ಅಪರೂಪದ ತಳಿಯ ದುಬಾರಿ ಬೆಲೆಯ 15 ಲಕ್ಷ ಮೌಲ್ಯದ 25 ಪಾರಿವಾಳ ವಶಕ್ಕೆ

ಅಪರೂಪದ ತಳಿಯ ದುಬಾರಿ ಬೆಲೆಯ ಪಾರಿವಾಳ ಕಳ್ಳತನ
ಕಳ್ಳನನ್ನು ಹಿಡಿದ ಭಟ್ಕಳ ಪೊಲೀಸರು
ಬಂಧಿತನಿoದ 15 ಲಕ್ಷ ಮೌಲ್ಯದ 25 ಪಾರಿವಾಳ ವಶಕ್ಕೆ

[sliders_pack id=”1487″]

ಭಟ್ಕಳ: ತಾಲ್ಲೂಕಿನ ಆಜಾದ್ ನಗರ ಪಾರಿವಾಳ ಸಾಕಾಣಿಕೆ ಕೇಂದ್ರದಲ್ಲಿ ಕಳೆದ ಅ.5ರ ರಾತ್ರಿ ದುಬಾರಿ ಬೆಲೆಯ 25 ಪಾರಿವಾಳಗಳನ್ನು ಕದ್ದು ಪರಾರಿಯಾಗಿದ್ದ ಖಾತರ್ನಾಕ ಪಾರಿವಾಳ ಕಳ್ಳನನ್ನು ಭಟ್ಕಳ ಪೊಲೀಸರು ಬೆಂಗಳೂರಿನಿoದ ಬಂಧಿಸಿ ಕರೆತಂದಿರುವ ಘಟನೆ ನಡೆದಿದೆ.


ಆರೋಪಿ ತಮಿಳುನಾಡು ಮೂಲದ ಪನ್ನೀರ್ ಸೇಲ್ವಂ ಎಂದು ಗುರುತಿಸಲಾಗಿದೆ. ಈತನಿಂದ ಸರಿ ಸುಮಾರು 15 ಲಕ್ಷ ಮೌಲ್ಯದ 18 ಪಾರಿವಾಳಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದ್ದು. ಈತನ ಮಾಡಿರುವ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯ ಮಾಲೀಕ ಅಫ್ಜಲ್ ಕಾಸಿಂಜೀ ತನ್ನ ಮನೆಯ ಮೇಲ್ಬಾಗದಲ್ಲಿ ಪಾರಿವಾಳ ಸಾಕಾಣಿಕೆ ಮಾಡುತ್ತಿದ್ದ. ಇಲ್ಲಿಗೆ ಹೋಗಬೇಕೆಂದರೆ ಮನೆಯ ಒಳಬಾಗದಿಂದ ಮೆಟ್ಟಿಲೇರಿ ಪಾರಿವಾಳ ಸಾಕಾಣಿಕೆ ಸ್ಥಳಕ್ಕೆ ತೆರಳಬೇಕಾಗುತ್ತದೆ.

ಇದನ್ನು ಅರಿತ ಪಾರಿವಾಳ ಕಳ್ಳ ಬೇರೆ ಮನೆಗ ಟೆರೇಸ್ ಮೇಲಿನಿಂದ ಬಂದು ಪಾರಿವಾಳ ಕೇಂದ್ರಕ್ಕೆ ಹಾಕಿರುವ ಜಾಲಿಗಳನ್ನು ಕತ್ತರಿಸಿ ಒಳ ಬಾಗಕ್ಕೆ ಬಂದು ಪಾರಿವಾಳ ವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಮುಂಜಾನೆ ಮಾಲೀಕ ಬಂದು ನೋಡಿದಾಗ ಕಳ್ಳತನವಾಗಿರುವುದನ್ನು ಅರಿತು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳತನ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತು. ಪಾರಿವಾಳ ಸಾಕಾಣಿಕೆ ಕೇಂದ್ರದ ಮಾಲೀಕ ಅಫ್ಜಲ್ ಖಾಸಿಂಜೀ ಪೊಲೀಸರಿಗೆ ದೂರು ನೀಡಿದ್ದರು .

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದಾಗ ಆರೋಪಿ ಕಳೆದ ಒಂದು ವರ್ಷದ ಹಿಂದೆಯೇ ಭಟ್ಕಳಕ್ಕೆ ಬಂದು ಅಫ್ಜಲ್ ರಿಂದ ಪಾರಿವಾಳಗಳನ್ನು ಖರೀದಿಸಿ ಹೋಗಿರುವ ಮಾಹಿತಿ ಕಲೆಹಾಕಿದ್ದು., ನಂತರ ಈತನನ್ನು ಬೆಂಗಳೂರಿನಿoದ ಬಂಧಿಸಿ ಭಟ್ಕಳಕ್ಕೆ ಕರೆ ತಂದಿದ್ದಾರೆ..


ಕದ್ದ ಪಾರಿವಾಳ ಪೈಕಿ 7 ಪಾರಿವಾಳಗಳನ್ನು ಈತ ಬೇರೆಡೆಗೆ ಮಾರಾಟ ಮಾಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆರೋಪಿಯನ್ನು ಗುರುವಾರವೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರೂಪದ ತಳಿಯ ದುಬಾರಿ ಬೆಲೆಯ ಪಾರಿವಾಳ

ಭಟ್ಕಳ ಆಜಾದ್ ನಗರದಲ್ಲಿರುವ ಅಫ್ಜಲ್ 8 ವರ್ಷಗಳಿಂದ ಪಾರಿವಾಳ ಸಾಕುವ ಹವ್ಯಾಸವನ್ನು ಇಟ್ಟುಕೊಂಡಿದ್ದು ಅವರು ಸಾಕಾಣಿಕಾ ಕೇಂದ್ರದಲ್ಲಿ ಭಾರತದ ನಂಬರ್ ಒನ್ ಲಾಹೋರಿ ಜಾತಿಯ ಅದ್ಭುತ ಸೌಂದರ್ಯವನ್ನು ಹೊಂದಿರುವ ಪಾರಿವಾಳಗಳು ಇವೆ. ಈ ಪಾರಿವಾಳಗಳು ವಿದೇಶ ಮಾತ್ರವಲ್ಲದೆ ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯನ್ನು ಹೊಂದಿವೆ .ಒಂದು ಪಾರಿವಾಳ ಒಮ್ಮೆ ಒಂದು ಲಕ್ಷದವರೆಗೂ ಬೇಡಿಕೆ ಬರುವುದು ಇದೆ ಎನ್ನಲಾಗಿದೆ. ಅಫ್ಜಲ್ ಅವರ ಸಾಕಾಣಿಕೆ ಕೇಂದ್ರದಲ್ಲಿ 300 ರಿಂದ 350 ಪಾರಿವಾಳಗಳು ಇವೆ. ಈ ಲಾಹೋರಿ ಪಾರಿವಾಳಗಳು ಕಾರಣದಿಂದಲೇ ಅಫ್ಜಲ್ 2018ರಿಂದ ಸತತ ಮೂರು ವರ್ಷ ರಾಷ್ಟ್ರೀಯ ಪಾರಿವಾಳಗಳ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿರುವುದು ವಿಶೇಷವಾಗಿದೆ.

ಈ ಬಗ್ಗೆ ಮಾತನಾಡಿದ ಪಾರಿವಾಳ ಸಾಕಾಣಿಕೆ ಕೇಂದ್ರದ ಮಾಲೀಕರು, ನಾನು ಸತತ 8 ವರ್ಷದಿಂದ ಪಾರಿವಾಳಗಳನ್ನು ಸಾಕುತ್ತಾ ಬಂದಿದ್ದು .3 ಬಾರಿರಾಷ್ಟ್ರೀಯ ಪಾರಿವಾಳಗಳ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿದ್ದೇನೆ.

ಅ.5 ರಂದು ರಾತ್ರಿ ನನ್ನ ಪಾರಿವಾಳ ಸಾಕಾಣಿಕ ಕೇಂದ್ರದಲ್ಲಿ ಕಳ್ಳತನ ಮಾಡಿ ಸುಮಾರು 25 ಹೈ ಬ್ರಿಡ್ ಲಾಹೋರಿ ತಳಿಯ ಪಾರಿವಾಲವನ್ನು ಕಳ್ಳತನ ಮಾಡಿ ಹೋಗಿದ್ದು ನಂತರ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಕಳ್ಳತನ ಮಾಡಿರುವ ವ್ಯಕ್ತಿ ನನ್ನ ಬಳಿ ಬಂದು ಪಾರಿವಾಳ ಖರೀದಿಮಾಡಿಕೊಂಡು ಪತ್ತೆಯಾಗಿದೆ. ಈತನನ್ನು ಭಟ್ಕಳ ಪೊಲೀಸರು ಬೇಗ ಪ್ರಕರಣ ಪತ್ತೆ ಮಾಡಿ 18 ಪಾರಿವಾಳವನ್ನು ಜಪ್ತಿ ಮಾಡಿ ನನಗೆ ಮರಳಿ ತಲುಸಿದ್ದು ಅವರಿಗೆ ನಾನು ತುಂಬಾ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ

ವಿಸ್ಮಯ ನ್ಯೂಸ್,ಉದಯ್ ಎಸ್ ನಾಯ್ಕ, ಭಟ್ಕಳ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version