ಅಂಕೋಲಾದಲ್ಲಿಂದು 3 ಕರೊನಾ ಕೇಸ್ ದೃಢ

  1. ಯಲ್ಲಾಪುರದಲ್ಲಿ 15 ಮಂದಿಗೆ ಕರೊನಾ ಕೇಸ್ ದೃಢ
  2. ಕುಮಟಾದಲ್ಲಿ ಭೀಕರ‌ ರಸ್ತೆ ಅಪಘಾತ: ಚಾಲಕ ‌ಸಾವು
  3. ಶಿರಸಿಯಲ್ಲಿ ಲಾರಿ- ಬೈಕ್ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಸಾವು

ಅಂಕೋಲಾ : ತಾಲೂಕಿನಲ್ಲಿ ಶುಕ್ರವಾರ 3 ಹೊಸ ಕೊವಿಡ್ ಕೇಸ್‍ಗಳು ಪತ್ತೆಯಾಗಿದ್ದು, ಕೊಗ್ರೆ, ಕೇಣಿ, ಪುರ್ಲಕ್ಕಿಬೇಣಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ. ಸೋಂಕು ಮುಕ್ತರಾದ 4 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ನಲ್ಲಿರುವ 47 ಮಂದಿ ಸಹಿತ ಒಟ್ಟೂ 93 ಪ್ರಕರಣಗಳು ಸಕ್ರಿಯವಾಗಿದೆ. ಇಂದು 77 ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಯಲ್ಲಾಪುರದಲ್ಲಿ 15 ಮಂದಿಗೆ ಕರೊನಾ ಕೇಸ್ ದೃಢ

ಯಲ್ಲಾಪುರ: ತಾಲೂಕಿನಲ್ಲಿ ಇಂದು 15 ಜನರಿಗೆ ಸೋಂಕು ದೃಢಪಟ್ಟಿದೆ. ಕಳಚೆ, ರವೀಂದ್ರನಗರ, ಆನಗೋಡ, ದೇಹಳ್ಳಿ, ಗೋಪಾಲಕೃಷ್ಣಗಲ್ಲಿ ಸೇರಿ ಹಲವೆಡೆ ಸೋಂಕು ಕಾಣಿಸಿಕೊಂಡಿದೆ. ಇಂದು 15 ಕೇಸ್ ದೃಢಪಟ್ಟ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 526 ಕ್ಕೆ ಏರಿಕೆಯಾಗಿದೆ. 391 ಸೋಂಕಿತರು ಗುಣಮುಖರಾಗಿದ್ದಾರೆ.

ಕುಮಟಾದಲ್ಲಿ ಭೀಕರ‌ ರಸ್ತೆ ಅಪಘಾತ:

ಕುಮಟಾ: ತಾಲೂಕಿನ ಮಿರ್ಜಾನ್ ಖೈರೆಯ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಎರಡು ಬೊಲೆರೊ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಚಾಲಕನೋರ್ವ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ನಿವಾಸಿ ಖಾತೀಮ್ ಸಾಬ್ ಎಂಬುವವರು ಮೃತಪಟ್ಟ ಚಾಲಕ ಎಂದು ತಿಳಿದುಬಂದಿದೆ.

ಇವರು ಬೊಲೇರೊ ವಾಹನದಲ್ಲಿ ಮೀನು ತುಂಬಿಕೊಂಡು ಗೋಕರ್ಣದಿಂದ ಮಂಗಳೂರಿಗೆ ಸಾಗುತ್ತಿರುವಾಗ ಮುಂಭಾಗದಿoದ ಬಂದ ಇನ್ನೊಂದು ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಓರ್ವ ಚಾಲಕ ಮೃತಪಟ್ಟಿದ್ದಾರೆ. ಇನ್ನೋರ್ವ ಚಾಲಕ ನಾಗೇಂದ್ರ ವೆಂಕಟರಮಣ ನಾಯ್ಕ ಮತ್ತು ಕ್ಲಿನರ್ ಗಂಭೀರ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಾರಿ- ಬೈಕ್ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಸಾವು

ಶಿರಸಿ: ತಾಲೂಕಿನ ಶಿರಸಿಮಕ್ಕಿ ಬಳಿ ಲಾರಿ- ಬೈಕ್ ಮುಖಾಮುಖಿಯಾಗಿದ್ದು, ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಬೈಕ್ ಸವಾರ 22 ವರ್ಷದ ಪ್ರಹ್ಲಾದ್ ನಾಯ್ಕ ಎಂದು ತಿಳಿದು ಬಂದಿದೆ.

ವಿಸ್ಮಯ‌ ನ್ಯೂಸ್ ವಿಲಾಸ ನಾಯ್ಕ ಅಂಕೋಲಾ

Exit mobile version