
ಹೊನ್ನಾವರ: ತಾಲೂಕಿನ ಗುಣವಂತೆಯ ಶ್ರೀ ಶಂಭುಲಿoಗೇಶ್ವರ ದೇವರ ಮಹಾರಥೋತ್ಸವವು ಸಹಸ್ರಾರು ಸಂಖ್ಯೆಯ ಭಕ್ತಸಾಗರದ ನಡುವೆ ವಿಜೃಂಭಣೆಯಿoದ ನಡೆಯಿತು. ಪಂಚಲಿoಗ ಕ್ಷೇತ್ರಗಳಲ್ಲೊಂದಾದ ಗುಣವಂತೆಯ ಶ್ರೀ ಶಂಭುಲಿoಗೇಶ್ವರ ದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವರ ಪ್ರಾರ್ಥನೆಯೊಂದಿಗೆ ನಡೆದವು. ಭಕ್ತರು ಶ್ರೀ ದೇವರಿಗೆ ಹಣ್ಣು-ಕಾಯಿ ಸೇವೆ, ಅಭಿಷೇಕ, ಅರ್ಚನೆ ಇನ್ನಿತರ ಸೇವೆಗಳನ್ನು ಸಲ್ಲಿಸಿದರು. ಸಂಜೆ ಸಾವಿರಾರು ಭಕ್ತರ ಸಮ್ಮಖದಲ್ಲಿ ಸಡಗರದಿಂದ ರಥಾರೋಹಣ ನಡೆಯಿತು.
ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ನರಸಿಂಹ ಪಂಡಿತ ಮಾತನಾಡಿ,, ರಥೋತ್ಸವಕ್ಕೆ ನಾನಾ ಕಡೆಯಿಂದ ಭಕ್ತರು ಬಂದು ಶ್ರೀದೇವರಿಗೆ ಸೇವೆಗಳನ್ನ ನೀಡುತ್ತಾರೆ. ಈ ದೇವಸ್ಥಾನ ಶಕ್ತಿ ಸ್ಥಳವಾಗಿದೆ ಎಂದರು.
ದೇವಸ್ಥಾನದ ಉಫಾಧ್ಯಕ್ಷರಾದ ಎಮ್.ಎಸ್.ಹೆಗಡೆ ಮಾತನಾಡಿ ಪುರಾಣ ಪ್ರಸಿದ್ಧ ಕ್ಷೇತ್ರದಲ್ಲಿ ನಾಡಿನಾದ್ಯಂತ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿದ್ದಾರೆ.
ಇಲ್ಲಿಯ ಕೋಳದಲ್ಲಿ ಸ್ನಾನ ಮಾಡಿ, ನವಧಾನ್ಯಗಳನ್ನು ಅರ್ಪಿಸಿದರೇ ಚರ್ಮರೋಗ ನಿವಾರಣೆಯಾಗಿರುವುದು ಸಾಕಷ್ಟು ಉದಾಹರಣೆಗಳಿದ್ದು, ಭಕ್ತರ ಬೇಡಿಕೆಯನ್ನು ಈಡೇರಿಸುವ ಶಕ್ತಿ ಸ್ಥಳವಾಗಿದೆ ಎಂದು ತಿಳಿಸಿದರು. ಬೇರೆ ಬೇರೆ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಜಾತ್ರಾ ಮಹೋತ್ಸವವನ್ನು ಕಣ್ತುಂಬಿಕೊoಡರು. ಜಾತ್ರೆಯ ನಿಮಿತ್ತ ವಿವಿಧ ಸಿಹಿಖಾದ್ಯ ಅಂಗಡಿಗಳು, ಮಕ್ಕಳ ಆಟಿಕೆ ಸಾಮಾನುಗಳ ಅಂಗಡಿಗಳು ಸೇರಿದಂತೆ ಇನ್ನಿತರ ಅಂಗಡಿಗಳ ವ್ಯಾಪಾರ ವಹಿವಾಟುಗಳು ಜೋರಾಗಿದ್ದವು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ