ಅಡಿಕೆ ಬೆಳೆಗಾರರಿಗೆ ಮತ್ತೊಂದು ಆತಂಕ: ಭೀತಿ ಹುಟ್ಟಿಸಿದ ಚೈನೀಸ್ ವೈರಸ್!

ಕೊಳೆ ಹಾಗೂ ಎಲೆಚುಕ್ಕಿ ರೋಗದಿಂದ ಕಂಗಾಲಾಗಿದ್ದ ಅಡಕೆ ಬೆಳೆಗಾರರಿಗೆ ಈಗ ಮತ್ತೊಮದು ಭೂತ ಎದುರಾಗಿದೆ. ಚೈನಿಸ್ ರಿಂಗ್ ಸ್ಪಾಟ್ ವೈರಸ್ ರೋಗ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾಣಿಸಿಕೊಮಡು ವೇಗವಾಗಿ ಹಬ್ಬತೊಡಗಿದ್ದು, ಆತಂಕ ಮೂಡಿಸಿದೆ. ಚೈನಿಸ್ ರಿಂಗ್ ಸ್ಪಾಟ್ ವೈರಸ್ ಎಲೆಚುಕ್ಕಿ ರೋಗಕ್ಕಿಂತ ಭಿನ್ನ. ಇಲ್ಲಿ ಎಲೆಗಳ ಮಧ್ಯೆ ಸಣ್ಣ ಸಣ್ಣ ವರ್ತುಲಗಳು ನಿರ್ಮಾಣವಾಗುತ್ತವೆ.

ನಾಪತ್ತೆಯಾದ ಯುವತಿ: ಸುಳಿವು ಸಿಕ್ಕರೆ ಮಾಹಿತಿ ನೀಡಿ

ಈ ವರ್ತುಲಗಳ ಮಧ್ಯೆ ಹಸಿರಿನ ವರ್ತುಲಗಳು ಮೂಡುತ್ತವೆ. ದೂರದಿಂದ ನೋಡುವವರಿಗೆ ಅಡಕೆ ತೋಟ ಹಸಿರಾಗಿ ಕಂಡರೂ ಮರವನ್ನು ಸೂಕ್ಷö್ಮವಾಗಿ ಗಮನಿಸಿದಾಗ ರೋಗ ಭಾದಗೆ ಗುರಿಯಾಗಿರುವುದು ಗಮನಕ್ಕೆ ಬರುತ್ತವೆ. ಎಲೆಚುಕ್ಕಿ ರೋಗ ಮಳೆ ಬಿಸಿಲ ವಾತಾವರಣ ಮುಕ್ತಾಯವಾದ ಬಳಿಕ ನಿಯಂತ್ರಣಕ್ಕೆ ಬರುತ್ತದೆ. ಆದರೆ ಚೈನಿಸ್ ರಿಂಗ್ ಸ್ಪಾಟ್ ಈ ವಾತಾವರಣವನ್ನೂ ಮಿರಿ ಮುಂದುವರೆಯುತ್ತದೆ.

ನಿಧಾನವಾಗಿ ಅಡಿಕೆ ಮರಗಳು ಹಸಿರು ಕಳೆದುಕೊಳ್ಳುತ್ತದೆ. ಚೈನಿಸ್ ರಿಂಗ್ ಸ್ಪಾಟ್ ವೈರಸ್‌ಗೆ ಇದುವರೆಗೂ ಸೂಕ್ತ ಔಷದ ಇಲ್ಲದ ಕಾರಣ ಮಾದರಿಯನ್ನು ಸಂಗ್ರಹಿಸಿ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ಸಂಶೋದನೆಗಾಗಿ ಕಳುಹಿಸಿದ್ದಾರೆ. ಅದ್ಯಯನದ ಬಳಿಕವೇ ಔಷದದ ಶಿಫಾರಸು ಆಗಬೆಕಿದೆ. 

ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್

Exit mobile version