ಕುಮಟಾದಲ್ಲಿ ಇಂದು 35 ಪಾಸಿಟಿವ್

ತಾಲೂಕಿನಲ್ಲಿ ಹೆಚ್ಚುತ್ತಿದೆ ಕರೊನಾ ಸೋಂಕು
ಸೋoಕಿತರ ಸಂಖ್ಯೆ 1197 ಕ್ಕೆ ಏರಿಕೆ

[sliders_pack id=”1487″]

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 35 ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಹೆಗಡೆಯಲ್ಲಿ 5, ಮೋರ್ಬಾ 5, ಹಿರೇಗುತ್ತಿ 3, ಮಿರ್ಜಾನ್ 2, ಅಂತ್ರವಳ್ಳಿ 2 ಸೇರಿದಂತೆ ಹನೇಹಳ್ಳಿ, ಬಾಡ, ಕಿಮಾನಿ, ಬೆಟ್ಗೇರಿ, ಮಿರ್ಜಾನ್, ಹಂದಿಗೋಣ, ಬಗ್ಗೋಣ, ಬೆಟ್ಗೇರಿ, ಹಳಕಾರ, ಬಾಡ ಮುಂತಾದ ಪ್ರದೇಶಗಳಲ್ಲಿ ಸೋಂಕಿತ ಪ್ರಕರಣ ದಾಖಲಾಗಿದೆ.

ಮೋರ್ಬಾದ 57 ವರ್ಷದ ಮಹಿಳೆ, 60 ವರ್ಷದ ಪುರುಷ, 80 ವರ್ಷದ ವೃದ್ಧೆ, 1 ವರ್ಷದ ಮಗು, 19 ವರ್ಷದ ಯುವಕ, ಹಿರೇಗುತ್ತಿಯ 33 ವರ್ಷದ ಪುರುಷ, 78 ವರ್ಷದ ವೃದ್ಧ, 23 ವರ್ಷದ ಯುವಕ, ಅಂತ್ರವಳ್ಳಿಯ 73 ವರ್ಷದ ವೃದ್ಧೆ, 30 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.

ಮಿರ್ಜಾನ್‌ನ 25 ವರ್ಷದ ಮಹಿಳೆ, 5 ವರ್ಷದ ಬಾಲಕಿ, ಹೊಂಡದಕ್ಕಲಿನ 17 ವರ್ಷದ ಬಾಲಕ, ಹೆಗಡೆಯ 27 ವರ್ಷದ ಯುವತಿ, 62 ವರ್ಷದ ಪುರುಷ, 58 ವರ್ಷದ ಪುರುಷ, 35 ವರ್ಷದ ಪುರುಷ, 25 ವರ್ಷದ ಯುವಕ, ಬೆಟ್ಗೇರಿ 55 ವರ್ಷದ ಮಹಿಳೆ, ಕಿಮಾನಿಯ 25 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.

ಹಂದಿಗೋಣದ 52 ವರ್ಷದ ಪುರುಷ, ಬಗ್ಗೋಣದ 65 ವರ್ಷದ ಪುರುಷ, ಕುಮಟಾದ 50 ವರ್ಷದ ಮಹಿಳೆ, 31 ವರ್ಷದ ಮಹಿಳೆ, 54 ವರ್ಷದ ಮಹಿಳೆ, 40 ವರ್ಷದ ಮಹಿಳೆ, 22 ವರ್ಷದ ಯುವಕ, 52 ವರ್ಷದ ಮಹಿಳೆ, 38 ವರ್ಷದ ಪುರುಷ, 18 ವರ್ಷದ ಯುವತಿ, 52 ವರ್ಷದ ಪುರುಷ, 55 ವರ್ಷದ ಪುರುಷ, ಬಾಡದ 53 ವರ್ಷದ ಮಹಿಳೆ, ಹಳಕಾರದ 32 ವರ್ಷದ ಪುರುಷ, ಹನೇಹಳ್ಳಿಯ 42 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ಇಂದು 35 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1197 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

Exit mobile version