Important
Trending

ಕುಮಟಾ ತಾಲೂಕಿನಲ್ಲಿ ಇಂದು 37 ಕರೊನಾ ಕೇಸ್ ದಾಖಲು

  • ಹೆರವಟ್ಟಾ, ಕೋನಳ್ಳಿ, ಕೊಪ್ಪಳಕರವಾಡಿ, ವನ್ನಳ್ಳಿ, ಕತಗಾಲ, ಶಿರಗುಂಜಿ, ಯಾಣ, ಬಗ್ಗೋಣ, ಮಾಸೂರ್, ಗೋಕರ್ಣ ಸೇರಿ ಹಲವೆಡೆ ಸೋಂಕು
  • ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 824 ಕ್ಕೆ ಏರಿಕೆ
[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 37 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ಕುಮಟಾದ ಹೆರವಟ್ಟಾದಲ್ಲಿ 6, ಕೋನಳ್ಳಿ 6, ಕೊಪ್ಪಳಕರವಾಡಿ 2, ವನ್ನಳ್ಳಿ 2, ಕತಗಾಲ 3, ಹಳೇ ಮೀನುಮಾರುಕಟ್ಟೆ ಸಮೀಪ 2 ಸೇರಿದಂತೆ ಯಾಣ, ಬಗ್ಗೋಣ, ಮಾಸೂರ್, ಹೊಸಹೆರವಟ್ಟಾ, ಗೋಕರ್ಣ, ಶಿರಗುಂಜಿ, ಮುಂತಾದ ಭಾಗಗಳಲ್ಲಿ ಕರೊನಾ ಸೋಂಕಿತ ಪ್ರಕರಣ ದೃಢಪಟ್ಟಿದೆ.

ಹೆರವಟ್ಟಾದ 31 ವರ್ಷದ ಮಹಿಳೆ, ಹೆರವಟ್ಟಾದ 26 ವರ್ಷದ ಯುವತಿ, ಹೆರವಟ್ಟಾದ 46 ವರ್ಷದ ಮಹಿಳೆ, ಹೆರವಟ್ಟಾದ 26 ವರ್ಷದ ಯುವಕ, ಹೆರವಟ್ಟಾದ 52 ವರ್ಷದ ಪುರುಷ, ಹೆರವಟ್ಟಾದ 16 ವರ್ಷದ ಯುವತಿ, ಅಳ್ವೇಕೊಡಿಯ 55 ವರ್ಷದ ಪುರುಷ, ಕೊನಳ್ಳಿಯ 66 ವರ್ಷದ ಪುರುಷ, ಕೋನಳ್ಳಿಯ 23 ವರ್ಷದ ಯುವತಿ, ಕೋನಳ್ಳಿಯ 20 ವರ್ಷದ ಯುವತಿ, ಕೋನಳ್ಳಿಯ 16 ವರ್ಷದ ಯುವತಿ, ಕೋನಳ್ಳಿಯ 31 ವರ್ಷದ ಮಹಿಳೆ, ಕೋನಳ್ಳಿಯ 10 ವರ್ಷದ ಬಾಲಕಿಗೆ ಪಾಸಿಟಿವ್ ಬಂದಿದೆ.

ಹಳೇ ಮೀನುಮಾರುಕಟ್ಟೆ ಸಮೀಪದ 35 ವರ್ಷದ ಮಹಿಳೆ, ಹಳೇ ಮೀನುಮಾರುಕಟ್ಟೆ ಸಮೀಪದ 3 ವರ್ಷದ ಮಗು, ಕುಮಟಾದ 42 ವರ್ಷದ ಪುರುಷ, ಕುಮಟಾದ 56 ವರ್ಷದ ಪುರುಷ, ಕುಮಟಾದ 10 ವರ್ಷದ ಬಾಲಕ, ಕುಮಟಾದ 20 ವರ್ಷದ ಯುತಿ, 48 ವರ್ಷದ ಮಹಿಳೆ, 46 ವರ್ಷದ ಪುರುಷ, 17 ವರ್ಷದ ಯುವಕ, ಯಾಣದ 32 ವರ್ಷದ ಪುರುಷ, ವನ್ನಳ್ಳಿಯ 64 ವರ್ಷದ ಪುರುಷ, ವನ್ನಳ್ಳಿಯ 30 ವರ್ಷದ ಪುರುಷ, ಕತಗಾಲ ಶಿರಗುಂಜಿಯ 7 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.

ಹೆಗಡೆಯ 67 ವರ್ಷದ ಪುರುಷ, ಬಗ್ಗೋಣದ 40 ವರ್ಷದ ಮಹಿಳೆ, ಮಾಸೂರಿನ 23 ವರ್ಷದ ಯುವಕ, ಹೊಸಹೆರವಟ್ಟಾದ 54 ವರ್ಷದ ಪುರುಷ, ಕೊಪ್ಪಳಕರವಾಡಿಯ 50 ವರ್ಷದ ಮಹಿಳೆ, ಕೊಪ್ಪಳಕರವಾಡಿಯ 56 ವರ್ಷದ ಪುರುಷ, ಕತಗಾಲನ 10 ವರ್ಷದ ಬಾಲಕಿ, ಕತಗಾಲನ 14 ವರ್ಷದ ಬಾಲಕ, ಕತಗಾಲನ 39 ವರ್ಷದ ಮಹಿಳೆ, ಗೋಕರ್ಣದ 51 ವರ್ಷದ ಮಹಿಳೆಯಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಇಂದು 37 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 824 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Related Articles

Back to top button