Important
Trending

ಬಾತ್‌ರೂಮ್‌ನಲ್ಲಿರುವ ಕಬ್ಬಿಣದ ಹುಕ್ಕಿಗೆ ಚೂಡಿದಾರದ ವೇಲ್ ನಿಂದ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಭಟ್ಕಳ: ಪ್ರಥಮ ಪಿ.ಯು.ಸಿ ಓದುತ್ತಿರುವ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಶಿರಾಲಿ ಹರಕಲಿ ಯಲ್ಲಿ ನಡೆದಿದೆ. ಮೃತ ಯುವತಿ ಶಿಲ್ಪಾ ಪರಮೇಶ್ವರ ನಾಯ್ಕ (17) ವರ್ಷ ಎಂದು ಗುರುತಿಸಲಾಗಿದೆ.


ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಪಕ್ಕದ ಬಾತ್‌ರೂಮ್‌ನಲ್ಲಿರುವ ಕಬ್ಬಿಣದ ಹುಕ್ಕಿಗೆ ಚೂಡಿದಾರದ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಯುವತಿಯ ಅಣ್ಣ ಮಹೇಶ ಪರಮೇಶ್ವರ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿ ಕೊಂಡ ಪಿ.ಎಸ್.ಐ.ಹೆಚ್ ಓಂಕಾರಪ್ಪ ತನಿಖೆ ಕೈಗೊಂಡಿದ್ದಾರೆ.


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button