ಅಬಕಾರಿ ಚೆಕ್‌ಪೋಸ್ಟ್ ನಲ್ಲಿ ಸಿಬ್ಬಂದಿ ದರ್ಪ ? ನನ್ನ ಮೇಲೆ ಹಲ್ಲೆ ನಡೆಸಿದ್ದು, ಕಿವಿಯ ತಮಟೆ ಒಡೆದುಹೋಗಿದೆ

ಕಾರವಾರ: ಗೋವಾದಿಂದ ಕಾರವಾರ ಮೂಲಕ ಕೇರಳಕ್ಕೆ ಹೋಗುವ ಸಂದರ್ಭದಲ್ಲಿ ಕಾರವಾರದ ಮಾಜಾಳಿಯಲ್ಲಿರುವ ಅಬಕಾರಿ ಚೆಕ್‌ಪೋಸ್ಟ್ ನಲ್ಲಿ ಅಬಕಾರಿ ಸಿಬ್ಬಂದಿಗಳು ತಮ್ಮ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾರೆ. ಇದರಿಮದ ಕಿವಿಯ ತಮಟೆ ಒಡೆದುಹೋಗಿದೆ ಎಂದು ಲಾರಿ ಚಾಲಕ ಎ.ಆರ್ ಕುಮಾರ ಎನ್ನುವವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಳದಲ್ಲಿ ಹರಿ ಬಿಟ್ಟಿದ್ದಾರೆ. ಇದೀಗ ಲಾರಿಚಾಲಕ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತನ್ನ ಮೊಬೈಲ್ ಸ್ವಿಚ್ ಆಫ್ ಇದೆ ಎಂದು ಹೇಳಿ ಬೇರೆಯವರ ಮೊಬೈಲಿಂದ ಕರೆ ಮಾಡಿದ ಯುವಕ ನಾಪತ್ತೆ

ಲಾರಿ ಚಾಲಕ ಅಕ್ಟೋಬರ್ 15ರಂದು ರಾತ್ರಿ 08:30ರ ಸುಮಾರಿಗೆ ಕಾರವಾರದ ಅಬಕಾರಿ ಚೆಕ್‌ಪೋಸ್ಟ್ಗೆ ಪ್ರವೇಶಿಸಿದಾಗ ಲಾರಿಯಲ್ಲಿ ಸಾರಾಯಿ ಸಾಗಾಟ ಮಾಡುವ ಸಾಧ್ಯತೆ ಇರುವುದರಿಂದ ಅಲ್ಲಿನ ಅಬಕಾರಿ ಸಿಬ್ಬಂದಿಗಳು ಲಾರಿ ತಡೆದು ನಿಲ್ಲಿಸಿ ಹಗ್ಗವನ್ನು ಬಿಚ್ಚಿ ತೋರಿಸಬೇಕೆಂದು ಎಂದಿದ್ದಾರೆ. ನನಗೆ ತುಂಬಾ ಸುಸ್ತಾಗಿದೆ ಹಗ್ಗ ಕಟ್ಟುವಾಗಲೇ ತುಂಬಾ ಕಷ್ಟಪಟ್ಟು ಹಗ್ಗ ಕಟ್ಟಿದ್ದೇನೆ. ಬೇಕಿದ್ದರೆ ನಿಮ್ಮವರೇ ಬಿಚ್ಚಿ ನೋಡಲಿ ಎಂದು ಹೇಳಿದಕ್ಕೆ ಅಬಕಾರಿ ಸಿಬ್ಬಂದಿಗಳು ನನ್ನ ಕಪಾಳಕ್ಕೆ ಊದಿಕೊಳ್ಳುವಂತೆ ಹೊಡೆದಿದ್ದಾರೆ.

ಕಿವಿ ಮೇಲೆ ಹೊಡೆದಿದ್ದರಿಂದ ಕಿವಿ ಸ್ವಲ್ಪ ಕೇಳಿಸುತ್ತಿಲ್ಲ. ಒಳಗೆ ಕರೆದುಕೊಂಡು ಹೋಗಿ ಮತ್ತೆ ಹೊಡೆದಿದ್ದಾರೆ. ಮೊಬೈಲ್ ಕಿತ್ತುಕೊಂಡಿದ್ದರು. ಬಿಲ್ ಹಾಗೂ ವಾಹನದ ಚಾವಿ ಕಿತ್ತುಕೊಂಡು ಒಂದು ಗಂಟೆ ನಂತರ ನೀಡಿದ್ದಾರೆ. ನಂತರ ತಪ್ಪಾಯ್ತು ಎಂದು ಕಾಲಿಗೆ ಬೀಳುವಂತೆ ಹೇಳಿದ್ದಾರೆ. ಕಾಲಿಗೆ ಬಿದ್ದ ನಂತರ ನನ್ನನ್ನು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾನೆ.

ಬ್ಯೂರೋ ರಿಪೋರ್ಟ್, ವಿಸ್ಮಯ ನ್ಯೂಸ್

Exit mobile version