ಶಿರಸಿಯಲ್ಲಿ ಮಾಸ್ಕ ಧರಿಸದೆ ಓಡಾಡಿದ್ರೆ ಹುಷಾರ್

ಅಧಿಕಾರಿಗಳ ಕಾರ್ಯಾಚರಣೆ
ನೂರಕ್ಕೂ ಅಧಿಕ ಪ್ರಕರಣ ದಾಖಲು
ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ

ಶಿರಸಿ: ತಾಲೂಕಿನಲ್ಲಿ ಕರೊನಾ ರ‍್ಭಟ ಮುಂದುವರಿದಿದೆ. ಹೀಗಾಗಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮರ‍್ಗಸೂಚಿಯನ್ನು ಪಾಲಿಸದೆ , ಮಾಸ್ಕ ಧರಿಸದೇ ಓಡಾಡುವ ಸಾರ್ವಜನಿಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.


ನಗರಸಭೆಯ ಸ್ವಚ್ಛತಾ ನಿರೀಕ್ಷಕ ಆರ್ ಎಂ ವರ್ಣೇಕರ್ ಹಾಗೂ ನಗರ ಠಾಣೆ ಪಿಎಸ್ಐ ಶಿವಾನಂದ ನಾವದಗಿ ಮತ್ತು ಮಾರುಕಟ್ಟೆ ಠಾಣೆ ಪಿಎಸ್ಐ ನಾಗಪ್ಪ ನೇತೃತ್ವದ ತಂಡ ನಗರದ ಬಿಡ್ಕಿ ಬೈಲ್, ಸಿ.ಪಿ.ಬಜಾರ್, ದೇವಿಕೆರೆ, ಅಶ್ವಿನಿ ವೃತ್ತ ಇತರ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿ ಮಾಸ್ಕ ಧರಿಸದೇ ತಿರುಗಾಡುತ್ತಿದ್ದ ಸಾರ್ವಜನಿಕರ ಮೇಲೆ 100 ಕ್ಕೂ ಹೆಚ್ಚು ಪ್ರಕರಣ ದಾಖಲಿಸಿ 15 sಸಾವಿರಕ್ಕೂ ಅಧಿಕ ದಂಡವನ್ನು ವಸೂಲಿ ಮಾಡಿದ್ದಾರೆ.


ರ‍್ಕಾರದ ಮರ‍್ಗಸೂಚಿಯಂತೆ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ನಿರ್ಲಕ್ಷತೆ ವಹಿಸಿ ರೋಗ ಹರಡಲು ಕಾರಣರಾದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮೆಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ ಡಿಎಸ್ಪಿ ಗೋಪಾಲಕೃಷ್ಣ ನಾಯಕ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Exit mobile version