ಅಂಕೋಲಾ : ಕಳೆದ 8 ವರ್ಷಗಳಿಂದ ತಾನು ಪ್ರೀತಿಸಿ, ಸದ್ಯವೇ ಮದುವೆ ಆಗಬೇಕೆಂದಿದ್ದ ಹುಡುಗಿ ಕಳೆದ ಸುಮಾರು 20 ದಿನಗಳಿಂದ ತನ್ನನ್ನು ದೂರ ಮಾಡುತ್ತಿದ್ದಾಳೆ ಎಂದು ನೊಂದ (ಭಗ್ನ ) ಪ್ರೇಮಿಯೊಬ್ಬ ಡೆತ್ ನೋಟ್ ಬರೆದಿಟ್ಟು ಹುಡುಗಿಯ ಊರಾದ ಬೆಳಸೆ- ಚಂದುಮಠ ಬಳಿಯೇ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಅತ್ಮಹತ್ಯಗೆ ಶರಣಾದ ಹೃದಯ ವಿದ್ರಾವಕ ಘಟನೆ ತಾಲೂಕಿನ ಗ್ರಾಮೀಣ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸಂತು ವಾಸರ – ಕುದ್ರಗಿ ವ್ಯಾಪ್ತಿಯ ಮೇಲಿನಗುಳಿ ನಿವಾಸಿ ಸಂತೋಷ ರೂಪಾ ಗೌಡ (29) ಈತನೇ ಮೃತ ದುರ್ದೈವಿ ಯುವಕನಾಗಿದ್ದಾನೆ.
ಅಜಾನು ಬಾಹು ವ್ಯಕ್ತಿತ್ವದ ಈತ ಪಕ್ಕದ ಜಿಲ್ಲೆಯ ಸೀ ಪುಡ್ ಫ್ಯಾಕ್ಷರಿಯಲ್ಲಿಯೂ ಕೆಲಸ ಮಾಡಿಕೊಂಡು ಸ್ಥಿತಿವಂತ ಹಾಗೂ ಗುಣವಂತನಾಗಿದ್ದ ಎನ್ನುತ್ತಾರೆ ಸ್ಥಳೀಯರು. ಮೃತ ಸಂತು ಗೌಡ ತನ್ನ ಸಾವಿನ ಕುರಿತು ಡೆತ್ ನೋಟ್ ಬರೆದಿಟ್ಟು, ಸಂತು ಆರ್ ನಾನು ಸಾವುತ್ತಿದ್ದೇನೆ. ಕಾರಣ ನಾನು love ಮಾಡಿದ್ದ ಹುಡುಗಿ ಈಗ ನನಗೆ ಬಿಡುತ್ತೇನೆ ಎಂದು ಹೇಳುತ್ತಾಳೆ. ನಾನು love ಮಾಡಿ 8 ವರ್ಷ ಆಯಿತು. ಈಗ ನಾನು ಮೇ ತಿಂಗಳಲ್ಲಿ ಮದುವೆ ಆಗಬೇಕಾಗಿತ್ತು.
ಈಗ ನಂಗೆ ಈ ತರ ಮಾಡಿದ್ರು. ನಾನು 8 ವರ್ಷ ಆಯಿತು Love ಮಾಡಿ ಎಲ್ಲಾ ನನ್ನ ಫ್ರೆಂಡ್ಸ್ ಹಾಗೂ ಎಲ್ಲಾ ಊರಿಗೂ ಗೊತ್ತು, ಆದರೆ ಇವಾಗ ನಂಗೆ ಇತರ ಮಾಡಿದ್ರು, ನಂಗೆ 20 ದಿನ ಆಯ್ತು ಇತರ ಮಾಡಿ. ನನ್ನ ಪರಿಸ್ಥಿತಿ ಯಾರಿಗು ಬೇಡ ಯಾರತ್ರ ನು ಹೇಳುಗಾಗದೆ ಇದ್ದೆ. ನಂಗೆ ಊಟನು ಸೇರುದಿಲ್ಲಾ ನಿದ್ದೆನು ಬರುದಿಲ್ಲ . ನನ್ನಿಂದ ಬೇಜಾರ ಆದರೆ ಫ್ರೆಂಡ್ಸ್ ತಪ್ಪಾಯ್ತು . ನಮ್ಮ ಅಣ್ಣಂದಿರಿಗೆ ಹೇಳುತ್ತೆನೆ ಅಮ್ಮನನ್ನು ಚೆನ್ನಾಗಿ ನೋಡಿ ಕೊಳ್ಳಿ ಅಣ್ಣ. ನನ್ನ ಪರಿಸ್ಥಿತಿ ಯಾರಿಗೂ ಬರುದು ಬೇಡ ನನ್ನ ಸಾವು ಎಲ್ಲಾ Lovers ಗೂ ಗುತ್ತಾಗಬೇಕು ಎಲ್ಲರಿಗೂ ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ. .
ಪ್ರೇಮಿಗಳ ದಿನವೆನಿಸಿದ ಫೆ 14 ಕಳೆದು ಒಂದು ವಾರವೂ ಆಗಿರದ ಈ ದಿನ ಪ್ರೇಮಿಯೊಬ್ಬ ಬರೆದ ಈ ಡೆತ್ ನೋಟ್ ಪ್ರೇಮ ಪಕ್ಷಿಗಳ ಕಣ್ಣು ತೆರೆಸಿತೇ ಅಥವಾ ಪ್ರೀತಿ ಕುರುಡು ಎಂಬ ಮಾತು ನಿಜವೇ ಎಂದು ಅವರ ವರೇ ಪರಾಮರ್ಶಿ ಸಿಕೊಳ್ಳಬೇಕಿದೆ. ಪ್ರೀತಿ – ಪ್ರೇಮ , ಅಥವಾ ಇತರೆ ಯಾವುದೇ ಸಮಸ್ಯೆ , ನೋವು , ತೊಂದರೆಗಳಿದ್ದರೂ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ ಎಂಬ ಸತ್ಯ ಎಲ್ಲರೂ ಮನಗಾಣಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ