ಆರೋಪಿಯ ಪತ್ತೆಗೆ ಬಲೆ ಬೀಸಿದ ಪೊಲೀಸರು
ಗಂಧದ ಗಿಡ ಕಳ್ಳನತ ಪ್ರಕರಣದಡಿ ಬಂಧಿತನಾಗಿದ್ದ
ಕಾರವಾರ: ಕರೊನಾ ಸೋಂಕು ದೃಢಪಟ್ಟ ಆರೋಪಿಯೊಬ್ಬ ಕ್ರಿಮ್ಸ್ ಐಸಿಯು ವಾರ್ಡ್ ನಿಂದ ತಪ್ಪಿಸಿಕೊಂಡ ಘಟನೆ ನಡೆದಿದೆ. ಸೈಯದ್ (25) ಕ್ರಿಮ್ಸ್ ನಿಂದ ತಪ್ಪಿಸಿಕೊಂಡ ಆರೋಪಿ. ಮುಂಡಗೋಡದಲ್ಲಿ ಕಳೆದ ಎರಡು ದಿನಗಳ ಹಿಂದೆ ಗಂಧದ ಗಿಡ ಕಳ್ಳನತಕ್ಕೆ ಸಂಬoಧಿಸಿದoತೆ ಅರಣ್ಯ ಇಲಾಖೆಯ ಪ್ರಕರಣದಡಿ ಬಂಧಿತನಾಗಿದ್ದ.
ಈ ಸಂದರ್ಭದಲ್ಲಿ ಆರೋಪಿಗೆ ಕೋವಿಡ್ ತಪಾಸಣೆ ಮಾಡಲಾಗಿತ್ತು. ಕೊವಿಡ್ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕಾರವಾರದ ಕ್ರಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಕ್ರಿಮ್ಸ್ ಐಸಿಯುನಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಸಂದರ್ಭದಲ್ಲಿ ಆರೋಪಿಯು ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ.
ತಪ್ಪಿಸಿಕೊಂಡ ಆರೋಪಿಯ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಪಾಕಿಸ್ತಾನದ ಹೆಸರು ಉಲ್ಲೇಖಿಸಿ ವಾಲ್ ಪೋಸ್ಟರ್ ಬರೆದು – ಅಂಟಿಸಿದವನ ತೀವೃ ವಿಚಾರಣೆಗೆ ಒಳಪಡಿಸಿದ ಪೊಲೀಸರು:ಗೊಂದಲ ಹಾಗೂ ಸಂಶಯ ಮೂಡಿಸಿದ ಪೋಸ್ಟರ್ ನಲ್ಲಿ ಏನಿತ್ತು?
- ದಾರಿ ಮಧ್ಯೆ ಅಸ್ವಸ್ಥ: ಲಾರಿ ಚಾಲಕ ಸಾವು
- ದಾರಿಯಲ್ಲಿ ಸಿಕ್ಕಿದ ಪರ್ಸ್ ನಲ್ಲಿದ್ದ ಮಾಂಗಲ್ಯ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಅಟೋ ಚಾಲಕ
- ವಿವಿಧ ಹುದ್ದೆಗಳಿಗೆ ನೇಮಕಾತಿ: ನೇರ ಸಂದರ್ಶನ: ಇಂದೇ ಅರ್ಜಿ ಸಲ್ಲಿಸಿ