ಕುಮಟಾ ಧಾರೇಶ್ವರದ ವ್ಯಕ್ತಿ ಕರೊನಾದಿಂದ ಸಾವು

ಭಯ ಬೇಡ, ಇರಲಿ ಮುನ್ನೆಚ್ಚರಿಕೆ

ಮುರ್ಡೇಶ್ವರದಲ್ಲಿ ಎದೆನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿ ಮನೆಗೆ ಮರಳಲೇ ಇಲ್ಲ
ಸೋಂಕಿನ ಲಕ್ಷಣ ಕಂಡುಬoದರೆ ಕೂಡಲೇ ಟೆಸ್ಟ್ ಮಾಡಿಸಿಕೊಳ್ಳಿ

[sliders_pack id=”1487″]

ಕುಮಟಾ: ತಾಲೂಕಿನ ಧಾರೇಶ್ವರದ 40 ವರ್ಷದ ನಿವಾಸಿಯೊಬ್ಬರು ಕರೊನಾದಿಂದ ಮೃತಪಟ್ಟಿದ್ದಾರೆ. ಈತನು ಕಿಡ್ನಿ ವೈಫಲ್ಯದಿಂದ ಹೊನ್ನಾವರದ ಖಾಸಗಿ ಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾನೆ. ಮೃತಪಟ್ಟ ಬಳಿಕ ಕರೊನಾ ಟೆಸ್ಟ್ ಮಾಡಿದಾಗ ಕರೊನಾ ಇರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಅಧಿಕಾರಿಗಳ ಸೂಚನೆ ಮೇರೆಗೆ ಶವವನ್ನು ಕರೊನಾ ನಿಯಮಾನುಸಾರ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಎದೆನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿ ಮನೆಗೆ ಮರಳಲೇ ಇಲ್ಲ


ಭಟ್ಕಳ: ತಾಲೂಕಿನ ಶಿರಾಲಿಯ 36 ವರ್ಷದ ವ್ಯಕ್ತಿಯೊಬ್ಬರು ಎದೆ ನೋವಿನಿಂದ ಮುರ್ಡೇಶ್ವರದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಳಿಕ ಟೆಸ್ಟ್ ಮಾಡಿಸಿದಾದ ಕರೊನಾ ಇರುವುದು ದೃಢಪಟ್ಟಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ನೆರವಿನೊಂದಿಗೆ ರಕ್ಷಣಾ ಕಿಟ್ ಗಳನ್ನು ಧರಿಸಿ ಕುಟುಂಬದ ಸದಸ್ಯರು ಅಂತ್ಯ ಸಂಸ್ಕಾರ ನೆರವೇರಿಸಿದರು.


ಶಿರಸಿ: ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಅತಿಹೆಚ್ಚು ಪ್ರಕರಣ ದಾಖಲಾಗುತ್ತಿತ್ತು. ಆದರೆ, ಮಂಗಳವಾರ ತಾಲೂಕಿನ ಜನರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ನಾಲ್ವರಿಗೆ ಮಾತ್ರ ಕರೊನಾ ಪಾಸಿಟಿವ್ ಬಂದಿದೆ. ಇದೇ ವೇಳೆ ಇದುವರೆಗೂ 407 ಜನರು ತಾಲೂಕಿನಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಯಲ್ಲಾಪುರದಲ್ಲಿ 7 ಜನರಿಗೆ ಸೋಂಕು ಧೃಢ

ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ ಮತ್ತೆ 7 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 367 ಕ್ಕೆ ಏರಿಕೆಯಾಗಿದೆ. ದೇಹಳ್ಳಿ, ಕೃಷ್ಣಗದ್ದೆ, ಚವಳಿಸರ, ಕೋಳಿಕೇರಿ, ಸಬಗೇರಿ, ಉದ್ಯಮನಗರ ಹಾಗೂ ಕಾಳಮ್ಮನಗರದಲ್ಲಿ ತಲಾ ಒಬ್ಬರಿಗೆ ಸೋಂಕು ಧೃಢಪಟ್ಟಿದೆ. ಮಂಗಳವಾರ ಒಟ್ಟು 207 ಜನರಿಗೆ ತಪಾಸಣೆ ಮಾಡಲಾಗಿದ್ದು, 94 ಜನರಿಗೆ ನೆಗೆಟಿವ್, 7 ಜನರಿಗೆ ಪಾಸಿಟಿವ್ ಬಂದಿದೆ.


ಒಟ್ನಲ್ಲಿ ಕರೊನಾ ಕಬಂದ ಬಾವು ದಿನೇ ದಿನೇ ಎಲ್ಲೆಡೆ ಬಿಗಿಗೊಳ್ಳುತ್ತಿದ್ದು, ಸಾರ್ವಜನಿಕರು ಆದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕಿದೆ. ಅಲ್ಲದೆ, ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೇ ಕೂಡಲೇ ಟೆಸ್ಟ್ ಮಾಡಿಸಿಕೊಂಡು, ಆಪತ್ತಿನಿಂದ ಪಾರಾಗಬೇಕಿದೆ.


ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Exit mobile version