ಮಾಹಿತಿ
Trending

ತೋಟಕ್ಕೆ ಹಾಕಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಬಾಲಕಿ ಪಾಲಕರಿಗೆ ಸಿಎಂ ಪರಿಹಾರ ನಿಧಿ

  • 3 ಲಕ್ಷ ಮಂಜೂರಿ ಮಾಡಿಸಿದ ಶಾಸಕ ಸುನೀಲ್ ನಾಯ್ಕ
  • ಪಾಲಕರಿಗೆ ಹಸ್ತಾಂತರ

ಭಟ್ಕಳ: ಕಳೆದ ವರ್ಷ ತೋಟಕ್ಕೆ ಹಾಕಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಬಾಲಕಿ ಮನೆಗೆ ಶಾಸಕ ಸುನೀಲ ನಾಯ್ಕ ತೆರಳಿ 3 ಲಕ್ಷರೂ ಬ್ಯಾಂಕ್ ಖಾತೆಗೆ ಜಮಾ ಆದ ಕುರಿತು ದೃಢೀಕರಣ ಪತ್ರ ನೀಡಿ ಸಾಂತ್ವಾನ ಹೇಳಿದರು.


2019ರ ಜೂನ್ 1 ರಂದು ಕಾರಗದ್ದೆ ನಿವಾಸಿ ಖುಷಿ ಈಶ್ವರ ನಾಯ್ಕ(6) ಈಕೆ ಮನೆಯ ಪಕ್ಕದಲ್ಲಿದ್ದ ತೋಟಕ್ಕೆ ಆಟವಾಡಲು ತೆರಳಿದ್ದಳು. ಕಾಡು ಪ್ರಾಣಿಗಳು ಬರಬಾರದೆಂದು ತೋಟಕ್ಕೆ ಐಬಿಎಕ್ಷ ಮೂಲಕ ವಿದ್ಯುತ್ ಸಂಪರ್ಕ ನೀಡಲಾದ. ತಂತಿ ಸ್ಪರ್ಶಿಸಿದ ಮಗು ತೋಟದಲ್ಲಿ ಹರಿಯುವ ನೀರಿನ ಸಂಪರ್ಕಕ್ಕೆ ಬಂದಿದ್ದು ವಿದ್ಯುತ್ ಶಾಕ್ ಬಲವಾಗಿ ತಗುಲಿದೆ. ಅದನ್ನು ನೋಡಿದ ಸ್ಥಳೀಯರು ಮಗವನ್ನು ವಿದ್ಯುತ್ ಸಂಪರ್ಕದಿoದ ತಪ್ಪಿಸಿ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿತ್ತು.


ಈ ಹಿನ್ನಲೆಯಲ್ಲಿ ಶಾಸಕ ಸುನೀಲ ನಾಯ್ಕ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 3 ಲಕ್ಷ ಹಣವನ್ನು ಮಂಜೂರಿ ಮಾಡಿಸಿ ಬಾಲಕಿ ತಂದೆಯ ಖಾತೆಗೆ ಜಮಾ ಮಾಡಿಸಿದ ಕುರಿತು ಧೃಢೀಕರಣ ಪತ್ರ ನೀಡಿ ಸಾಂತ್ವಾನ ಹೇಳಿದ್ದಾರೆ.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Back to top button