ಕಿಕ್ ಬಾಕ್ಸಿಂಗ್ ಚಾಂಪಿಯನ್ ಕುಮಾರಿ ಧನ್ವಿತಾಗೆ ಸನ್ಮಾನ

ಭಟ್ಕಳ: ತಾಲೂಕಿನ‌ ಬೆಳ್ನಿ ಗ್ರಾಮದಲ್ಲಿ ನಡೆದ 19 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೊತ್ಸವ ಕಾರ್ಯಕ್ರಮದಲ್ಲಿ ಕಿಕ್ ಬಾಕ್ಸಿಂಗ್ ಚಾಂಪಿಯನ್ ಕುಮಾರಿ ಧನ್ವಿತಾ ವಾಸು ಮೊಗೇರ ರವರನ್ನು ಶ್ರೀ ಶಾರದೋತ್ಸವ ಸೇವಾ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ

ಅಂದಹಾಗೇ ಧನ್ವಿತಾ ಮೊಗೇರ ಇತ್ತೀಚೆಗೆ ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ವೋಕೋ ಯೂತ್ ವರ್ಲ್ಡ್‌ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಪಾಯಿಂಟ್ ಫೈಟ್ ಇವೆಂಟ್ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿ ನಾಡಿಗೆ ಕಿರ್ತಿಯನ್ನು ತಂದಿದ್ದರು. ಈ ಸಂದರ್ಭದಲ್ಲಿ ಶ್ರೀ ಶಾರದೋತ್ಸವ ಸೇವಾ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ನಾಯ್ಕ, ಉಪಾಧ್ಯಕ್ಷ ಕೃಷ್ಣ ಮೊಗೇರ, ಚಂದ್ರು ದೇವಾಡಿಗ, ಮಂಜುನಾಥ ನಾಯ್ಕ, ಸುರೇಂದ್ರ ನಾಯ್ಕ ಮತ್ತಿತರರು ಇದ್ದರು.

ವಿಸ್ಮಯ ನ್ಯೂಸ್ ಈಶ್ವರ ನಾಯ್ಕ, ಭಟ್ಕಳ

Exit mobile version