
ಅಂಕೋಲಾದಲ್ಲಿ ಗುಣಮುಖ 9 : ಸಕ್ರಿಯ 88
ದಾಖಲೆಯ ಗಂಟಲು ದ್ರವ ಪರೀಕ್ಷೆ : ನಿರ್ಲಕ್ಷ್ಯಕ್ಕೆ ಆಕ್ಷೇಪ
ಅಂಕೋಲಾ : ತಾಲೂಕಿನಲ್ಲಿ ಶನಿವಾರ ಒಟ್ಟೂ 7 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಮೊಗಟಾ, ಶೇಡಿಕುಳಿ, ನೀಲಂಪುರ, ಕನಸಿಗದ್ದೆ, ಕೆಎಲ್‍ಇ ರಸ್ತೆಯಂಚಿನ ಪ್ರದೇಶ ಮತ್ತು ವಂದಿಗೆ ವ್ಯಾಪ್ತಿಯಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿದೆ. ಸೋಂಕು ಮುಕ್ತರಾದ 9 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನಲ್ಲಿರುವ 65 ಮಂದಿ ಸಹಿತ ತಾಲೂಕಿನಲ್ಲಿ ಒಟ್ಟೂ 88 ಪ್ರಕರಣಗಳು ಸಕ್ರಿಯವಾಗಿದೆ.
ದಾಖಲೆಯ ಗಂಟಲು ದ್ರವ ಪರೀಕ್ಷೆ :
ಇಂದು ತಾಲೂಕಿನ ವಿವಿಧ ಪ್ರದೇಶಗಳಿಂದ ಒಟ್ಟೂ 342 ಜನರ ಗಂಟಲು ಮತ್ತು ಮೂಗು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಒಂದರ್ಥದಲ್ಲಿ ಪರೀಕ್ಷಾ ಸಂಖ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿರುವುದು, ಸೋಂಕನ್ನು ಶೀಘ್ರವಾಗಿ ಪತ್ತೆ ಹಚ್ಚಲು ಅನುಕೂಲವೇ ಸರಿ. ವಿವಿಧ ಇಲಾಖೆಯ ಕೊರೊನಾ ವಾರಿಯರ್ಸ್‍ಗಳು ಶಕ್ತಿಮೀರಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ.
ನಿರ್ಲಕ್ಷ್ಯಕ್ಕೆ ಹೊಣೆಯಾರು ?
ಅಧಿಕೃತ ಸಂತೆ ಪರವಾನಿಗೆ ಇಲ್ಲದಿದ್ದರೂ ಶನಿವಾರ ಜನಜಂಗುಳಿ ಹೆಚ್ಚಿದ್ದು, ಇದೇ ವೇಳೆ ಪುರಸಭೆ ವ್ಯಾಪ್ತಿಯಲ್ಲಿ ಕಣಕಣೇಶ್ವರ ದೇವಸ್ಥಾನದ ಎದುರು ಸಾರ್ವಜನಿಕರ ಗಂಟಲುದ್ರವ ಸಂಗ್ರಹಿಸಲು ವಿಶೇಷ ಕ್ಯಾಂಪ್ ಹಮ್ಮಿಕೊಳ್ಳ ಲಾಗಿತ್ತು.
ಈ ವೇಳೆ ಬಿಸಿಲಿನ ಝಳ ಮತ್ತಿತರ ಕಾರಣಗಳಿಂದಲೋ ಏನೋ ಎಂಬಂತೆ ಪ್ರಯೋಗಾಲಯದ ಸಿಬ್ಬಂದಿ ಪಿಪಿಇ ಕಿಟ್‍ನ್ನು ಸರಿಯಾಗಿ ಧರಿಸದಿರುವುದು, ಓರ್ವರ ಪರೀಕ್ಷೆಯ ನಂತರ ಅತೀ ತರಾತುರಿಯಲ್ಲಿ ಇನ್ನೊರ್ವರನ್ನು ಅದೇ ಖುರ್ಚಿಯ ಮೇಲೆ ಕುಳ್ಳಿರಿಸಿ ಪರೀಕ್ಷೆ ಮಾಡುವುದು, ಸೆನಿಟೈಜೇಶನ್‍ಗೆ ಮಹತ್ವ ನೀಡದಿರುವುದು, ಸಂಬಂಧಿಸಿದ ಕೆಲ ಸಿಬ್ಬಂದಿಗಳೇ ಮಾಸ್ಕ ಧರಿಸದೇ ಇರುವುದು ಮತ್ತಿತರ ನಿರ್ಲಕ್ಷ್ಯಕ್ಕೆ ಪ್ರಜ್ಞಾ ವಂತರು ಆಕ್ಷೇಪ ವ್ಯಕ್ತಪಡಿ ಸಿದ್ದಾರೆ.
ಸಂಬಂಧಿಸಿದ ಇಲಾಖೆಗಳು ಕೇವಲ ಪರೀಕ್ಷಾ ಸಂಖ್ಯೆಗಳಿಗಷ್ಟೇ ಮಹತ್ವ ನೀಡದೇ, ತಮ್ಮ ಮತ್ತು ಸಮುದಾಯದ ಆರೋಗ್ಯ ಕಾಳಜಿಯ ಹಿತ-ದೃಷ್ಟಿಯಿಂದ ಅಗತ್ಯ ಕೋವಿಡ್ ಮಾರ್ಗಸೂಚಿ ನಿಯಮಾವಳಿಗಳನ್ನು ಪಾಲಿಸಿ ಜವಬ್ದಾರಿ ಪ್ರದರ್ಶಿಸಬೇಕಿದೆ.
ಯಲ್ಲಾಪುರದಲ್ಲಿಂದು ಇಬ್ಬರಿಗೆ ಕೊರೊನಾ ದೃಢ
ಯಲ್ಲಾಪುರ: ಪಟ್ಟಣದಲ್ಲಿ ಶನಿವಾರ ಎರಡು ಜನರಿಗೆ ಕೊರೊನಾ ಧೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 123 ಕ್ಕೆ ಏರಿಕೆಯಾಗಿದೆ. ಈ ಎರಡೂ ಪ್ರಕರಣ ರಾಮಾಪುರದಲ್ಲಿ ದೃಢಪಟ್ಟಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ