ಮಾಹಿತಿ
Trending

ಕುಮಟಾ, ಹೊನ್ನಾವರದ ಇಂದಿನ ಕರೊನಾ ಮಾಹಿತಿ

ಕುಮಟಾದಲ್ಲಿ ಆರು ಪಾಸಿಟಿವ್
ಹೊನ್ನಾವರ ತಾಲೂಕಿನಲ್ಲಿ ನಾಲ್ಕು ಕೇಸ್ ದೃಢ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು 6 ಕರೋನಾ ಪ್ರಕರಣಗಳು ದಾಖಲಾಗಿವೆ. ತಾಲೂಕಿನ ಉಪ್ಪಿನಪಟ್ಟನ, ಹೊಂಡದಕ್ಕಲ, ಮಿರ್ಜಾನ, ಸಾಂತೂರು ಬೈಲಗದ್ದೆ, ಹಣ್ಣೆಮಠ, ಕತಗಾಲಿನ ಹೊಂಡದಕ್ಕಲ ಭಾಗದಲ್ಲಿ ಸೋಂಕಿತ ಪ್ರಕರಣ ದಾಖಲಾಗಿದೆ.

ಕತಗಾಲ್ ಹೊಂಡದಹಕ್ಕಲಿನ 38 ವರ್ಷದ ಪುರುಷ, ಕತಗಾಲ್ ಉಪ್ಪಿನಪಟ್ಟಣದ 64 ವರ್ಷದ ಪುರುಷ, ಸಾಂತೂರು ಬೈಲಗದ್ದೆಯ 42 ವರ್ಷದ ಪುರುಷ, ತಾಲೂಕಿನ ಹಣ್ಣೆಮಠದ 88 ವರ್ಷದ ವೃದ್ಧ, ಮಿರ್ಜಾನದ 38 ವರ್ಷದ ಪುರುಷ, ಕುಮಟಾ ಪಟ್ಟಣದ 74 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.

ತಾಲೂಕಿನಲ್ಲಿ ಇಂದು 6 ಹೊಸ ಪ್ರಕರಣಗಳು ದಾಖಲಾದ ಬೆನ್ನಲ್ಲೆ ಸೋಂಕಿತರ ಸಂಖ್ಯೆ 949 ಕ್ಕೆ ಏರಿಕೆಯಾದಂತಾಗಿದೆ.

ಹೊನ್ನಾವರ ತಾಲೂಕಿನಲ್ಲಿ ನಾಲ್ಕು ಪಾಸಿಟಿವ್:


ಹೊನ್ನಾವರ: ತಾಲೂಕಿನಲ್ಲಿ ಇಂದು ನಾಲ್ಕು ಕರೊನಾ ಕೇಸ್ ದಾಖಲಾಗಿದೆ. ಪಟ್ಟಣದ ಪ್ರಭಾತನಗರ- 2, ದುರ್ಗಾಕೇರಿ- 1, ಗ್ರಾಮಿಣ ಭಾಗವಾದ ಗುಣವಂತೆಯಲ್ಲಿ 1 ಪ್ರಕರಣ ದೃಢಪಟ್ಟಿದೆ.


ಪಟ್ಟಣದ ದುರ್ಗಾಕೇರಿಯ 70 ವರ್ಷದ ಮಹಿಳೆ, ಪ್ರಭಾತನಗರದ 78 ವರ್ಷದ ಪುರುಷ ಮತ್ತು 60 ವರ್ಷದ ಪುರುಷ, ಗುಣವಂತೆಯ 35 ವರ್ಷದ ಪುರುಷ ಸೇರಿದಂತೆ ನಾಲ್ಕು ಜನರಲ್ಲಿ ಇಂದು ಕರೊನಾ ಪಾಸಿಟಿವ್ ಬಂದಿದೆ.

ಇಂದು ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ 20 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 95 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ವಿಸ್ಮಯ ನ್ಯೂಸ್, ನಾಗೇಶ್ ದಿವಗಿ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Back to top button