Focus News
Trending

ಶಿರಸಿಯಲ್ಲಿ 12,ಹೊನ್ನಾವರದಲ್ಲಿ 8 ಕರೊನಾ ಸೋಂಕಿತರು ಪತ್ತೆ

ಮುಗ್ವಾ ಸುಬ್ರಹ್ಮಣ್ಯದ ವೈದಿಕರೊಬ್ಬರ ಸಾವು
86 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ

[sliders_pack id=”1487″]

ಹೊನ್ನಾವರ: ತಾಲೂಕಿನಲ್ಲಿ ಇಂದು 8 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಮುಗ್ವಾ ಸುರಕಟ್ಟೆಯ ಪುರುಷ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇಂದು ಪಟ್ಟಣ ಭಾಗದಲ್ಲಿ 1 ಮತ್ತು ಗ್ರಾಮೀಣ ಭಾಗದ ಏಳು ಜನರಲ್ಲಿ ಸೋಂಕು ದೃಢಪಟ್ಟಿದೆ. ಚಂದಾವರ, ಹಡಿನಬಾಳ, ಅರೇಂಗಡಿ, ಹಳದೀಪುರ, ರಾಯಲಕೇರಿ ಮುಂತಾದ ಕಡೆ ಸೋಂಕು ಪತ್ತೆಯಾಗಿದೆ.

ಹೊನ್ನಾವರ ಪಟ್ಟಣದ ರಾಯಲಕೇರಿಯ 84 ವರ್ಷದ ಪುರುಷ, ಗ್ರಾಮೀಣ ಭಾಗವಾದ ಚಂದಾವರದ 66 ವರ್ಷದ ಮಹಿಳೆ, 40 ವರ್ಷದ ಪುರುಷ, ಹಡಿನಬಾಳದ 50 ವರ್ಷದ ಪುರುಷ, 46 ವರ್ಷದ ಮಹಿಳೆ, ಹಳದೀಪುರದ 24 ವರ್ಷದ ಯುವಕ, ಅರೆಂಗಡಿಯ 48 ವರ್ಷದ ಪುರುಷ, 16 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ತಾಲೂಕಾ ಆಸ್ಪತ್ರೆಯಲ್ಲಿ 12 ಜನರು ಚಿಕಿತ್ಸೆ ಪಡೆಯುತ್ತಿದ್ದರೆ, 86 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಮುಗ್ವಾ ಸುಬ್ರಹ್ಮಣ್ಯದ ವೈದಿಕರೊಬ್ಬರ ಸಾವು

ಮುಗ್ವಾ ಸುರಕಟ್ಟೆಯ 65 ವರ್ಷದ ಪುರುಷ ಮಂಗಳೂರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ ಸಂದರ್ಭದಲ್ಲಿ ಕರೊನಾ ಇರುವುದು ದೃಢಪಟ್ಟಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇವರು ಸುಬ್ರಹ್ಮಣ್ಯ ದೇವಾಲಯದಲ್ಲಿ ಸರ್ಪಶಾಂತಿ ಸೇರಿದಂತೆ ಹಲವು ಸಂಸ್ಕಾರಗಳನ್ನು ನೆರವೇರಿಸುತ್ತಿದ್ದರು. ಇವರು ಅಪಾರ ಶಿಷ್ಯರನ್ನು ಹೊಂದಿದ್ದರು.

ಶಿರಸಿಯಲ್ಲಿ12 ಜನರಿಗೆ ಕರೋನಾ ಪಾಸಿಟಿವ್

ಶಿರಸಿ: ನಗರದಲ್ಲಿ ಶನಿವಾರದ ವರದಿಯಂತೆ ಒಟ್ಟು 12 ಜನರಿಗೆ ಕರೊನಾ ಪಾಸಿಟಿವ್ ದೃಢವಾಗಿದೆ.
ಇಂದು ಪ್ರಗತಿ ನಗರದಲ್ಲಿ 1, ಕಂಡ್ರಾಜೆ 1, ಚೌಕಿಮಠ 1, ಸಹ್ಯಾದ್ರಿ ಕಾಲೋನಿ 1, ತಾರಗೋಡ 1, ಬನವಾಸಿ ರಸ್ತೆ 1, ಭೈರುಂಬೆ 1, ಹೆಗಡೆಕಟ್ಟಾ 1, ಕುಪ್ಪಗದ್ದೆ 1, ಗಣೇಶ ನಗರ, ವಿದ್ಯಾನಗರ ಹಾಗು ಮೇಲಿನ ಓಣಿಕೇರಿಯಲ್ಲಿ ತಲಾ ಒಂದು ಕೇಸ್ ದೃಢಪಟ್ಟಿದೆ. ಇದೇ ವೇಳೆ‌ ಇಂದು 52 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button