Follow Us On

Google News
Focus News
Trending

ಹೆರವಟ್ಟಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕುಮಟಾ: ತಾಲೂಕಿನ ದೇವಗಿರಿ ವಲಯದ ವಿಪತ್ತು ನಿರ್ವಹಣಾ ತಂಡ ಜವಾಬ್ದಾರಿ ಹಸ್ತಾಂತರಿಸಿ, ಅಕ್ಟೋಬರ್ 2 ರ ಗಾಂಧಿಜಯಂತಿ ಪ್ರಯುಕ್ತ ಹೆರವಟ್ಟಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಮಾನ್ಯ ಯೋಜನಾಧಿಕಾರಿಗಳಾದ ನಾಗರಾಜ ನಾಯ್ಕ ಚಾಲನೆ ನೀಡಿದರು,

ಈ ವೇಳೆ ಮಾತನಾಡಿದ ಅವರು ರಾಜ್ಯದಾದ್ಯಂತ ತುರ್ತು ವಿಪತ್ತು ಸಂಭವಿಸಿದಾಗ ತಕ್ಷಣ ಸಹಾಯಕ್ಕೆ ಧಾವಿಸುವಂತೆ ಸೇವಾಮನೋಭಾವನೆಯುಳ್ಳ ಸ್ವ ಆಸಕ್ತಿಯುಳ್ಳ ಸ್ಥಳೀಯ ಯುವಕ ಯುವತಿಯರನ್ನು ಆಯ್ಕೆಮಾಡಿ ತರಬೇತಿನೀಡಿ ಅವರನ್ನು ಪ್ರೇರೇಪಣೆ ನೀಡಲಾಗುವುದು, ಇದರಿಂದ ತಕ್ಷಣಕ್ಕೆ ಸಹಾಯ ಮಾಡಲು ಸಹಾಯವಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಪಕರಾದ ಮಂಗಲಾ ನಾಯ್ಕ, ಪುರಸಭಾ ಸದಸ್ಯೆ ಲಕ್ಷ್ಮೀ ಗೊಂಡ, ಶಾಲಾಭಿವೃದ್ದಿ ಸಮೀತಿ ಅಧ್ಯಕ್ಷರಾದ ಪದ್ಮ, ಒಕ್ಕೂಟದ ಅಧ್ಯಕ್ಷರಾದ ಕಲ್ಪನಾ ನಾಯ್ಕ, ಮೇಲ್ವಿಚಾರಕರಾದ ಯದುನಂದ ನಾಯ್ಕ, ಸೇವಾಪ್ರತಿನಿಧಿ ಗಿರಿಜಾ ಭಟ್ಟ, ಸಮೀತಿ ಸಧ್ಯಕ್ಷ ಸಂತೋಷ್ ಗೌಡ, ಒಕ್ಕೂಟದ ಪದಾದಿಕಾರಿಗಳು, ಶಾಲಾ ಶಿಕ್ಷಕ ವೃಂದ, ವಿಪತ್ತು ನಿರ್ವಹಣಾ ತಂಡಗಳ ಸದಸ್ಯರು ಹಾಜರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಶಾಲಾ ಆವರಣ ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

Back to top button
Idagunji Mahaganapati Chandavar Hanuman