ಮಾಹಿತಿ
Trending

ಅಂಕೋಲಾ,ಶಿರಸಿ, ಯಲ್ಲಾಪುರದ‌ ಇಂದಿನ ‌ಕರೊನಾ ಮಾಹಿತಿ

ಶಿರಸಿಯಲ್ಲಿಂದು 19 ಮಂದಿಗೆ ಸೋಂಕು ದೃಢ:
ಯಲ್ಲಾಪುರದಲ್ಲಿಂದು 18 ಮಂದಿಗೆ ಪಾಸಿಟಿವ್
ಅಂಕೋಲಾದಲ್ಲಿಂದು 13 ಕೊವಿಡ್ ಕೇಸ್ : ಗುಣಮುಖ 16 : ಸಕ್ರಿಯ 100

ಅಂಕೋಲಾ : ತಾಲೂಕಿನಲ್ಲಿ ಬುಧವಾರ ಒಟ್ಟೂ 13 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಸೋಂಕು ಮುಕ್ತರಾದ 16 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನಲ್ಲಿರುವ 57 ಮಂದಿ ಸಹಿತ ತಾಲೂಕಿನಲ್ಲಿ ಒಟ್ಟೂ 100 ಪ್ರಕರಣಗಳು ಸಕ್ರಿಯವಾಗಿದೆ.

ಇಂದು ಲಕ್ಷ್ಮೇಶ್ವರ, ಅವರ್ಸಾ, ನೀಲಂಪುರ, ಬೆಳಸೆ, ಚಂದುಮಠ, ಕಾರವಾರ ರಸ್ತೆ ದಿನಕರ ರಸ್ತೆ ಅಂಚಿನ ಪ್ರದೇಶ ಸೇರಿದಂತೆ ತಾಲೂಕಿನ ನಾನಾ ಭಾಗಗಳಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಟ್ಟೂ 197 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಶಿರಸಿಯಲ್ಲಿಂದು 19 ಮಂದಿಗೆ ಸೋಂಕು ದೃಢ:

ಶಿರಸಿ: ನಗರದಲ್ಲಿಂದು 19 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಇದೇ ವೇಳೆ ಇಂದು 49 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಇಂದು ಸೋಂಕು ದೃಢವಾದ ಪೈಕಿ ಮಾರಿಗುಡಿ ರೋಡ್ 1, ವಿದ್ಯಾ ನಗರ 1, ಹೆಗಡೆಕಟ್ಟಾ 2, ಗಾಂಧಿ ನಗರ 1, ಚಿಪಗೇರಿ 1, ಕೆಎಚ್‍ಬಿ ಕಾಲೋನಿ 1, ಹೀಪನಳ್ಳಿ 3 ಮಂಜಳ್ಳಿ 1, ವಾನಳ್ಳಿ 4, ಬನವಾಸಿ 1, ನವಣಗೇರಿ 1, ದೀವಗಿ ಪ್ಯಾಕ್ಟರಿ 1, ಬರೂರಿನಲ್ಲಿ 1 ಕೇಸ್ ಪಾಸಿಟಿವ್ ಬಂದಿದೆ.

ಯಲ್ಲಾಪುರದಲ್ಲಿಂದು 18 ಮಂದಿಗೆ ಪಾಸಿಟಿವ್:

ಯಲ್ಲಾಪುರ: ಪಟ್ಟಣದಲ್ಲಿಂದು 18 ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಬುಧವಾರ ಒಂದೇ ದಿನ 88 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಸೋಂಕು ದೃಢವಾದ ಪೈಕಿ ಯಲ್ಲಾಪುರ ಪಟ್ಟಣದಲ್ಲಿ 4, ಕೋಟೆಮನೆಯಲ್ಲಿ 8, ಇಳೇಹಳ್ಳಿಯಲ್ಲಿ 2 ಹಾಗೂ ಬಾಳೆಗದ್ದೆ, ಆನಗೋಡ, ಕುಂದರಗಿ ಹಾಗೂ ನಂದಿಬಾವಿಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button