ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರ ರಕ್ಷಣೆ

ಗೋಕರ್ಣ: ಸಮುದ್ರದ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ವಿದೇಶಿ ಹಾಗೂ ಸ್ವದೇಶಿ ಪ್ರವಾಸಿಗರು ಸೇರಿ ಒಟ್ಟು ನಾಲ್ಕು ಜನರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ನಡೆದಿದೆ. ರಷ್ಯಾ ದೇಶದ ಮಹಿಳೆ ಜೈನ್, ಬೆಂಗಳೂರಿನ ನಿವಾಸಿಗಳಾದ ಎಬಿನ್ ಡೇವಿಶ್, ಮಧುರಾ ಅಗ್ರವಾಲ್, ರಮ್ಯಾ ವೆಂಕಟ್ರಮಣ ರಕ್ಷಣೆಗೆ ಒಳಗಾದ ಪ್ರವಾಸಿಗರಾಗಿದ್ದಾರೆ.

ಅತಿವೇಗ ತಂದ ಅವಾಂತರ: ರಸ್ತೆ ಪಕ್ಕದ ಸಿಮೆಂಟ್ ಕಟ್ಟೆಗೆ ಡಿಕ್ಕಿಯಾಗಿ ಕಾರು ಚಾಲಕ ಸಾವು

ಬೆಂಗಳೂರಿನ ಮೂವರು ಪ್ರವಾಸಿಗರು ಇಲ್ಲಿಗೆ ಪ್ರವಾಸಕ್ಕೆ ಬಂದಿದ್ದು, ಒಟ್ಟಾಗಿ ಸಮುದ್ರದಲ್ಲಿ ಆಟವಾಡಲು ತೆರಳಿದ್ದಾರೆ. ಇವರಿಗೆ ವಿದೇಶಿ ಮಹಿಳೆ ಜೊತೆಯಾಗಿದ್ದಾರೆ. ಹೀಗೆ ಈಜಾಡುತ್ತಿದ್ದ ವೇಳೆ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಕುರ್ಲೆ, ಮಂಜುನಾಥ ಹರಿಕಂತ್ರ, ಪ್ರವಾಸಿ ಮಿತ್ರ ಸಿಬ್ಬಂದಿ ಶೇಖರ ಹರಿಕಂತ್ರ ತಕ್ಷಣ ರಕ್ಷಣಾ ಕಾರ್ಯಕ್ಕೆ ಇಳಿದಿದ್ದು, ಇವರಿಗೆ ಮೈಸ್ಟಿಕ್ ಗೋಕರ್ಣ ಅಡ್ಡೆಂಚರ್ಸ್ನವರಿAದ ಕಾರ್ಯಾಚರಣೆಗೆ ಸಹಾಯ ಮಾಡಿದೆ. ರಭಸದ ಅಲೆಯ ನಡುವೆಯೂ ಹರಸಾಹಸ ಮಾಡಿ ಪ್ರವಾಸಿಗರ ಜೀವ ಉಳಿಸಿ ದಡಕ್ಕೆ ತಂದಿದ್ದಾರೆ. ಜೀವರಕ್ಷಕ ಸಿಬ್ಬಂದಿ ಹಾಗೂ ರಕ್ಷಣಾ ಕಾರ್ಯಕ್ಕೆ ಸಹಕರಿಸಿದವರಿಗೆ ಸಾರ್ವಜನಿಕರು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Exit mobile version