ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತದ ಬಳಿಕ ನಡೆಯುತ್ತಿರುವ ಮೂರನೇ ಹಂತದ ಶೋಧಕಾರ್ಯಾಚರಣೆ ಮುಂದುವರಿದಿದೆ. ಗಂಗಾವಳಿ ನದಿ ಅಂಚಿಗೆ ಮತ್ತು ಹೆದ್ದಾರಿ ಅಂಚಿನಿoದ ನೆಲಸಮವಾಗಿ ಜರಿದು ಹೋಗಿದ್ದ ಲಕ್ಷ್ಮಣ್ ನಾಯ್ಕ ಟೀ ಸ್ಟಾಲ್ ಹಿಂಬದಿ ಪ್ರದೇಶದಲ್ಲಿ ,ರಾಶಿ ರಾಶಿಯಾಗಿ ಬಿದ್ದರುವ ಕಲ್ಲು ಮತ್ತು ಮಣ್ಣುಗಳನ್ನು ಪಕ್ಕಕ್ಕೆ ಸರಿಸಿ, ನಾಪತ್ತೆಯಾಗಿರುವ ಜಗನ್ನಾಥ್ ನಾಯ್ಕ ಮತ್ತು ಲೊಕೇಶ ನಾಯ್ಕ ಹಾಗೂ ಹೊಟೇಲಿನ ಅವಶೇಷಗಳ ಪತ್ತೆಗೆ ತೀವ್ರಶೋಧ ನಡೆಸಲಾಗುತ್ತಿದೆ .
ಕಾಣೆಯಾಗಿದ್ದಾಳೆ: ಯುವತಿ ಕುರಿತು ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ
ಈ ಕುರಿತು ಕಾದು ಕುಳಿತಿದ್ದ ಜಗನ್ನಾಥ್ ಮಗಳು ಕೃತಿಕಾ ವಿಸ್ಮಯ ಟಿವಿ ಯೊಂದಿಗೆ ಮಾತನಾಡಿ, ನಮ್ಮ ಕುಟುಂಬದ ಯಜಮಾನನಾಗಿದ್ದ ತಂದೆ ಜನನ್ನಾಥ ನಾಯ್ಕ, ಈವರೆಗೂ ಪತ್ತೆಯಾಗದ ಕೊರಗು ನಮ್ಮಲ್ಲಿದೆ. ಶಾಸಕ ಸತೀಶ್ ಸೈಲ್ ಈ ಮೊದಲಿನಿಂದಲೂ ನಮಗೆ ಸಾಂತ್ವನ ಮತ್ತು ಧೈರ್ಯ ಹೇಳುತ್ತಿದ್ದು, ಕಾರ್ಯಾಚರಣೆ ನಡೆಯುವ ಸ್ಥಳದಲ್ಲಿ ನಮಗೆ ಇರಲು ಅವಕಾಶ ಮಾಡಿಕೊಟ್ಟು, ನಾವು ತೋರಿಸಿದ ಮಣ್ಣುಗಳ ರಾಶಿ ಹಾಗೂ ನದಿ ನೀರಿನ ಪ್ರದೇಶಗಳಲ್ಲಿ ಶೋಧ ಕಾರ್ಯಕ್ಕೆ ಮುಕ್ತ ಅವಕಾಶ ನೀಡಿದ್ದು, ಮಹೇಂದ್ರ ಡೊಂಗ್ರೆ ನೇತೃತ್ವದ ಡ್ರೆಜ್ಜಿಂಗ್ ಟೀಮ್ ಸಂಪೂರ್ಣ ಪ್ರಯತ್ನ ಮುಂದುವರಿಸುತ್ತಿದೆ. ಹೀಗಾಗಿ ಈಗಲೂ ನಮಗೆ ನಮ್ಮ ತಂದೆಯ ಮೃತದೇಹ ಪೂರ್ತಿಯಾಗಿ ಸಿಗದಿದ್ದರೂ, ಮೂಳೆಯಾದರೂ ದೊರೆತಿತೂ ಎಂದು ಆಶಾಭಾವನೆ ವ್ಯಕ್ತಪಡಿಸಿ, ತಮ್ಮ ಕುಟುಂಬದ ನೋವಿನಲ್ಲಿ ಜೊತೆಯಾಗಿ ಧೈರ್ಯ ತುಂಬುತ್ತಿರುವ ಮತ್ತು ನೆರವು ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಹಿಂದೆ ಲಕ್ಷ್ಮಣ ನಾಯ್ಕ ಟೀ ಸ್ಟಾಲ್ ಅಕ್ಕ ಪಕ್ಕದಲ್ಲಿದ್ದು, ನಂತರ ನದಿಯಲ್ಲಿ ಹುದುಗಿ ಹೋಗಿದ್ದ ಆಲದ ಮರ ಮತ್ತಿತರ ಕೆಲ ಮರ ಗಿಡಗಳನ್ನು ಶನಿವಾರದ ಕಾರ್ಯಾಚರಣೆ ವೇಳೆ ಮೇಲೆತ್ತಲಾಗಿತ್ತು. ರವಿವಾರ ಮತ್ತೆ ಬೃಹತ್ತ ಆಲದ ಮರವೊಂದನ್ನು ಶೋಧ ಕಾರ್ಯ ಗುತ್ತಿಗೆ ಪಡೆದಿರುವ ಅಭಿಷೇನಿಯಾ ಒಶಿಯನ್ ಸರ್ವೀಸ್ , ಅಭಿಷೇನಿಯಾ ಡ್ರೆಜ್ಜಿಂಗ್ ಪ್ರೈವೇಟ್ ಲಿ ನ ಮಹೇಂದ್ರ ಡೋಂಗ್ರೆ ನೇತೃತ್ವದ ತಂಡದವರು ಯಶಸ್ವಿಯಾಗಿ ಮೇಲೆತ್ತಿದ್ದರು.
ಇದರಿಂದ ಈ ಹಿಂದೆ ಮರದ ರೆಂಬೆ ಕೊಂಬೆ ಬುಡಗಳಡಿ ಯಾರಾದರೂ ಇಲ್ಲವೇ ವಸ್ತುಗಳು ಸಿಲುಕಿಕೊಂಡಿರಬಹುದೇ ಎಂಬ ಪ್ರಶ್ನೆಗೆ, ಅ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲು ಸ್ವಲ್ಪ ಅನುಕೂಲಕರ ವಾತಾವರಣ ನಿರ್ಮಾಣವಾಗಿತ್ತು. ಅಂತಹ ಪ್ರದೇಶಗಳಲ್ಲಿಯೂ ಡ್ರೆಜ್ಜಿಂಗ್ ಟೀಂ ನೊಂದಿಗೆ ಬಂದಿರುವ ಕೇರಳ ಹಾಗೂ ಇತರೆ ರಾಜ್ಯಗಳ ಮುಳುಗು ತಜ್ಞರ ಶೋಧ ನಡೆಸುತ್ತಿದೆ ಶೋಧ ಕಾರ್ಯದ ವೇಳೆ ಜಗನ್ನಾಥ ನಾಯ್ಕ ಮತ್ತು ಲೊಕೇಶ ನಾಯ್ಕ ಕುಟುಂಬ ಸದಸ್ಯರೂ ಕಾರ್ಯಚರಣೆ ವೀಕ್ಷಿಸಲು ಅನುಕೂಲವಾಗುವಂತೆ ಶಾಸಕ ಸತೀಶ ಸೈಲ್ ಡ್ರೆಜ್ಜಿಂಗ್ ಟೀಮ್ ನವರಿಗೆ ಸೂಚಿಸಿದ್ದು, ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಕಾರ್ಯಚರಣೆಯ ವೇಳೆ ಲಕ್ಷ್ಮಣ ನಾಯ್ಕ ಹೊಟೇಲ್ ಕಟ್ಟಡದ ಹೊರ ಆವರಣಕ್ಕೆ ನದಿ ಅಂಚಿಗೆ ಅಳವಡಿಸಲಾಗಿದ್ದ ಪರದೇ ರೂಪದ ಸ್ಕ್ರೀನ್ ,ಮೇಲ್ಚಾವಣಿ ಶೀ ಟ್, ಸಿಮೆಂಟ್ ಬಾಗಿಲ ಜೋಡಿನ ತುಂಡು, ಬ್ಲ್ಯಾಂಕೆಟ್ ,ಊಟದ ತಾಟು,ಬಾತರೂಮ್ ಟೈಲ್ಸಿನ ತುಂಡು ಮತ್ತಿತರ ಅವಶೇಷಗಳನ್ನು ಪತ್ತೆ ಮಾಡಲಾಗಿತ್ತು. ಜಗನ್ನಾಥ್ ನಾಯ್ಕ್ ಮತ್ತು ಲೋಕೇಶ್ ನಾಯ್ಕ ಮೃತ ದೇಹದ ಕುರುಹು ಪತ್ತೆ ಯಾಗುವುದೇ ಎಂಬ ಆಶೆಗಣ್ಣುಗಳಿಂದ ನಿರೀಕ್ಷಿಸಲಾಗುತ್ತಿದೆ.
ಕೃತಿಕಾ ಇವಳ ಸಹೋದರಿ ಪಲ್ಲವಿ, ಭಾವ ಸುಭಾಸ, ಸ್ಥಳೀಯ ಪ್ರಮುಖರಾದ ಗೋಪು ನಾಯಕ ಅಡ್ಲೂರ, ಪುರುಷೋತ್ತಮ್ ನಾಯ್ಕ್, ಜಗದೀಶ ಖಾರ್ವಿ ಮತ್ತಿತರರಿದ್ದರು. ನದಿಯಲ್ಲಿ ಜರಿದು ಬಿದ್ದಿರುವ ದೊಡ್ಡ ಗಾತ್ರದ ಕಲ್ಲು ಬಂಡೆಗಳು, ಮಣ್ಣು, ಮರ ಮಟ್ಟುಗಳಿಂದ ಶೋಧ ಕಾರ್ಯಾಚರಣೆಗೆ ಕೊಂಚ ಹಿನ್ನಡೆಯಾಗುತ್ತಿದ್ದು, ಆದರೂ ಶೋಧ ಕಾರ್ಯವನ್ನು ಸವಲಾಗಿ ಸ್ವೀಕರಿಸಿ ಕಾರ್ಯಚರಣೆ ಮುಂದುವರೆಸಿದAತಿದ್ದು, ನದಿ ಅಳದಲ್ಲಿ ಏನೆಲ್ಲ ಸಿಗಬಹುದು ಕಾದುನೋಡಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ