ಜಾತ್ರೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಡಿಕ್ಕಿ ಹೊಡೆದ ಅಪರಿಚಿತ ವಾಹನ: ವ್ಯಕ್ತಿ ಸ್ಥಳದಲ್ಲೇ ಸಾವು

ಹೊನ್ನಾವರ: ಇಲ್ಲಿನ ಶರಾವತಿ ಸೇತುವೆ ಮೇಲೆ ಬೆಳಗಿನ ಜಾವ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಗೋಕರ್ಣ ಸಾಣಿಕಟ್ಟೆ ಹತ್ತಿರದ ತೊರೆಗಜನಿಯ ಗಣಪತಿ ರಾಮದಾಸ ಹರಿಕಂತ್ರ ಮೃತ ಬೈಕ್ ಸವಾರ. ಈತನು ಮಾವನ ಮನೆಯ ಮಂಕಿ ಜಾತ್ರೆಯನ್ನು ಮುಗಿಸಿ ಮರಳಿ ಮನೆಗೆ ಹೋಗುತ್ತಿರುವಾಗ ಶರಾವತಿ ಸೇತುವೆ ಮೇಲೆ ಅಪರಿಚಿತ ವಾಹನ ಬಡಿದು ಸಾವನ್ನಪ್ಪಿದ್ದಾನೆ.

ಹೊನ್ನಾವರದ ಶರಾವತಿ ಸೇತುವೆಯಲ್ಲಿ ದಿನದಿಂದ ದಿನಕ್ಕೆ ಅಪಘಾತ ಹೆಚ್ಚುತ್ತಿದ್ದು, 15 -20 ದಿನದ ಹಿಂದೆ ಕಾರು ಹಾಗೂ ಬೈಕ್ ನಡುವೆ ಅಪಘಾತವಾಗಿ ಹಳದೀಪುರದ ಯುವತಿ ಮೃತಪಟ್ಟಿದ್ದಳು. ಒಂದುವರೆ ತಿಂಗಳ ಹಿಂದೆ ಇದೇ ಸೇತುವೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತವಾಗಿ ಮೂವರು ಯುವಕರು ಪ್ರಾಣಕಳೆದುಕೊಂಡಿದ್ದರಯ. ಎರಡು ವರ್ಷದ ಹಿಂದೆ ಇಬ್ಬರು ಬೈಕ್ ಸವಾರರು ನದಿಗೆ ಬಿದ್ದು, ಓರ್ವ ಮೃತಪಟ್ಟಿದ್ದ. ಇತ್ತೀಚಿಗೆ ಈ ಸೇತುವೆ ಅಪಘಾತದ ಸ್ಪಾಟ್ ಆಗುತ್ತಿದೆ.

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Exit mobile version