ಲಾರಿ ಚಾಲಕನ ಮೇಲೆ ದೌರ್ಜನ್ಯ: ಇಬ್ಬರ ಅಮಾನತು

ಕಾರವಾರ: ಗೋವಾ ಗಡಿಭಾಗದ ಮಾಜಾಳಿಯಲ್ಲಿ ಲಾರಿ ಚಾಲಕರು ಪ್ರತಿಭಟಿಸಿದ ಹಿನ್ನಲೆ ಸರ್ಕಾರ ಲಾರಿ ಚಾಲಕನ ಮೇಲೆ ದೌರ್ಜನ್ಯ ನಡೆಸಿದ ಇಬ್ಬರು ನೌಕರರನ್ನು ಅಮಾನತು ಮಾಡಿದೆ. ಅಕ್ಟೊಬರ್ 15ರಂದು ಮಂಡ್ಯದ ಲಾರಿ ಚಾಲಕನ ಮೇಲೆ ಅಬಕಾರಿ ನಿರೀಕ್ಷಕ ಸದಾಶಿವ ಕುರ್ತೆ ಹಾಗೂ ಅಬಕಾರಿ ಪೇದೆ ಹೇಮಚಂದ್ರ ದಬ್ಬಾಳಿಕೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

20 ಕ್ವಿಂಟಲ್ ಅಡಿಕೆ ಕಳ್ಳತನ: ಆರೋಪಿಯ ಬಂಧನ

ಲಾರಿ ಚಾಲಕ ಕುಮಾರ ಅವರ ಕಿವಿ ಪರದೆ ಒಡೆದಿದ್ದು, ದೌರ್ಜನ್ಯದ ಬಗ್ಗೆ ಕುಮಾರ್ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ವಿವಿಧ ಸಂಘಟನೆಯವರು ಲಾರಿ ಚಾಲಕನ ಬೆಂಬಲಕ್ಕೆ ನಿಂತಿದ್ದರು. ಅಬಕಾರಿ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದಾದ ನಂತರ ಇಬ್ಬರು ನೌಕರರನ್ನು ಅಬಕಾರಿ ಇಲಾಖೆ ಬೇರೆ ಕಡೆ ವರ್ಗಾವಣೆ ಮಾಡಿತ್ತು.

ಅಕ್ಟೊಬರ್ 21ರಂದು ಮಾಜಾಳಿ ಗಡಿಯಲ್ಲಿ ಲಾರಿ ಚಾಲಕ ಸಂಘದವರು ಪ್ರತಿಭಟನೆ ನಡೆಸಿ ಹೆದ್ದಾರಿ ತಡೆ ಮಾಡಿದರು. ಇದರ ಬೆನ್ನಲ್ಲೆ ತಪ್ಪಿತಸ್ಥ ಇಬ್ಬರನ್ನು ಅಬಕಾರಿ ಇಲಾಖೆ ಅಮಾನತು ಮಾಡಿದೆ. ಕರ್ತವ್ಯಲೋಪದ ಕಾರಣ ನೀಡಿ ಅಬಕಾರಿ ಆಯುಕ್ತ ಇಬ್ಬರನ್ನು ಅಮಾನತು ಆದೇಶ ಹೊರಡಿಸಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version