ಕುಮಟಾದಲ್ಲಿ ಇಂದು 32 ಕರೊನಾ ಕೇಸ್ ದೃಢ

ತಾಲೂಕಿನಲ್ಲಿ ಹೆಚ್ಚುತ್ತಲೇ ಇದೆ ಮಹಾಮಾರಿಯ ನಂಜು
ಸೋoಕಿತರ ಸಂಖ್ಯೆ 1,347ಕ್ಕೆ ಏರಿಕೆ

[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಇಂದು 32 ಕರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ತಾಲೂಕಿನ ಬಾಡ, ಬಂಕಿಕೊಡ್ಲ, ಹಂದಿಗೋಣ, ಹೆಗಡೆ, ಮಳವಳ್ಳಿ, ಬರ್ಗಿ, ತಾರಮಕ್ಕಿ, ಮಣಕಿ, ಧಾರೇಶ್ವರ, ಮಾಸೂರ ಕ್ರಾಸ್ ಸೇರಿದಂತೆ ಹಲವೆಡೆ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಬಾಡದ 18 ವರ್ಷದ ಯುವಕ, 17 ವರ್ಷದ ಯುವಕ, 38 ವರ್ಷದ ಮಹಿಳೆ, ಬಂಕಿಕೊಡ್ಲದ 70 ವರ್ಷದ ವೃದ್ಧ, ಮೂಡಂಗಿಯ 65 ವಷ್ದ ವೃದ್ಧ, ಬರ್ಗಿಯ 36 ವರ್ಷದ ಪುರುಷ, 70 ವರ್ಷದ ವೃದ್ಧ, ಹಂದಿಗೋಣದ 45 ವರ್ಷದ ಮಹಿಳೆ, ಹೆಗಡೆ ತಾರಿಬಾಗಿಲಿನ 65 ವರ್ಷದ ವೃದ್ಧ, ಹೆಗಡೆಯ 48 ವರ್ಷದ ಪುರುಷ, ಬಂಡಿಕೇರಿಯ 55 ವರ್ಷದ ಪುರುಷ, ಚಿನ್ನದಕೇರಿಯ 60 ವರ್ಷದ ವೃದ್ಧ, ಧಾರೇಶ್ವರದ 52 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.

ಕತಗಾಲ್ ಮಳವಳ್ಳಿಯ 64 ವರ್ಷದ ವೃದ್ಧೆ, ಸಾಂತೂರಿನ 60 ವರ್ಷದ ವೃದ್ಧ, ಹಳ್ಕಾರದ 60 ವರ್ಷದ ವೃದ್ಧ, ಮಾಸೂರ್ ಕ್ರಾಸ್‌ನ 41 ವರ್ಷದ ಪುರುಷ, ಸಿದ್ಧನಬಾವಿಯ 56 ವರ್ಷದ ಪುರುಷ, ಕಲ್ಕೇರಿಯ 13 ವರ್ಷದ ಬಾಲಕಿ, 14 ವರ್ಷದ ಬಾಲಕ, ಮಣಕಿಯ 10 ವರ್ಷದ ಬಾಲಕಿ, 66 ವರ್ಷದ ವೃದ್ಧೆ, ತಾರಮಕ್ಕಿಯ 35 ವರ್ಷದ ಪುರುಷ, ಅಳ್ವೆದಂಡೆಯ 65 ವರ್ಷದ ವೃದ್ಧ, ನೆಲ್ಲಿಕೇರಿಯ 58 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.

ಕುಮಟಾ ಪಟ್ಟಣ ವ್ಯಾಪ್ತಿಯಲ್ಲಿ 6 ಪ್ರಕರಣಗಳು ವರಿಯಾಗಿವೆ. ಪಟ್ಟಣದ 58 ವರ್ಷದ ಮಹಿಳೆ, 28 ವರ್ಷದ ಪುರುಷ, 25 ವರ್ಷದ ಪುರುಷ, 57 ವರ್ಷದ ಮಹಿಳೆ, 24 ವರ್ಷದ ಮಹಿಳೆ, 53 ವರ್ಷದ ಮಹಿಳೆ, ಹೊನ್ನಾವರ ತಾಲೂಕಿನ 12 ವರ್ಷದ ಬಾಲಕನಿಗೆ ಸೋಂಕು ಇರುವುದು ಕಾಣಿಸಿಕೊಂಡಿದೆ.

ಇoದು ಕುಮಟಾ ತಾಲೂಕಿನಲ್ಲಿ 32 ಹೊಸ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,347 ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ದೀಪೇಶ್ ನಾಯ್ಕ, ಕುಮಟಾ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Exit mobile version