ಮನೆಯಂಗಳಕ್ಕೆ ಬಂದಿತ್ತು ಭಾರಿ ಗಾತ್ರದ ಹೆಬ್ಬಾವು
ಸಹಾಯಕ್ಕೆ ಧಾವಿಸಿದ ಮಂಕಿ ರೆಂಜ್ ಅರಣ್ಯ ಇಲಾಖಾ ಸಿಬ್ಬಂದಿ
ಭಟ್ಕಳ: ತಾಲೂಕಿನ ಬೈಲೂರು ಪಂಚಾಯತ್ ವ್ಯಾಪ್ತಿಯ ಮಡಿಕೇರಿಯ ಭಾಸ್ಕರ ಕಾಮತ್ ಎನ್ನುವವರ ಮನೆಯಂಗಳದಲ್ಲಿ ಭಾರಿ ಗಾತ್ರದ ಹೆಬ್ಬಾವೊಂದು ಅರಣ್ಯ ಇಲಾಖೆಯವರು ಸೆರೆ ಹಿಡಿದಿರುವ ಘಟನೆ ಮಂಗಳವಾರದoದು ನಡೆದಿದೆ.
ಹೆಬ್ಬಾವು ಸುಮಾರು 14 ಅಡಿ ಉದ್ದವಿದ್ದು, 25 ರಿಂದ 30 ಕೆಜಿ ಗೂ ಅಧಿಕ ತೂಕವಿದೆ ಎನ್ನಲಾಗಿದೆ. ಈ ಬೃಹದಾಕಾರದ ಭಾರೀ ಗಾತ್ರದ ಹೆಬ್ಬಾವು ನೋಡಿ ಮನೆಯ ಕುಟುಂಬದವರು ಹಾಗೂ ಗ್ರಾಮಸ್ಥರು ಕೆಲಕಾಲ ದಂಗಾದರು..
ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಅರಣ್ಯ ಇಲಾಖೆ ಸಿಬ್ಬಂದಿ:
ಮನೆಯಂಗಳದಲ್ಲಿ ನೋಡಿದ ಈ ಬೃಹದಾಕಾರದ ಹಾವೊಂದನ್ನು ರಕ್ಷಿಸುವಂತೆ ಸಮೀಪದ ಮುರ್ಡೇಶ್ವರ ನಾಖದಲ್ಲಿರುವ ಅರಣ್ಯ ಇಲಾಖೆಯ ಶಾಖೆಗೆ ದೂರವಾಣಿಯ ಮೂಲಕ ಸಂಪರ್ಕಿಸಿದಾಗ ಆ ಭಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹಿರಿಯ ಫಾರೆಸ್ಟ್ ಸಿಬ್ಬಂದಿಯೊರ್ವರು ತಮ್ಮ ಕರ್ತವ್ಯದಿಂದ ನುಣುಚಿಕೊಂಡಿದ್ದಾರೆ.
ಸಹಾಯಕ್ಕೆ ಧಾವಿಸಿದ ಮಂಕಿ ರೆಂಜ್ ಅರಣ್ಯ ಇಲಾಖಾ ಸಿಬ್ಬಂದಿ:
ಮಂಕಿ ಭಾಗದ ಹಿರಿಯ ಅಧಿಕಾರಿಗಳಾದ ಎಮ್ ಎಮ್ ಮಡ್ಡಿಯವರ ಮಾರ್ಗದರ್ಶನದಲ್ಲಿ ಫಾರೆಸ್ಟ್ ಗಾರ್ಡ ದೇವೇಂದ್ರ ಗೊಂಡ, ಉರಗ ಪ್ರೇಮಿ ಉದಯ ನಾಯ್ಕ ಹಾಗೂ ಡ್ರೈವರ ಗೋಪಾಲ ಗೌಡ ನೇತೃತ್ವದ ತಂಡವೊoದು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಕಾರದೊಂದಿಗೆ ಹಾವೊಂದು ಹಿಡಿದು ಸುರಕ್ಷಿತವಾದ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ