Join Our

WhatsApp Group
Important
Trending

ಕೆರೆ ಮೀನು ಬೇಟೆ: ಗಮನಸೆಳೆದ ಒಂಬತ್ತು ಕೆ.ಜಿಗೂ ಹೆಚ್ಚು ತೂಕದ ಮೀನು

ಸಿದ್ದಾಪುರ: ತಾಲೂಕಿನ ಬೇಡ್ಕಣಿಯಲ್ಲಿ, ಬೇಡ್ಕಣಿ ಶನೀಶ್ವರ ದೇವಸ್ಥಾನದ ಎದುರಿಗಿರುವ ಕೆರೆಯಲ್ಲಿ ಮೀನು ಬೇಟೆಯಾಡಿ ವ್ಯಾಪಾರಕ್ಕೆ ಇಡಲಾಗಿತ್ತು. ತಾಜಾ ಮೀನುಗಳು ಸಿಗುತ್ತವೆ ಎಂದು ತಿಳಿದು ಜನರು ಒಬ್ಬರನೊಬ್ಬರು ನೂಕುತ್ತ ತಳ್ಳುತ್ತ ಮುಗಿಬಿದ್ದು ಮೀನುಗಳನ್ನ ಖರೀದಿಸಿದರು . ಈ ವೇಳೆ ಒಂಬತ್ತು ಕೆ ಜಿ ಗೂ ಹೆಚ್ಚಿಗೆ ತೂಕದ ಮೀನು ಬೇಟೆಯ ಸಂದರ್ಭದಲ್ಲಿ ಸಿಕ್ಕಿದ್ದು ಎಲ್ಲರ ಗಮನ ಸೆಳೆಯಿತು.

ಕೆರೆಯಲ್ಲಿ ಬೇಟೆಯ ವೇಳೆ ಒಂದು ಕೆಜಿಯಿಂದ ದೊಡ್ಡ ದೊಡ್ಡ ಮೀನುಗಳು ಸಿಕ್ಕಿದ್ದವು. ದೊಡ್ಡ ದೊಡ್ಡ ಮೀನುಗಳನ್ನ ಖರೀದಿಸಲು ಜನರು ಮುಗಿ ಬಿದ್ದಿದ್ದರು, ಕೆಜಿ ಗೆ 250 ರೂ ಗಳಂತೆ ಮಾರಾಟ ಮಾಡಲಾಯಿತು. ಹಲವರಿಗೆ ಮೀನುಗಳು ಖರೀದಿಸಲು ಸಿಗದೆ ನಿರಾಸೆಯಿಂದ ಹಿಂತಿರುಗಿದರು.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button