ಜಿಂಕೆ ಬೇಟೆಯಾಡಿ ಮಾಂಸ ಬೇಸಿಯುತ್ತಿದ್ದ ವೇಳೆ ದಾಳಿ: ಆರೋಪಿಗಳು ಅರೆಸ್ಟ್

ಜೋಯಿಡಾ: ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ಅರಣ್ಯದ ಯರಮುಖ ಭಾಗದಲ್ಲಿ ಜಿಂಕೆ ಬೇಟೆಯಾಡಿ ಅದರ ಮಾಂಸ ಮತ್ತು ಚರ್ಮವನ್ನು ಬೇಯಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖ ನಿವಾಸಿ ನಾರಾಯಣ ದಬ್ಬಾರ, ಮಹದೇವ ದಬ್ಬಾರ, ಅನಂತ ಎಲ್ಲೆಕರ, ದೀಪಕ ವಸಂತ ನಾಯ್ಕ ಜಿಂಕೆ ಬೇಟೆಯಾಡಿ ಅದರ ಮಾಂಸವನ್ನು ತಮ್ಮ ಮನೆಯ ಶೆಡ್ಡಿನಲ್ಲಿ ಬೇಯಿಸಿ ತಿನ್ನುವ ಸಂದರ್ಭದಲ್ಲಿ ಗುಂದ ವಲಯ ಅರಣ್ಯಾಧಿಕಾರಿ ನೀಲಕಂಠ ದೇಸಾಯಿ ಮತ್ತು ಸಿಬ್ಬಂದಿ ಅವರನ್ನು ಸೆರೆಹಿಡಿದಿದ್ದಾರೆ.

ತನ್ನ ಮೊಬೈಲ್ ಸ್ವಿಚ್ ಆಫ್ ಇದೆ ಎಂದು ಹೇಳಿ ಬೇರೆಯವರ ಮೊಬೈಲಿಂದ ಕರೆ ಮಾಡಿದ ಯುವಕ ನಾಪತ್ತೆ

ಈ ಸಂದರ್ಭದಲ್ಲಿ ನಾರಾಯಣ ದಬ್ಬಾರ ಮತ್ತು ದೀಪಕ ನಾಯ್ಕ ತಪ್ಪಿಸಿಕೊಂಡಿದ್ದು ಇತನನ್ನು ಬಂಧಿಸಲು ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಜಿಂಕೆ ಮಾಂಸ, ಬಕೆಟ್, ಮತ್ತು ಅಡಿಕೆ ಕಂಬಿಯನ್ನು ವಶಪಡಿಸಿಕೊಳ್ಳಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version