ಈ ಬಾರಿ ರಾಜ್ಯದಲ್ಲಿ ವಾಡಿಕೆಯಂತೆ ಮುಂಗಾರು ಮಳೆಯ ಅವಧಿ ಪೂರ್ಣಗೊಂಡಿದ್ದು, ಕಳೆದ ಐದು ವರ್ಷಗಳ ಬಳಿಕ ಕರಾವಳಿ ಜಿಲ್ಲೆಗಳಲ್ಲಿ ದಾಖಲೆಯ ಮಳೆಯು ಸುರಿದಿದೆ. 2019ರಲ್ಲಿ ಕಾರಾವಳಿಯಲ್ಲಿ ವಾಡಿಕೆಗಿಂತ ಶೇಕಡಾ 20 ರಷ್ಟು ಅಧಿಕ ಮಳೆಯಾಗಿತ್ತು. 2024ರಲ್ಲಿಯೂ ಸಹ ಇದೇ ಪ್ರಮಾಣದಲ್ಲಿ ಮಳೆಯಾಗಿದೆ. ಕರಾವಳಿಯಲ್ಲಿ ಜೂನ್ ತಿಂಗಳಿನಿoದ ಸೆಪ್ಟೆಂಬರ್ ಅಂತ್ಯದವರೆಗೆ ಮುಂಗಾರು ಮಳೆಯ ಪ್ರಮಾಣ 3,103 ಮಿಲೀಮೀಟರ್ ಆಗಬೇಕಿತ್ತು.
ನೇಮಕಾತಿ: ನಬಾರ್ಡ್ ನಲ್ಲಿ 108 ಉದ್ಯೋಗಾವಕಾಶ: SSLC ಆದವರು ಅರ್ಜಿ ಸಲ್ಲಿಸಬಹುದು
ಆದರೆ ಈ ಬಾರಿ 3,736 ಮಿಲೀ ಮೀಟರ್ ಮಳೆಯಾಗಿದೆ. ವಾಡಿಕೆಗಿಂತ ಶೇಕಡಾ 31 ರಷ್ಟು ಅಧಿಕ ಮಳೆಯಾಗಿದೆ. ಕಳೆದ ನಾಲ್ಕು ವರ್ಷ ಕರಾವಳಿ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು. ಆದರೆ ಈ ಬಾರಿ ಮಾತ್ರ ಕರಾವಳಿಯಲ್ಲಿ ದಾಖಲೆಯ ಮಳೆಯಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್