ಅಂಕೋಲಾ : ರಸ್ತೆಯಂಚಿನ ಭಾರೀ ಗಾತ್ರದ ಹಳೆಯ ಮರ ಒಂದು ಸ್ವಲ್ಪ ವಾಲಿದಂತೆ ಕಂಡು ಬಂದು , ವಾಹನ ಸಂಚಾರಿಗಳು ಹಾಗೂ ಇತರರಿಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿದ್ದು ,ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿಲಾಗಿತ್ತು, ಸಾರ್ವಜನಿಕ ಹಿತ ದೃಷ್ಟಿಯಿಂದ ಈ ಕುರಿತು ಸಂಬಂಧಿತ ಇಲಾಖೆಗಳು ಸಮನ್ವಯತೆ ಮೂಲಕ ಮರ ತೆರೆವು ಮಾಡಿ ಸಂಭವನೀಯ ಅಪಾಯ ತಪ್ಪಿಸಿದ್ದಾರೆ.
ಪಟ್ಟಣದ ಅತ್ಯಂತ ಜನನಿಬಿಡ ಮತ್ತು ಮುಖ್ಯ ರಸ್ತೆಗಳಲ್ಲಿ ಒಂದಾಗಿರುವ ದಿನಕರ ದೇಸಾಯಿ ರಸ್ತೆ ಅಂಚಿಗೆ ,ಬೃಹತ್ ಗಾತ್ರದ ಎರಡು ಅಪಾಯಕಾರಿ ಮರಗಳಿದ್ದವು. ಈ ಹಿಂದೆ ಒಂದು ಮರವು ಬುಡ ಸಮೇತ ರಸ್ತೆಯಲ್ಲಿ ಕಿತ್ತು ಬಿದ್ದಿತ್ತು.ಅದೃಷ್ಟ ವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿರಲಿಲ್ಲ. ಆದರೆ ಅದರ ಪಕ್ಕಕ್ಕೆ ಇದ್ದ ಇನ್ನೊಂದು ಮರದ ಬುಡದ ಬಳಿ ಮಣ್ಣು ಸಡಿಲಗೊಂಡು ಇಲ್ಲವೇ ಇನ್ನಿತರೆ ಕಾರಣಗಳಿಂದ ವಾಲಿ ನಿಂತಂತಿತ್ತು.
ಶಿರೂರು ದುರಂತ; ಅರ್ಜುನ್ ಲಾರಿ ಪತ್ತೆಯ ಅಂಡರ್‌ವಾಟರ್ ಕಾರ್ಯಾಚರಣೆ ದೃಶ್ಯಾಳಿಗಳು
ಇದರಿಂದ ಮುಖ್ಯ ರಸ್ತೆಯಲ್ಲಿ ಸಾಗುವ ಬಸ್ ,ಲಾರಿ ಮತ್ತಿತರ ಎತ್ತರದ ವಾಹನಗಳ ಚಾಲಕರು ಸ್ವಲ್ಪ ನಿರ್ಲಕ್ಷ ತೋರಿದರೂ ಮರದ ರೆಂಬೆ ಕೊಂಬೆಗಳಿಗೆ ಅಪಘಾತ ಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿತ್ತು.ಅಲ್ಲದೇ ಈ ರಸ್ತೆ ಕುಮಟಾ ಕಡೆಯಿಂದ ಅಂಕೋಲಾ ಪಟ್ಟಣ ಪ್ರವೇಶಿಸುವ ಮುಖ್ಯ ರಸ್ತೆಯಾಗಿರುವುದಲ್ಲದೇ,ಈ ರಸ್ತೆ ಅಂಚಿಗೆ ಆಸ್ಪತ್ರೆಗಳು , ಹೊಟೆಲ್ ಮತ್ತು ವಸತಿಗೃಹಗಳು ಹಣಕಾಸು ಸಂಸ್ಥೆಗಳು ಮತ್ತಿತರ ವಾಣಿಜ್ಯ ಮಳೆಗೆಗಳಿದ್ದು , ಪ್ರತಿಷ್ಠಿತ ಕಾಲೇಜಿಗೆ ಸಾಗುವ ಮುಖ್ಯರಸ್ತೆಯೂ ಇದಾಗಿದೆ. ಅಲ್ಲದೇ ಕೋರ್ಟ್ ತಿರುವು ರಸ್ತೆ ಸಹ ಇಲ್ಲಿಯೇ ಬರುತ್ತಿದ್ದು ಒಂದಿಲ್ಲೊಂದು ಕಾರಣದಿಂದ ಅತ್ಯಂತ ಜನನಿಬಿಡ ಹಾಗೂ ಮುಖ್ಯ ರಸ್ತೆ ಇದಾಗಿದೆ.
ಹೀಗಾಗಿ ರಸ್ತೆಗೆ ಅಡ್ಡಲಾಗಿ ಬಂದಿದ್ದ ಮರದ ರಂಬೆ ಕೊಂಬೆಗಳಿಂದ ಸಂಚಾರಕ್ಕೆ ತೊಡಕಾಗುವ ಮತ್ತು ಯಾವುದೇ ಸಂದರ್ಭದಲ್ಲಿ ಅಪಾಯವಾಗುವ ಸಾಧ್ಯತೆಗಳು ಕೇಳಿ ಬಂದಿತ್ತು. ಈ ಕುರಿತು ಸುದ್ದಿ ಮಾಧ್ಯಮಗಳು ಸಂಬಂಧಿತ ಇಲಾಖೆಗಳಿಗೆ ಎಚ್ಚರಿಸಿದ್ದವಲ್ಲದೇ, ಸ್ಥಳೀಯ ವಾರ್ಡ್ ಸದಸ್ಯೆ ರೇಖಾ ಗಾಂವಕರ , ಪುರಸಭೆಗೆ ಮನವಿ ನೀಡಿ ಸಾರ್ವಜನಿಕ ಹಿತ ದೃಷ್ಟಿಯಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ಮರ ತೆರವು ಮಾಡುವಂತೆ ಆಗ್ರಹಿಸಿದ್ದರು.ಪುರಸಭೆಯ ನೂತನ ಅಧ್ಯಕ್ಷರು , ಮುಖ್ಯ ಅಧಿಕಾರಿಗಳು ಮತ್ತು ಇತರೆ ಜನಪ್ರತಿನಿಧಿಗಳು ,ಸಾರ್ವಜನಿಕ ಹಿತ ದೃಷ್ಟಿಯಿಂದ ಆದಷ್ಟು ಹೆಚ್ಚಿನ ಒತ್ತು ನೀಡಿ ಮರೆತೆರವು ಮಾಡಲು ಸಂಬಂಧಿತ ಪೊಲೀಸ್ , ಹೆಸ್ಕಾಂ ಹಾಗೂ ಅರಣ್ಯ ಇಲಾಖೆ ಮತ್ತಿತರರ ಜೊತೆ ಸಮನ್ವತೆಯಿಂದ ಕರ್ತವ್ಯ ನಿರ್ವಹಿಸಿ ಮರ ತೆರವು ಗೊಳಿಸಿದ್ದಾರೆ.
ಈ ಮೂಲಕ ಸಂಭವನೀಯ ಅಪಾಯ ತಪ್ಪಿಸಿದಂತಾಗಿದೆ.ಪುರಸಭೆ ಹಾಗೂ ಸಂಬಂಧಿತ ಇತರ ಎಲ್ಲ ಇಲಾಖೆಗಳ ಜನಪರ ಕಾರ್ಯ ವೈಖರಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಾತುಗಳು ಕೇಳಿಬಂದಿವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ