ಭಟ್ಕಳದಲ್ಲಿ ಏಂಪೈರ್ ಫ್ಯಾಮೀಲಿ ರೆಸ್ಟೊರೆಂಟ್ ಶುಭಾರಂಭ : ಸೀ ಪುಡ್, ಇಂಡಿಯನ್ ಹಾಗೂ ಚೈನಿಸ್ ಫುಡ್ ಸೇರಿ ವಿವಿಧ ಖಾದ್ಯ ಲಭ್ಯ

ಭಟ್ಕಳ: ನನ್ನ ಅವಧಿಯಲ್ಲಿ ಭಟ್ಕಳದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣವಾಯಿತು, ಬಸ್ ಡಿಪೋವನ್ನು ಸಾಗರ ರಸ್ತೆಗೆ ಸ್ಥಳಾಂತರ ಮಾಡಿದ್ದರಿಂದ ಹಳೇ ಬಸ್ ನಿಲ್ದಾಲಣವಿದ್ದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಆಯಿತು. ಇದರಿಂದಾಗಿ ನೂರರಿಂದ ನೂರಾ ಐವತ್ತು ಜನರಿಗೆ ಕೆಲಸ ಸಿಗುವಂತಾಯಿತು ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಭಟ್ಕಳದ ಹೃದಯ ಭಾಗವಾದ ಬಸ್ ಸ್ಟ್ಯಾಂಡ್ ಹತ್ತಿರವಿರುವ ಸೀತಾರಾಮ ಸೌಧದಲ್ಲಿ ವಿನೂತನವಾಗಿ ಆರಂಭವಾದ ಏಂಪೈರ್ ಫ್ಯಾಮೀಲಿ ರೆಸ್ಟೊರೆಂಟ್ ಉದ್ಘಾಟಿಸಿ ಮಾತನಾಡಿದ ಅವರು, ಉಧ್ಯಮಿ ವಿಠ್ಠಲ್ ನಾಯ್ಕ ದೈರ್ಯ ಮಾಡಿ ಈ ಕಟ್ಟಣ ನಿಮಾಣ ಮಾಡಿದರು. ಆದರೆ ಕೆಲವರು ಯಾರಾದರೂ ಏನಾದರೂ ಮಾಡಿದರೆ ಅದನ್ನ ಅನವಶ್ಯಕವಾಗಿ ವಿರೋಧಿಸುತ್ತಾರೆ. ಅದರಿಂದ ಜನರಿಗಾಗುವ ಲಾಭವನ್ನು ಯೋಚನೆ ಮಾಡುವುದಿಲ್ಲ. 150 ಜನರ ಜೀವನೋಪಾಯಕ್ಕೆ ದಾರಿ ಮಾಡಿಕೊಡುವುದು ಪುಣ್ಯದ ಕೆಲಸ. ಈಗ ಪ್ರಾರಂಭವಾಗಿರುವ ಹೊಟೇಲ್ ಉಧ್ಯಮವು ಯಶಸ್ವಿ ಕಾಣಲಿ ಎಂದು ಹಾರೈಸಿದರು.
ಅಂದಹಾಗೇ ಕುಂದಾಪುರದ ಯುವ ಉಧ್ಯಮಿ ಅಜೀಮ್ ಭಟ್ಕಳದಲ್ಲಿ ನೂತನ ಹೊಟೇಲ್ ಪ್ರಾರಂಭಿಸಿದ್ದು ಅತ್ಯಂತ ಆಕರ್ಷಕವಾಗಿ ಹೊಟೇಲ್ ಒಳಾಂಗಣ ವಿನ್ಯಾಸ ಮಾಡಿದ್ದು ಹೊಸ ಹೊಟೇಲ್ ನಲ್ಲಿ ಸೀ ಪುಡ್, ಇಂಡಿಯನ್ ಹಾಗೂ ಚೈನಿಸ್ ಫುಡ್ ಸೇರಿದಂತೆ ನಾನ್ ವೇಜ್ ಆಹಾರ ಲಭ್ಯವಿದೆ. ಕಾರ್ಯಕ್ರಮದಲ್ಲಿ ತಜಿಂ ಅಧ್ಯಕ್ಷ ಇನಾಯ್ ಉಲ್ ಶಾಬಂದ್ರಿ, ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಕುಂದಾಪುರ ಪುರಸಭೆ ಸದಸ್ಯ ಮನ್ಸೂರ್ ಇಬ್ರಾಹಿಂ, ಭಟ್ಕಳ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಅರುಣ್ ನಾಯ್ಕ, ಜಾಲಿ ಪಟ್ಟಣ ಪಂಚಾಯತ್ ಸದಸ್ಯ ರಮೇಶ ನಾಯ್ಕ ಮತ್ತಿತರರು ಇದ್ದರು.
ವಿಸ್ಮಯ ನ್ಯೂಸ್, ಈಶ್ವರ ನಾಯ್ಕ ಭಟ್ಕಳ