ಶಿರೂರು ಗುಡ್ಡ ಕುಸಿತ ದುರಂತ: ಗಂಗಾವಳಿ ನದಿಯಲ್ಲಿ ಕೈ ಮೂಳೆ ಮತ್ತು ಎದೆ ಚಿಪ್ಪಿನ ಎಲುಬು ಪತ್ತೆ!     

ಅಂಕೋಲಾ : ಶಿರೂರು ಗುಡ್ಡ ಕುಸಿತದ ಶೋಧ ಕಾರ್ಯಾಚರಣೆ 11 ನೇ ದಿನಕ್ಕೆ ಮುಂದುವರೆದಿದ್ದು, ಈ ವೇಳೆ ಶೋಧಕಾರ್ಯದಲ್ಲಿ ಮುಳುಗೇಳುತ್ತಿದ್ದ ಸ್ಕೂಬಾ ಡೈವರ್ ಅವರು,ಗಂಗಾವಳಿ ನದಿಯಲ್ಲಿ ವ್ಯಕ್ತಿಯೋರ್ವರ, ಮೂಳೆ ಪತ್ತೆ ಮಾಡಿ ಮೇಲಕ್ಕೆ ತಂದಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಶಾಸಕ ಸತೀಶ್ ಸೈಲ್, ಸ್ವತಃ  ತಾವೇ ಡ್ರೆಜ್ಜಿಂಗ್  ಟೀಮ್ ನೊಂದಿಗೆ ನಿಂತು ಮಾರ್ಗದರ್ಶನ ಮಾಡುತ್ತಿದ್ದರು. ಮೇಲ್ನೋಟಕ್ಕೆ ಕೈ ಮೂಳೆಯಂತೆ ಕಂಡು ಬರುತ್ತಿರುವ ಈ ಮೂಳೆ ಯಾರದ್ದಾಗಿರಬಹುದು ಎನ್ನುವ ಕುತೂಹಲ  ಮೂಡುವಂತಾಗಿದ್ದು, ಡಿ ಎನ್ ಎ ಪರೀಕ್ಷೆ ಬಳಿಕವಷ್ಟೇ ನಿಖರ ಮಾಹಿತಿ ತಿಳಿದು ಬರಲಿದೆ.

ಕಾಣೆಯಾಗಿದ್ದಾಳೆ: ಯುವತಿ ಕುರಿತು ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಶೋಧ ಕಾರ್ಯಾಚರಣೆ ವೇಳೆ ತನ್ನ ತಂದೆ ಜಗನ್ನಾಥ ನಾಯ್ಕ ಅಸ್ಥಿ ಆದರೂ ಸಿಗಲಿ ಎಂದು ಕಾರ್ಯಾಚರಣೆ ಸ್ಥಳದಲ್ಲಿರುವ  ನೊಂದ ಕುಟುಂಬದ ಮಗಳು ಕೃತಿಕಾ ಪ್ರಾರ್ಥಿಸುತ್ತಿದ್ದು , ಇದೇ ವೇಳೆ ಗಂಗೆ ಕೊಳ್ಳದ ಲೋಕೇಶ ನಾಯ್ಕ ಮೃತ ದೇಹವು ಪತ್ತೆಯಾಗದಿರುವುದು ಈ ಮೂಳೆ ಯಾರದ್ದಾಗಿರಬಹುದು ಎನ್ನುವ ಕುತೂಹಲ ಹೆಚ್ಚುವಂತಾಗಿದೆ. ಅರ್ಜುನ್ ಮೃತದೇಹ ಇತ್ತೀಚೆಗಷ್ಟೇ ಪತ್ತೆಯಾಗಿದ್ದು, ಈಗ ದೊರೆತಿರುವ ಮೂಳೆ ಈ ಮೂವರಲ್ಲಿ ಯಾರದ್ದಿರಬಹುದು ಅಥವಾ ಈಗಾಗಲೇ ಮೃತ ಪಟ್ಟಿರುವ ಯಾವುದಾದರೂ ವ್ಯಕ್ತಿಗಳಾಗಿರಬಹುದೇ ?  ಎಂಬತ್ಯಾದಿ ಕುತೂಹಲ ಹೆಚ್ಚುವಂತಾಗಿದೆ.

ಈ ವೇಳೆ ಮಾತನಾಡಿದ ಶಾಸಕ ಸತೀಶ ಸೈಲ್, ಅರ್ಜುನ್ ಶೋಧದ ಬಳಿಕ ಕಾರ್ಯಾಚರಣೆ ಸ್ಥಗಿತ ಗೊಳ್ಳುತ್ತದೆ ಎನ್ನುವ ಊಹಾಪೋಹದ ಮಾತು ಕೇಳಿ ಬರುತ್ತಿದೆ. ಆದರೆ ನಾನು ಜಗನ್ನಾಥ ನಾಯ್ಕ ಮತ್ತು ಲೊಕೇಶ ನಾಯ್ಕ ಕುಟುಂಬಕ್ಕೆ  ನೀಡಿದ್ದ ಭರವಸೆಯಂತೆ ಕಾರ್ಯಾಚರಣೆ ಮುಂದುವರೆಸುವೆ. ತಾಲೂಕಾ ಆರೋಗ್ಯಾಧಿಕಾರಿ ಡಾ ಜಗದೀಶ ನಾಯ್ಕ ಇದು ಮನುಷ್ಯನ ಕೈ ಮೂಳೆ ಎಂದು ಖಚಿತಪಡಿಸಿದ್ದು , ದೊರೆತ ಮೂಳೆ ಯಾರದ್ದೆಂದು ಪರೀಕ್ಷಿಸಲಾಗು ವುದೆಂದರು . ಅದೇ ವೇಳೆ   ಇನ್ನೊಂದು ಮೂಳೆ ( ಎದೆ ರಿಬ್ ) ಪತ್ತೆಯಾಗಿ ಶೋಧ ಕಾರ್ಯಾಚರಣೆ ಯಶಸ್ಸಿನತ್ತ ಸಾಗುತ್ತಿದೆ.     

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version