ಅಂಕೋಲಾದಲ್ಲಿ ಜಿಲ್ಲಾಮಟ್ಟದ ಇಂಜಿನೀಯರ್ಸ್ ಡೇ ಆಚರಣೆ

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ 160ನೇ ಜನ್ಮ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮ

[sliders_pack id=”3491″]

ಅಂಕೋಲಾ : ವಿಶ್ವದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ 160ನೇ ಜನ್ಮ ದಿನಾಚರಣೆ ಅಂಗವಾಗಿ ಅಸೋಸಿಯೇಶನ್ ಆಪ್ ಇಂಜಿನೀಯರ್ಸ್ ಮತ್ತು ನಾಗರಿಕ ವೇದಿಕೆ ಉತ್ತರ ಕನ್ನಡ ಇವರ ಆಶ್ರಯದಲ್ಲಿ ‘ಜಿಲ್ಲಾ ಮಟ್ಟದ ಇಂಜಿನೀಯರ್ಸ್ ಡೇ’ ಕಾರ್ಯಕ್ರಮವನ್ನು ಮಂಗಳವಾರ ಪಟ್ಟಣದ ಕಾಮತ್ ಪ್ಲಸ್ ಹೊಟೇಲ್‍ನ ಸಭಾಭವನದಲ್ಲಿ ಆಯೋಜಿಸಲಾಗಿತ್ತು.


ಉದ್ಘಾಟನೆ : ಜಿ.ಪಂ.ಕಾರವಾರದ ಕಾರ್ಯನಿರ್ವಹಕ ಅಭಿಯಂತರ ದಯಾನಂದ ಆರ್. ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಶ್ವೇಶ್ವರಯ್ಯನವರ ಮೇರು ವ್ಯಕ್ತಿತ್ವದ ಕುರಿತು ವಿವಿರಿಸಿ, ನಾವೆಲ್ಲರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.


ಮುಖ್ಯ ಅತಿಥಿಗಳು : ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಯಶ್ವಂತ ನಾಯ್ಕ, ಅಶೋಕ ಬಂಟ, ಹೆಸ್ಕಾಂ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಪ್ರವೀಣ ನಾಯ್ಕ, ಹೆಸರಾಂತ ಉದ್ಯಮಿ ಮಂಗಲದಾಸ ಕಾಮತ್, ಅಂಕೋಲಾ ಜಿ.ಪಂ. ಉಪ ವಿಭಾಗದ ಎಇಇ ಸಂಜೀವ ನಾಯಕ ಮತ್ತಿತರರು ಉಪಸ್ಥಿತರಿದ್ದರು.


ಅಧ್ಯಕ್ಷ : ಜಿಲ್ಲಾ ಇಂಜನೀಯರ್ಸ್ ಅಸೋಸಿಯೇಶನ ಅಧ್ಯಕ್ಷ ಹರಿಹರ ಹರಿಕಂತ್ರ ಹಿಲ್ಲೂರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಸಮಾಜಕ್ಕೆ ಅಮೂಲ್ಯವಾದ ಕೊಡುಗೆ ನೀಡುವ ಮೂಲಕ ಜೀವಿತಾವಧಿಯ ನಂತರವೂ ಸಮಾಜವು ನಮ್ಮನ್ನು ನೆನಪಿಸಿಕೊಳ್ಳುವಂತೆ ಕಾರ್ಯ ನಿರ್ವಹಿಸಬೇಕಲ್ಲದೇ, ಶ್ರೇಷ್ಠ ಸಾಧಕರ ಚಿಂತನೆಗಳನ್ನು ಮೈಗೊಡಿಸಿಕೊಳ್ಳುವಂತೆ ಕರೆ ನೀಡಿದರು.


ಸನ್ಮಾನ : ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ವಾಯ್.ನಾಯ್ಕ, ಆಶಾ ಕಾರ್ಯಕರ್ತೆ ತಾರಾ ಗೌಡ, ನೆರೆ ಸಂದರ್ಭದಲ್ಲಿ ದೋಣಿ ಚಲಾಯಿಸಿ ಜನರ ರಕ್ಷಣೆಗೆ ಸೇವೆ ನೀಡಿದ್ದ ತುಳಸು ಅಂಬಿಗ, ಶಿಕ್ಷಕ ಗಣಪತಿ ತಾಂಡೇಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಧಕರಿಗೆ ಸನ್ಮಾನ


ನಿರೂಪಣೆ : ಸಂತೋಷ ನಾಯ್ಕ ಹಟ್ಟಿಕೇರಿ ಸ್ವಾಗತಿಸಿದರು. ಮಹಾಬಲೇಶ್ವರ ಗೌಡ ಪ್ರಾಸ್ತವಿಕ ಮಾತನಾಡಿದರು. ಸ್ನೇಹಾ ಸ್ವಾಗತ ಗೀತೆ ಹಾಡಿದರು. ಜಿ.ಆರ್.ತಾಂಡೇಲ್ ನಿರೂಪಿಸಿದರು. ತುಕರಾಮ ಖಾರ್ವಿ ವಂದಿಸಿದರು.


ಉಪಸ್ಥಿತಿ : ಪ್ರಮುಖರಾದ ಗಜಾನನ ಆರ್.ನಾಯಕ, ಪ್ರದೀಪ ನಾಯ್ಕ, ಗೋಪಿನಾಥ ನಾಯಕ, ಬಾಲಚಂದ್ರ ನಾಯಕ, ಎಂ.ಎಂ.ಕರ್ಕಿಕರ್, ಪ್ರಕಾಶ ಕುಂಜಿ, ದಿನೇಶ ನಾಯ್ಕ ಕಾರವಾರ, ಮಹೇಶ ನಾಯ್ಕ ಕುಮಟಾ, ಶ್ರೀಪಾದ ನಾಯ್ಕ ಭಟ್ಕಳ, ಪ್ರಕಾಶ ನಾಯ್ಕ, ಗಿರಿಧರ ನಾಯ್ಕ, ಪ್ರಭಾಕರ ನಾಯ್ಕ, ನಾಗೇಂದ್ರ ನಾಯ್ಕ, ಲಕ್ಷ್ಮಣ ನಾಯ್ಕ, ಸುಭಾಶ ದುರ್ಗೇಕರ್, ಪ್ರಮೋದ ಗೌಡ ಬೆಂಗಳೂರು, ಕಾರ್ತಿಕ ಗೌಡ, ರಾಘವೇಂದ್ರ ಬಾಳೆಗುಳಿ ಮತ್ತಿತರರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version