ಮುಂಡಗೋಡ: ಪಟ್ಟಣದ ಮಾರಿಕಾಂಬಾ ನಗರ ಅಂಗನವಾಡಿ ಕೇಂದ್ರದಲ್ಲಿ ವಿಷಪೂರಿತ ಹಾವೊಂದು ಅಂಗನವಾಡಿ ಮಗುವಿಗೆ ಕಚ್ಚಿ ಮಗು ಮೃತಪಟ್ಟಿದೆ. ಮಯೂರಿ ಸುರೇಶ ಎಂಬ ಬಾಲಕಿಯೇ ಸಾವನ್ನಪ್ಪಿದ ಮಗು. ಎಂದಿನoತೆ ಬೆಳಿಗ್ಗೆ ಅಂಗನವಾಡಿಗೆ ಹೋಗಿದ್ದ ಮಗು ಹೊರಗೆ ಬಂದು ಮೂತ್ರ ವಿಸರ್ಜನೆ ಮಾಡುವಾಗ ಮಗುವಿನ ಕಾಲಿಗೆ ಹಾವು ಕಚ್ಚಿದೆ. ವಿಷಯ ತಿಳಿದು ಸ್ಥಳೀಯರೆಲ್ಲರೂ ಸೇರಿ ಮುಂಡಗೋಡ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದರು.
ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತ್ತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗುವಿನ ಪ್ರಾಣ ಹೋಗಿತ್ತು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮುಂಡಗೋಡ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ವಿಸ್ಮಯ ನ್ಯೂಸ್, ಮುಂಡಗೋಡ