ಕುಮಟಾ: ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಾರ್ಯಾಲಯ ಹಾವೇರಿ, ಕೆನರಾ ಇ-ಟೆಕ್ ಎಜ್ಯುಕೇಶನ್ ಟ್ರಸ್ಟ್ ರಾಣಿಬೆನ್ನೂರ ಇವರ ಸಹಯೋಗದಲ್ಲಿ ಹಾವೇರಿಯಲ್ಲಿ ನಡೆದ 17 ವರ್ಷದೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಇಲಾಖಾ ಚದುರಂಗ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ ಸಿಂಚನಾ ಭಟ್ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಾಪತ್ತೆಯಾದ ಯುವತಿ: ಸುಳಿವು ಸಿಕ್ಕರೆ ಮಾಹಿತಿ ನೀಡಿ
ಕುಮಟಾ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಿಂಚನಾ ಭಟ್, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ, ಪ್ರಥಮ ಬಹುಮಾನ ಪಡೆದು, ರಾಷ್ಟ್ರಮಟ್ಟದ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಈ ಮೂಲಕ ಜೆಲ್ಲೆಯ ಮತ್ತು ಶಾಲೆಯ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ. ಸಿಂಚನಾ ಭಟ್ , ಡಾ. ಎ.ವಿ ಬಾಳಿಗಾ ಬಿ.ಎಡ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಜಿ.ಡಿ.ಭಟ್ ಹಾಗು ಗೌರಿ ಜಿ ಭಟ್ ಇವರ ಸುಪುತ್ರಿ.
ಸಿಂಚನಾ ಭಟ್ ಅವರ ಅಭೂತಪೂರ್ವ ಸಾಧನೆಗೆ ಶಾಲಾ ಆಡಳಿತ ಮಂಡಳಿ, ವಿಶ್ವಸ್ಥಮಂಡಳಿಯ ಸದಸ್ಯರುಗಳು,ಶೈಕ್ಷಣಿಕ ಸಲಹೆಗಾರರು, ದೈಹಿಕ ಶಿಕ್ಷಕರು, ಅಂಗ ಸಂಸ್ಥೆಗಳ ಮುಖ್ಯೋಪಾಧ್ಯಾಯರುಗಳು, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿಗಳು ಶುಭ ಹಾರೈಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.
ವಿಸ್ಮಯ ನ್ಯೂಸ್, ಕುಮಟಾ