಯಾಪ್ತಿಯ ಕೋಟೆವಾಡದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಅನ್ಸೀಫಾ ಇಮ್ತಿಯಾಜ್ ಶೇಖ್ (23 ) ಕಾಣೆಯಾದ ಯುವತಿಯಾಗಿದ್ದಾಳೆ.

ನೇಮಕಾತಿ: ಭಾರತೀಯ ರೈಲ್ವೆಯಲ್ಲಿ ಬೃಹತ್ ಉದ್ಯೋಗಾವಕಾಶ: 3445 ಹುದ್ದೆಗಳು

ಬಿಕಾಂ ಪದವಿ ಪೂರ್ಣಗೊಳಿಸಿ ಮನೆಯಲ್ಲಿಯೇ ಉಳಿದು ಕೊಂಡಿದ್ದ ಈಕೆ ತನ್ನ ಸ್ನೇಹಿತೆಯ ಮನೆಗೆ ಹೋಗಿ ಬರುವುದಾಗಿ ಅಂತ ಹೇಳಿ, ಕೋಟೆವಾಡದಲ್ಲಿರುವ ಮನೆಯಿಂದ ಹೊರಗೆ ಹೋದವಳು, ಈ ವರೆಗೂ ಮನೆಗೆ ವಾಪಸ್ ಬಂದಿಲ್ಲ. ಕಾಣೆಯಾದ ತನ್ನ ಮಗಳನ್ನು ಹುಡುಕಿ ಕೊಡುವಂತೆ ಅವಳ ತಾಯಿ ಸೌಧಾ ಕೋಂ ಇಮ್ತಿಯಾಜ ಶೇಖ್ ಎನ್ನುವವರು,ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.
ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತ್ತೆಗೆ ಮುಂದಾಗಿದ್ದಾರೆ.

ಈ ಮೇಲಿನ ಫೋಟೋದಲ್ಲಿರುವ ಯುವತಿ ಎಲ್ಲಿಯಾದರೂ ಕಂಡು ಬಂದಲ್ಲಿ,ಅಥವಾ ಈ ಕುರಿತು ಏನಾದರೂ ಮಾಹಿತಿ ಇದ್ದಲ್ಲಿ ಅಂಕೋಲಾ ಪೊಲೀಸ್ ಠಾಣೆ (9480805250/9480805268) ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಅಂಕೋಲಾ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಿನದಿಂದ ದಿನಕ್ಕೆ ಅಂಕೋಲಾದಲ್ಲಿ ಹದಿಹರೆಯದವರ ಮತ್ತು ಮಹಿಳೆಯರ ಕಾಣೆ ಪ್ರಕರಣ ಹೆಚ್ಚುತ್ತಲೇ ಇರುವುದು ಕಳವಳಕಾರಿ ಅಂಶವಾಗಿದೆ. ಕೆಲ ಪ್ರಕರಣಗಳು ಪೋಲೀಸ್ ಠಾಣೆಯಲ್ಲಿ ದಾಖಲಾದರೆ, ಮರ್ಯಾದೆ ಮತ್ತಿತರ ಕಾರಣಗಳಿಂದ ಮತ್ತೆ ಕೆಲ ಪ್ರಕರಣಗಳು ದಾಖಲಾಗದೇ ಇರುವುದು ಇಲ್ಲವೇ ವಿಳಂಬವಾಗಿ ದಾಖಲಾಗುತ್ತಿವೆ ಎನ್ನಲಾಗಿದ್ದು , ಬಹುತೇಕ ನಾಪತ್ತೆ (ಕಾಣೆ ) ಪ್ರಕರಣಗಳು ಪ್ರೀತಿ – ಪ್ರೇಮ – ಆಕರ್ಷಣೆ ಸುತ್ತ ಗಿರಕಿ ಹೊಡೆಯುತ್ತಿವೆ ಎನ್ನಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button