ಹೊನ್ನೆಬೈಲ್ ನಲ್ಲಿ ಬೆಳೆದ ಮುತ್ತಿನ ಕದಿರು : ನವ ಚೈತನ್ಯದ ಹೊಸತು ಹಬ್ಬದ ಇಲ್ಲಿನ ವಿಷೇಶತೆಗಳೇನು ?

ಸಾಂಪ್ರದಾಯಿಕ ಪೂಜೆಯೊಂದಿಗೆ ಧಾನ್ಯಲಕ್ಷ್ಮೀಯನ್ನು ಮನೆ ತುಂಬಿಸಿಕೊಂಡ ನೂರಾರು ಭಕ್ತರು

ಅಂಕೋಲಾ: ಕರಾವಳಿಯ ಬಹು ಮುಖ್ಯ ಆಹಾರ ಪದ್ಧತಿಯಲ್ಲಿ ಅನ್ನಕ್ಕೆ ಅಗ್ರಸ್ಥಾನವಿದ್ದು,ಇಲ್ಲಿನ ಜನಜೀವನ,ಸಂಪ್ರದಾಯ ಮತ್ತು ಧಾರ್ಮಿಕ ಆಚರಣೆಯೊಂದಿಗೆ ಕೃಷಿಯ ಮಹತ್ವ ಸಾರುವ ಮತ್ತು ಕೃಷಿ ಕುಟುಂಬದಲ್ಲಿ ನವ ಚೈತನ್ಯ ತುಂಬುವ ಹೊಸತು ಹಬ್ಬದಾಚರಣೆಯನ್ನು ಹಲವಡೆ ಕಾಣಬಹುದಾಗಿದೆ. ನವರಾತ್ರಿ ಹಾಗೂ ದೀಪಾವಳಿ ಹತ್ತಿರವಾಗುತ್ತಿರುವ ಶುಭ ಸಂದರ್ಭದಲ್ಲಿ ಅಂಕೋಲಾ ತಾಲೂಕಿನ ಹೊನ್ನೇಬೈಲ್ ನ ಹೊಸ್ತು ಹಬ್ಬ ಇತರಡೆಗಳಿಗಿಂತ ಅತ್ಯಂತ ವಿಶಿಷ್ಟವಾಗಿ ಮತ್ತು ಸಡಗರ ಸಂಭ್ರಮದಿಂದ ವಿಜೃಂಭಣೆಯಿಂದ ಜರುಗಿತು.

ನಾಪತ್ತೆಯಾದ ಯುವತಿ: ಸುಳಿವು ಸಿಕ್ಕರೆ ಮಾಹಿತಿ ನೀಡಿ

ಕೃಷಿ ಬದುಕಿಗೆ ಹೊಂದಿಕೊಂಡು ಹಿರಿಯರು ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬಂದ ಹಬ್ಬಗಳಲ್ಲಿ ‘ಹೊಸ್ತು’ ಕದಿರು ಕಟ್ಟುವ ಹಬ್ಬ ಇಂದಿಗೂ ಕೃಷಿಕರ ಜೀವನದೊಂದಿಗೆ ಅವಿಸ್ಮರಣೀಯ ಸಂಬಂಧಗಳೊಂದಿಗೆ ಹೊಸತನದ ಹಬ್ಬವಾಗಿ ಆಚರಣೆಯಲ್ಲಿದೆ. ಹೊನ್ನೆ ಬೈಲ್ ಗ್ರಾಮದ ಪ್ರಸಿದ್ಧ ಕುಸ್ಲೆ ದೇವರ ಕಳಸವು ,ಗ್ರಾಮದ ಬಂಢಾರ ದೇವರ ಮನೆಯಲ್ಲಿ ಸರ್ವಾಲಂಕೃ ತಗೊಂಡು ,ಅಲ್ಲಿನ ಪೂಜೆ ಪುನಸ್ಕಾರ ಸಕಲ ಧಾರ್ಮಿಕ ಮತ್ತು ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ನಡೆಸಿ ನಂತರ ಹುಲಿ ದೇವರ ಗುಡಿಯ ಬಳಿ ತೆರಳಿ ಅಲ್ಲಿಂದ ಕಳಶದ ಮನೆಯತ್ತ ಮೆರವಣಿಗೆಯಲ್ಲಿ ಸಾಗಿಬಂತು.

ಕಳಶದ ಮನೆಯಲ್ಲಿ ಸಿದ್ದಗೊಂಡಿದ್ದ ಗ್ರಾಮದ ಮತ್ತೆರಡು ಆರಾಧ್ಯ ದೇವರುಗಳಾದ ಬೊಮ್ಮಯ್ಯ ದೇವರು ಹಾಗೂ ಮಾಣಿ ಬೀರರ ಕಳಶ ಹಾಗೂ ಸಂಬಂಧಿತ ಕಟ್ಟಿಗೆದಾರರು ಮತ್ತಿತರರ ಜೊತೆಗೂಡಿ ವಾದ್ಯ ಮೇಳದೊಂದಿಗೆ ದೇವರ ಗದ್ದೆ ಯತ್ತ ಹೆಜ್ಜೆ ಹಾಕಿದವು.ಪ್ರಕೃತಿಯ ಸುಂದರ ತಾಣದಲ್ಲಿ ಸಾಗಿ ಬಂದ ತ್ರಿ ಮೂರ್ತಿ ರೂಪದ ಈ ಮೂರು ದೇವರ ಮೆರವಣಿಗೆಯನ್ನು ನೂರಾರು ಭಕ್ತರು ಕಣ್ಣು ತುಂಬಿಸಿಕೊಂಡರು. ದೇವರ ಗದ್ದೆಯಲ್ಲಿ ಬೆಳೆದು ನಿಂತ ಭತ್ತದ ಕದಿರುಗಳುಳ್ಳ ಸ್ಥಳದಲ್ಲಿ ಒಂದು ಸುತ್ತು ಹಾಕಿದ ದೈವ ಪರಿವಾರ ಮುಂದಿನ ಆಚರಣೆಗೆ ಹಸಿರು ನಿಶಾನೆ ತೋರಿಸಿತು .

ಈ ವೇಳೆ ವ್ವೆದಿಕರು ,ಟೆಂಪಲ್ ಟ್ರಸ್ಟಿ ಹನುಮಂತ ಗೌಡ ಹಾಗೂ ಹಬ್ಬದ ಆಚರಣೆಗೆ ಸಂಬಂಧಿಸಿದ ಎಲ್ಲ ಪ್ರಮುಖರ ಸಮ್ಮುಖದಲ್ಲಿ ಕದಿರುಗಳಿಗೆ ಗಂಧ ಹಚ್ಚಿ ಸಿಂಗಾರ ಹೂವು ಇತರ ಜಾತಿಯ ಹೂವುಗಳಿಂದ ಶಂಗರಿಸಿ, ಸೌತೆ, ಬಾಳೆ ಹಣ್ಣು, ಅರ್ಪಿಸಿ ಪೂಜಿಸಿ, ಸಿರಿ ಮಣ್ಣು ಗಂಧ ಹಾಕಿ ,ಭೂಮಿತಾಯಿ ಮತ್ತು ಅನ್ನಬ್ರಹ್ಮನ ಪ್ರಾರ್ಥಿಸಿದರು. ನಂತರ ಪೂಜಿಸಿದ ಭತ್ತದ ತೆನೆಯ ಕದಿರುಗಳನ್ನು ಕೊಯ್ದು, ಒಂದೆಡೆ ಸೇರಿಸಿ , ಕದಿರು ಕಟ್ಟನ್ನು ತಲೆ ಮೇಲೆ ಹೊತ್ತುಕೊಂಡು ವಾದ್ಯ ಘೋಷ ಛತ್ರ ಚಾಮರ ಮೆರವಣಿಗೆಯೊಂದಿಗೆ ಗುಡ್ಡದ ತಪ್ಪಲಿನ ಪ್ರಸಿದ್ಧ ಶ್ರೀ ಬೊಮ್ಮಾಯ್ಯ ದೇವರ ಗುಡಿಯತ್ತ ಹೊತ್ತು ತಂದರು.

ಈ ವೇಳೆ ಕದಿರು ಹೊತ್ತು ತಂದವರ ಹಾಗೂ ದೈವ ಕಳಶ ದಾರಿಗಳ ಮತ್ತು ಕಟ್ಟಿಗೆದಾರರು ಹಾಗೂ ಇತರೆ ಪ್ರಮುಖರ ಕಾಲಿಗೆ ನೀರೆರೆದು ನಮಸ್ಕರಿಸಿ ಬರ ಮಾಡಿಕೊಳ್ಳುವ ಸಂಪ್ರದಾಯ ಗಮನ ಸೆಳೆಯಿತು. ನಂತರ ಸರ್ವಾಲಂಕೃತಗೊಂಡ ಬೊಮ್ಮಯ್ಯ ದೇವರ ಸನ್ನಿಧಿಯಲ್ಲಿ ಮೂರು ಕಳಶಗಳು ಹಾಗೂ ಭತ್ತದ ಕದಿರು ಕಟ್ಟುಗಳನ್ನಿಟ್ಟು ವಿಶೇಷ ಪೂಜೆ ಸಲ್ಲಿಸಿ ,ಗ್ರಾಮದ ಜನರ ಹಾಗೂ ಸಮಸ್ತ ಭಕ್ತರ ಹಸಿವು ಸಂಕಷ್ಟಗಳನ್ನು ನಿವಾರಿಸಿ ಮುಂದಿನ ಎಲ್ಲಾ ಹಬ್ಬಗಳು ಮತ್ತಷ್ಟು ಹರ್ಷದಾಯಕವಾಗುವಂತೆ ಹಾಗೂ ಕೃಷಿ ಮತ್ತಿತರ ಎಲ್ಲ ಕೆಲಸ ಕಾರ್ಯಗಳನ್ನು ಉತ್ಸಾಹದಿಂದ ಮಾಡಲು ಗ್ರಾಮಸ್ಥರಿಗೆ ಮತ್ತು ಭಕ್ತರಿಗೆ ಶಕ್ತಿ ಸಾಮರ್ಥ್ಯ ಕರುಣಿಸುವಂತೆ ಪ್ರಾರ್ಥಿಸಲಾಯಿತು.

ಶ್ರೀದೇವರ ಹಾಗೂ ಪರಿವಾರ ದೇವರುಗಳಿಗೆ ಪೂಜೆ ಪ್ರಾರ್ಥನೆ ಸಲ್ಲಿಸಿದ ನಂತರ ಭಕ್ತವೃಂದ ಸಹಿತ ಇತರರಿಗೆಲ್ಲರಿಗೂ ಬತ್ತದ ಕದಿರುಗಳನ್ನಿತ್ತು ಪ್ರಸಾದ ವಿತರಿಸಲಾಯಿತು . ನಂತರ ಶ್ರೀ ದೇವರ ಕ ಲಶಗಳು ಮೂಲ ಸ್ಥಾನಕ್ಕೆ ಮರಳುವ ಮೂಲಕ ಹಬ್ಬದ ಆಚರಣೆ ಸಂಪನ್ನಗೊಂಡಿತು
ಆಧುನಿಕತೆಯ ಇಂದಿನ ದಿನಗಳಲ್ಲಿಯೂ ಗ್ರಾಮೀಣ ಜನರಲ್ಲಿ ಶದ್ಧೆ ಭಕ್ತಿ, ಉತ್ಸಾಹದಿಂದ ಕೃಷಿ ಬದುಕಿನೊಂದಿಗೆ ಹೊಸ್ತು ಆಚರಿಸಲ್ಪಡುತಿದ್ದು ಕೆಲವು ಭಾಗಗಳಲ್ಲಿ ಮನೆ ಅಂಗಳದಲ್ಲಿರುವ ಮೇಟಿ ಕಂಬದ ಬುಡದಲ್ಲಿ ಹಾಗೂ ಕೆಲವರು ಮನೆಯೊಳಗಡೆ ಆಯ್ದ ಕೋಣೆಯಲ್ಲಿಟ್ಟು ಪೂಜಿಸಿ, ಹಲಸಿನ ಎಲೆ,ಮಾವಿನ ಎಲೆ, ಬಿದಿರಿನ ಎಲೆಯೊಂದಿಗೆ ಕದಿರನ್ನು ಕವಾಲು ನಾರಿನಿಂದ ಬಿಗಿದ ಕದಿರುಗಳನ್ನು ಮೇಟಿ ಕಂಬಕ್ಕೆ ಕಟ್ಟಿದ ನಂತರ ತುಳಸಿಕಟ್ಟೆ, ಮನೆ ಮುಂಭಾಗದ ಬಾಗಿಲು, ಬಾವಿ, ಹಾರೆ ಪಿಕ್ಕಾಸು, ವಾಹನ, ಯಂತ್ರಗಳಿಗೆ, ಅನ್ನದ ಪಾತ್ರೆ, ಕದಿರು ಕಟ್ಟುವ ಹಬ್ಬದ ಸಂತಸದ ಕ್ಷಣಗಳು ಕೃಷಿ ಜೀವನದಲ್ಲಿ ಹೊಸತನದೊಂದಿಗೆ ಧಾರ್ಮಿಕ ಆಚರಣೆಗೆ ಸಾಕ್ಷಿಯಾಗಿದೆ.

ಹೊಸ್ತು ಹಬ್ಬವನ್ನು ಹಾಲು ಹಬ್ಬ ಎಂದೂ ಕರೆಯಲಾಗುತ್ತದೆ. ಅಲ್ಲದೇ ಬಿಳಿ ಪಾಯಸ ಎನ್ನುವ ಅನ್ನದ ಪಾಯಸವನ್ನು ಹಲವೆಡೆ ಮಾಡಲಾಗುತ್ತದೆ. ಹಳೇ ಅಕ್ಕಿಯೊಂದಿಗೆ ಹೊಸ ಭತ್ತದ ಕಾಳುಗಳನ್ನು ಸುಲಿದು ಹಾಕಿ ಧಾನ್ಯಲಕ್ಷ್ಮಿ ಸದಾ ನೆಲೆಸಿರಲಿ ಎಂದು ಪ್ರಾರ್ಥಿಸುವವರು ಇದ್ದಾರೆ. ಭತ್ತದ ಕದಿರನ್ನು ಬಂಗಾರದ ಕದಿರು ಮುತ್ತಿನ ಕದಿರು ಎಂದು ಪೂಜಿಸಿ ಹಸಿವ ನಿಂಗಿಸಲು ಅನ್ನವೇ ಶ್ರೇಷ್ಠ ಎನ್ನುವ ಆಚರಣೆ ಹಿಂದೆಂದಿಗಿಂತಲೂ ಇಂದು ಕಾಲಘಟ್ಟದಲ್ಲಿ ಮತ್ತಷ್ಟು ಮಹತ್ವ ಸಾರುವಂತಾಗಿದೆ.

ತಮ್ಮ ಗ್ರಾಮದ ವಿವಿಧ ದೇವಸ್ಥಾನಗಳ ಪ್ರಮುಖರು , ಶ್ರೀ ದೇವರುಗಳ ಸಕಲ ಭಕ್ತವೃಂದ ಹೊಸ್ತು ಹಬ್ಬವನ್ನು ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸಲು ಸಹಕರಿಸಿದ್ದು ಸರ್ವರ ಸೇವಾ ಕಾರ್ಯಕ್ಕೆ ಹೊನ್ನೆಬೈಲ್ ಟೆಂಪಲ್ ಟ್ರಸ್ಟಿ ಬೆಳಂಬರದ ಹನುಮಂತ ಗೌಡ ದೇವಸ್ಥಾನ ಆಡಳಿತ ಮಂಡಳಿಯ ಪರವಾಗಿ ಹಾಗೂ ವೈಯಕ್ತಿಕವಾಗಿ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರಲ್ಲದೇ ಹೊಸ್ತು ಹಬ್ಬದ ಸಾಂಪ್ರದಾಯಿಕ ಮತ್ತು ಧಾರ್ಮಿಕ ಮಹತ್ವ ತಿಳಿಸಿ ಆಚರಣೆ ಕುರಿತು ವಿವರಿಸಿದರು. ಭತ್ತದ ಕದಿರನ್ನು ಬಂಗಾರದ ಕದಿರು ಮುತ್ತಿನ ಕದಿರು ಎಂದು ಪೂಜಿಸಲಾಗುತ್ತದೆ. ಹಸಿವನಿಂಗಿಸಲು ಅನ್ನವೇ ಶ್ರೇಷ್ಠ ಎನ್ನುವ ಆಚರಣೆ ಹಿಂದೆಂದಿಗಿಂತಲೂ ಇಂದಿನ ಕಾಲಘಟ್ಟದಲ್ಲಿ ಮತ್ತಷ್ಟು ಮಹತ್ವ ಸಾರುವಂತಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version