
ಗುಣಮುಖರಾಗಿ ಐವರು ಡಿಸ್ಚಾರ್ಜ್
ತಾಲೂಕಿನಲ್ಲಿ ಸೋಂಕಿತರ ಸಂಖೆ 942 ಕ್ಕೆ ಏರಿಕೆ
ಹೊನ್ನಾವರ: ತಾಲೂಕಿನಲ್ಲಿ ಇಂದು 16 ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಹೊನ್ನಾವರ ಪಟ್ಟಣದಲ್ಲಿ 10, ಗ್ರಾಮೀಣ ಭಾಗದಲ್ಲಿ 5 ಕೇಸ್ ದಾಖಲಾಗಿದೆ.
ಪಟ್ಟಣದ ಪ್ರಭಾತನಗರದ 57 ವರ್ಷದ ಪುರುಷ, 23 ವರ್ಷದ ಯುವಕ, 54 ವರ್ಷದ ಪುರುಷ, ಕರ್ಕಿನಾಕಾದ 42 ವರ್ಷದ ಪುರುಷ, 50 ವರ್ಷದ ಪುರುಷ, 62 ವರ್ಷದ ಮಹಿಳೆ, 19 ವರ್ಷದ ಯುವತಿ, 17 ವರ್ಷದ ಬಾಲಕ, 13 ವರ್ಷದ ಬಾಲಕಿ, 7 ವರ್ಷದ ಬಾಲಕಿಗೆ ಕರೊನಾ ದೃಢಪಟ್ಟಿದೆ.
ಗ್ರಾಮೀಣ ಭಾಗವಾದ ವಲ್ಕಿಯ 42 ವರ್ಷದ ಪುರುಷ, ಮಂಕಿಯ 45 ವರ್ಷದ ಮಹಿಳೆ, ಗೇರುಸೋಪ್ಪಾ ಕೆಪಿಸಿ ಕಾಲೋನಿಯ 37 ವರ್ಷದ ಪುರುಷ, ಬಾಸ್ಕೇರಿಯ 64 ವರ್ಷದ ಮಹಿಳೆ, ಕಡನ್ನೀರದ 33 ವರ್ಷದ ಯುವಕ, ಕುಮಟಾ ಹಂದಿಗೋಣದ 52 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.
ಆಸ್ಪತ್ರೆಯಿAದ ಇಂದು ಐವರು ಡಿಸ್ಚಾರ್ಜ್ ಆಗಿದ್ದಾರೆ. ತಾಲೂಕಾ ಆಸ್ಪತ್ರೆಯಲ್ಲಿ 13 ಜನರು ಚಿಕಿತ್ಸೆ ಪಡೆಯುತ್ತಿದ್ದು, ಮನೆಯಲ್ಲಿ 118 ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 16 ಕೇಸ್ ದಾಖಲಾದ ಬೆನ್ನಲ್ಲೆ, ತಾಲೂಕಿನಲ್ಲಿ ಸೋಂಕಿತರ ಸಂಖೆ 942 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- SSLC ಯಲ್ಲಿ ಸಾಧನೆ ಮಾಡಿದ ರೈತ ಕುಟುಂಬದ ಕನ್ನಡದ ಕುವರಿಗೆ ಇಂಜಿನೀಯರ್ ಆಗೋ ಕನಸು: ಹೆಸರಿಗೆ ತಕ್ಕಂತೆ ಇದೆ ಗ್ರಾಮೀಣ ಭಾಗದ ಆದರ್ಶ ಪ್ರೌಢಶಾಲೆ
- ಯುದ್ಧ ಸಿದ್ಧತೆ ಹಿನ್ನಲೆ: ಉಪವಾಸ ಸತ್ಯಾಗ್ರಹ ಮುಂದಕ್ಕೆ
- ಅತ್ಯಂತ ಸುಸಜ್ಜಿತವಾದ ಮಳಿಗೆ ಮಾರಾಟಕ್ಕಿದೆ: ಕೂಡಲೇ ಸಂಪರ್ಕಿಸಿ
- ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಮೇ 10 ರಂದು ಪ್ರವೇಶ ದಾಖಲಾತಿ ಪರೀಕ್ಷೆ