ಜಿಲ್ಲೆಯಲ್ಲಿಂದು 102 ಪಾಸಿಟಿವ್: 251 ಮಂದಿ ಬಿಡುಗಡೆ

ಜಿಲ್ಲೆಯಾದ್ಯಂತ ಮೂವರ ಸಾವು
251 ಮಂದಿ ಗುಣಮುಖರಾಗಿ ಬಿಡುಗಡೆ

ಕಾರವಾರ: ಜಿಲ್ಲೆಯಲ್ಲಿ ಇಂದು 102 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತರ ಕಾರವಾರ 29, ಅಂಕೋಲಾ 7, ಕುಮಟಾ 9, ಹೊನ್ನಾವರ 15, ಭಟ್ಕಳ 6, ಶಿರಸಿ 11, ಸಿದ್ದಾಪುರ 15, ಯಲ್ಲಾಪುರ 10 ಸೋಂಕಿತ ಪ್ರಕರಣ ದಾಖಲಾಗಿದೆ.

ಕಾರವಾರ 56, ಅಂಕೋಲಾ 2, ಕುಮಟಾ 27, ಹೊನ್ನಾವರ 28, ಭಟ್ಕಳ 12, ಶಿರಸಿ 45, ಸಿದ್ದಾಪುರ 11, ಯಲ್ಲಾಪುರ 05, ಮುಂಡಗೋಡ 52, ಹಳಿಯಾಳ 5, ಜೋಯ್ಡಾ 8 ಜನರು ಆಸ್ಪತ್ರೆಯಿಂದ ಬಿಡಿಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ ಮೂವರ ಬಲಿ:

ಇಂದು ಕರೋನಾಕ್ಕೆ ಮೂರು ಜನ ಬಲಿಯಾಗಿದ್ದು 132 ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಹೊನ್ನಾವರ 1 ಹಾಗೂ ಮುಂಡಗೋಡಿನಲ್ಲಿ ೨ ಸಾವು ಸಂಭವಿಸಿದೆ.

ಜಿಲ್ಲೆಯಲ್ಲಿ ಇಂದು 251 ಜನ ಗುಣಮುಖರಾಗಿ ಬಿಡುಗಡೆ ಆಗಿದ್ದು 9048 ಜನ ಈವರೆಗೆ ಗುಣಮುಖರಾಗಿದ್ದು 11082 ಜನ ಈವರೆಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರಾಗಿದ್ದಾರೆ.

ಹೊನ್ನಾವರ ತಾಲೂಕಿನಲ್ಲಿ 12 ಪಾಸಿಟಿವ್:

ಹೊನ್ನಾವರ : ತಾಲೂಕಿನಲ್ಲಿ ಇಂದು 12 ಜನರಲ್ಲಿ ಕರೊನಾ ಕೇಸ್ ದೃಢಪಟ್ಟಿದೆ. ಪಟ್ಟಣ ವ್ಯಾಪ್ತಿಯಲ್ಲಿ 2, ಗ್ರಾಮೀಣಭಾಗದಲ್ಲಿ 10 ಕೇಸ್ ದೃಢಪಟ್ಟಿದೆ. ಪಟ್ಟಣದ ಪ್ರಭಾತನಗರದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಗ್ರಾಮೀಣ ಭಾಗವಾದ ಚಂದಾವರ- ಕೆಕ್ಕಾರ- ಕಡತೋಕಾ- ಕರ್ಕಿ- ಹಳದೀಪುರ- ಗೇರುಸೋಪ್ಪಾದಲ್ಲಿಯೂ ಸೋಂಕು ಕಾಣಿಸಿಕೊಂಡಿದೆ.

ಪಟ್ಟದ ಪ್ರಭಾತನಗರದ 53 ವರ್ಷದ ಪುರುಷ, 41 ವರ್ಷದ ಮಹಿಳೆ, ಗ್ರಾಮೀಣ ಭಾಗದ ಚಂದಾವರದ 24 ವರ್ಷದ ಯುವತಿ, 59 ವರ್ಷದ ಪುರುಷ, ಕೆಕ್ಕಾರದ 56 ವರ್ಷದ ಮಹಿಳೆ, 58 ವರ್ಷದ ಪುರುಷ, ಕಡತೋಕಾದ 50 ವರ್ಷದ ಮಹಿಳೆ, ಕರ್ಕಿಯ 28 ವರ್ಷದ ಮಹಿಳೆ, ಹಳದೀಪುರದ 20 ವರ್ಷದ ಯುವಕ, 15 ವರ್ಷದ ಬಾಲಕ, ಗೇರುಸೋಪ್ಪಾದ 48 ವರ್ಷದ ಮಹಿಳೆ ಸೇರಿದಂತೆ ಇಂದು 12 ಜನರಲ್ಲಿ ಸೋಂಕು ಪತ್ತೆಯಾಗಿದೆ.

13 ಜನರು ಡಿಸ್ಚಾರ್ಜ್ ಆಗಿದ್ದು, 132 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version