Uttara Kannada
Trending

ಮಳೆಗೆ ಕುಸಿದ ಮನೆ: ಸಹಾಯ ನೀಡಿದ ಶಾಸಕ ಸುನೀಲ್ ನಾಯ್ಕ

ಭಟ್ಕಳ: ತಡ ರಾತ್ರಿ ಸುರಿದ ಗಾಳಿ ಮಳೆಗೆ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡಭಟ್ಕಳದಲ್ಲಿ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಶಾಸಕ ಸುನೀಲ್ ನಾಯ್ಕ ಭೇಟಿ ನೀಡಿ ತುರ್ತು ನಿರ್ವಹಣೆಗೆ ಸಹಾಯ ನೀಡಿದ್ದಾರೆ.


ನಾಗಮ್ಮ ಮಾಸ್ತಪ್ಪ ನಾಯ್ಕ(70) ಇವರ ವಾಸ್ತವ್ಯದ ಮನೆ ಸಂಪೂರ್ಣ ಬಿದ್ದು ಹೋಗಿದ್ದು, ಅಪಾರ ಹಾನಿಯಾಗಿದೆ . ಈ ಸುದ್ದಿ ತಿಳಿದ ಶಾಸಕ ಸುನೀಲ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದಿಂದ ಹೊಸ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.


ಈ ಸಂದರ್ಭದಲ್ಲಿ ಜಿ.ಜೆ.ಪಿ.ಹಿರಿಯ ಮುಖಂಡ ಕೃಷ್ಣ ನಾಯ್ಕ,ಪಂಚಾಯತ ಮಾಜಿ ಸದಸ್ಯ ಚಂದ್ರಹಾಸ ನಾಯ್ಕ,ಮುಟ್ಟಳ್ಳಿ ಗ್ರಾಮ ಲೆಕ್ಕಿಗ ಸಲ್ಮಾನ್ ಖಾನ್,ಪಂಚಾಯತ ಪಿ.ಡಿ.ಓ.ರಾಜೇಶ್ವರಿ ಚಂದಾವರ,ಪoಚಾಯತ ಕಾರ್ಯದರ್ಶಿ ಮಂಜುನಾಥ ಶೇಟಿ ಮನೆ, ಸ್ಥಳೀಯ ಮುಖಂಡರಾದ ವೆಂಕಟೇಶ್ ಟಿ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button