19 ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತರಾಜ್ಯ ಕಳ್ಳರ ಬಂಧನ

ದಾಂಡೇಲಿ: ಇಲ್ಲಿನ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ ಮಾಡಿದ್ದ ಆರೋಪಿಗಳಾದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಬಂಧಿಸವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಳ್ಳರು ಇದೇ ಸೆ.19 ರಂದು ನಗರದ ಲಿಂಕ್ ರಸ್ತೆಯಲ್ಲಿರುವ ಮೆಡಿಕಲ್ ಅಂಗಡಿಯೊಳಗಿದ್ದ ನಗದು 4 ಲಕ್ಷ ರೂಪಾಯಿ ಮತ್ತು ಚಿನ್ನದ ಆಭರಣಗಳು, ಇದೇ ಕಟ್ಟಡದಲ್ಲಿರುವ ಇನ್ನೊಂದು ಕಿರಾಣಿ ಅಂಗಡಿಯಿoದ ನಗದು ಮತ್ತು ಪಕ್ಕದಲ್ಲಿದ್ದ ವೈನ್ ಸೆಂಟರಿನಿoದ ವಿವಿಧ ಮದ್ಯದ ಬಾಟಲಿಗಳನ್ನು ದೋಚಿದ್ದರು.

ಇದನ್ನೂ ಓದಿ: ಕಾಣೆಯಾಗಿದ್ದಾಳೆ: ಯುವತಿ ಕುರಿತು ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ

ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ದಾಂಡೇಲಿಯ ಡಿವೈಎಸ್ಪಿಯವರ ಮಾರ್ಗದರ್ಶನದಡಿ ದಾಂಡೇಲಿಯ ಸಿಪಿಐ ಅವರ ನೇತೃತ್ವದಲ್ಲಿ ನಗರ ಠಾಣೆಯ ಪಿಎಸ್‌ಐಗಳು ಮತ್ತು ಪೊಲೀಸರ ತಂಡವೊoದನ್ನು ರಚಿಸಿ ಪ್ರಕರಣವನ್ನು ಅತ್ಯಲ್ಪ ಅವಧಿಯಲ್ಲೆ ಭೇದಿಸಲಾಗಿದೆ.

ಬಂಧಿತ ಆರೋಪಿಗಳಿಂದ ಕಳ್ಳತನ ಮಾಡಿದ ನಗದು, ಮಂಗಳಸೂತ್ರ, ಕಿವಿ ಓಲೆ, ಚೈನ್, ಉಂಗುರು, ಮೊಬೈಲ್ ಮತ್ತು ಅನೇಕ ಬೆಳ್ಳಿಯ ವಸ್ತುಗಳನ್ನು ವಶಡಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳಿಬ್ಬರು ಅಂತರ್ ರಾಜ್ಯ ಕಳ್ಳರೆಂದು ತಿಳಿದು ಬಂದಿದ್ದು, ಈವರೆಗೆ ಅಂದಾಜು 19 ವಿವಿಧ ಕಳ್ಳತನ ಪ್ರಕರಣಗಳು ಇವರ ಮೇಲೆ ಬೇರೆ ಬೇರೆ ಕಡೆ ದಾಖಲಾಗಿದೆ.

ಧಾರವಾಡ ಅಮರಗೋಳದವನಾಗಿರುವ ಹಾಲಿ ಚಿಕ್ಕೋಡಿಯ ಮಾರ್ಕೆಟ್ ಯಾರ್ಡ್ ನಿವಾಸಿ ಹಸನಸಾಬ ಕಾಸಿಂಸಾಬ ಬೇಗ್ ಮತ್ತು ಹಳಿಯಾಳ ಮೀನು ಮಾರ್ಕೆಟ್ ನವನಾಗಿದ್ದು ಹಾಲಿ ಧಾರವಾಡ ಅಮೇರಪೇಟೆಯ ನಿವಾಸಿಯಾರಿಗುವ ಆಸೀಫ್ ಕಾಸಿಂಸಾಬ ಎಂಬಿಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.

ವಿಸ್ಮಯ ನ್ಯೂಸ್, ದಾಂಡೇಲಿ

Exit mobile version