Important
Trending

ಕುಮಟಾ, ಹೊನ್ನಾವರದಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು ಗೊತ್ತೆ?

  • ಕುಮಟಾ ತಾಲೂಕಿನಲ್ಲಿ 30 ಪಾಸಿಟಿವ್
  • ಮಿರ್ಜಾನ್, ಉಪ್ಪಿನಪಟ್ಟಣ, ಕೊಡ್ಕಣಿ, ಅಳ್ವೆಕೋಡಿ, ಸಿದ್ದನಬಾವಿ, ಶಿರಗುಂಜಿ ಸೇರಿ ಹಲವೆಡೆ ಕರೊನಾ ನಂಜು
  • ಹೊನ್ನಾವರದಲ್ಲಿ ಇಂದು 18 ಕರೊನಾ ಕೇಸ್
  • ಕಾಸರಕೋಡ, ರಜತಗಿರಿ, ದುರ್ಗಾಕೇರಿ, ಬಜಾರ್ ರಸ್ತೆ, ಕೆಳಗಿನ ಪಾಳ್ಯ ಸೇರಿದಂತೆ ಹಲವೆಡೆ ಸೋಂಕು
[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು 30 ಜನರಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಮಿರ್ಜಾನ್‌ನಲ್ಲಿ 8, ಗೋಕರ್ಣ 3, ಸಿದ್ಧನಬಾವಿ 2, ಚಿತ್ರಗಿ 2 ಸೇರಿದಂತೆ ಅಳ್ವೆಕೋಡಿ, ಹಂದಿಗೋಣ, ಬಗ್ಗೋಣ, ಗುಜರಗಲ್ಲಿ, ಶಿರಗುಂಜಿ ಮುಂತಾದ ಬಾಗಗಳಲ್ಲಿ ಕರೋನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ.

ಮಿರ್ಜಾನದ 60 ವರ್ಷದ ವೃದ್ಧ, 65 ವರ್ಷದ ವೃದ್ಧೆ, 29 ವರ್ಷದ ಪುರುಷ, 33 ವರ್ಷದ ಪುರುಷ, 29 ವರ್ಷದ ಯುವತಿ, 28 ವರ್ಷದ ಪುರುಷ, 22 ವರ್ಷದ ಪುರುಷ, 51 ವರ್ಷದ ಮಹಿಳೆ, ಗೋಕರ್ಣದ 45 ವರ್ಷದ ಪುರುಷ, 25 ವರ್ಷದ ಯುವಕ, ಗೋಕರ್ಣದ ತಾರಮಕ್ಕಿಯ 69 ವರ್ಷದ ವೃದ್ಧ, ಹಿರೆಗುತ್ತಿಯ 3 ವರ್ಷದ ಮಗು, ಕೊಡ್ಕಣಿಯ 71 ವರ್ಷದ ವೃದ್ಧೆಗೆ ಸೋಂಕು ಕಾಣಿಸಿಕೊಂಡಿದೆ.

ಉಪ್ಪಿನಪಟ್ಟಣದ 52 ವರ್ಷದ ಪುರುಷ, ಕುಮಟಾ ಮೀನು ಮಾರುಕಟ್ಟೆಯ ಸಮೀಪದ 69 ವರ್ಷದ ಪುರುಷ, ಅಳ್ವೇಕೋಡಿಯ 58 ವರ್ಷದ ಮಹಿಳೆ, ಸಿದ್ದನಬಾವಿಯ 63 ವರ್ಷದ ಪುರುಷ, ಸಿದ್ದನಬಾವಿಯ 55 ವರ್ಷದ ಮಹಿಳೆ, ಹಂದಿಗೋಣದ 38 ವರ್ಷದ ಪುರುಷ, ಬಗ್ಗೋಣದ 83 ವರ್ಷದ ವೃದ್ಧ, ಚಿತ್ರಗಿಯ 32 ವರ್ಷದ ಪುರುಷ, ಚಿತ್ರಗಿಯ 44 ವರ್ಷದ ಪುರುಷ, ಮಾಸ್ತಿಹಳ್ಳದ 26 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.

ಗುಜ್ಜರಗಲ್ಲಿಯ 38 ವರ್ಷದ ಪುರುಷ, ಶಿರಗುಂಜಿಯ 58 ವರ್ಷದ ಮಹಿಳೆ, ಕುಮಟಾದ 79 ವರ್ಷದ ವೃದ್ಧ, 59 ವರ್ಷದ ಪುರುಷ, 54 ವರ್ಷದ ಪುರುಷ, 64 ವರ್ಷದ ಮಹಿಳೆ, 58 ವರ್ಷದ ಮಹಿಳೆ ಸೇರಿ 30 ಪ್ರಕರಣ ದಾಖಲಾಗಿದೆ. ಇದರೊಂದಿಗೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 877 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಇಂದು 18 ಕರೊನಾ ಕೇಸ್

ಹೊನ್ನಾವರ: ತಾಲೂಕಿನಲ್ಲಿ ಇಂದು 18 ಕರೊನಾ ಕೇಸ್ ದಾಖಲಾಗಿದೆ. ಗಾಂಧಿನಗರ, ಕಾಸರಕೋಡ, ರಜತಗಿರಿ, ದುರ್ಗಾಕೇರಿ, ಬಜಾರ್ ರಸ್ತೆ, ಕೆಳಗಿನ ಪಾಳ್ಯ ಸೇರಿದಂತೆ ಹಲವೆಡೆ ಸೋಂಕು ಕಾಣಿಸಿಕೊಂಡಿದೆ. ತಾಲೂಕಾಸ್ಪತ್ರೆ ಕ್ವಾಟರ್ಸ್ನ 32 ಮತ್ತು 40 ವರ್ಷದ ಮಹಿಳೆ. ಗಾಂಧಿನಗರ 12 ವರ್ಷದ ಬಾಲಕಿ, ಕಾಸರಕೋಡದ 47 ವರ್ಷದ ಮಹಿಳೆ, ರಜತಗಿರಿ 53 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ದುರ್ಗಾಕೇರಿಯ 70 ವರ್ಷದ ಪುರುಷ, 66 ವರ್ಷದ ಮಹಿಳೆ, ಬಜಾರ್ ರಸ್ತೆಯ 43 ವರ್ಷದ ಪುರುಷ, ಕೆಳಗಿನಪಾಳ್ಯ 46 ವರ್ಷದ ಪುರುಷ, ಪಟ್ಟಣದ 41 ವರ್ಷದ ಪುರಷ, ಬಳ್ಕೂರದ 52 ವರ್ಷದ ಪುರುಷ, ಸಾಲಿಕೇರಿ 70 ವರ್ಷದ ವೃದ್ಧ, ಪ್ರಭಾತನಗರದ 20 ಮತ್ತು 16 ಮಹಿಳೆ, ಕರ್ಕಿಯ 51 ಮತ್ತು 54 ವರ್ಷದ ಪುರುಷ, 34 ಹಾಗು 40 ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

Back to top button