ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿ ಮುಂದಕ್ಕೆ: ಮತ್ತೆ ಯಾವಾಗ ಆರಂಭ?

ನಾಳೆ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಭೆ
ಬಗೆಹರಿಯಲಿದೆ ಪರ್ಯಾಯ ವ್ಯವಸ್ಥೆಯ ಗೊಂದಲ

ಕುಮಟಾ: ಸಾಗರಮಾಲಾ ಯೋಜನೆಯಡಿಯಲ್ಲಿ ಜಿಲ್ಲೆಯ ಶಿರಸಿ,ಕುಮಟಾ ರಸ್ತೆಯ ಅಗಲೀಕರಣ ಕಾರ್ಯ ಪ್ರಾರಂಭಕ್ಕೆ ದಿನಾಂಕ ನಿಗದಿಯಾಗಿತ್ತು. ಈ ಹಿನ್ನಲೆಯಲ್ಲಿ ಅಕ್ಟೋಬರ್ 12 ರಿಂದ 18 ತಿಂಗಳುಗಳ ಕಾಲ ಇಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಪಪಡಿಸಿದ್ದರು. ಆದರೆ, ಪರ್ಯಾಯ ಮಾರ್ಗದ ಗೊಂದಲದಿoದಾಗಿ ಈ ಕಾಮಗಾರಿ ಕೆಲದಿನಗಳ ಕಾಲ ಮುಂದೂಡಲ್ಪಟ್ಟಿದೆ.


ಕಾಮಗಾರಿ ಪ್ರಾರಂಭ ಕೆಲದಿನಗಳ ಕಾಲವಕಾಶ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ಎಂದಿನoತೆ ವಾಹನ ಸಂಚಾರ ಕಂಡುಬoದಿದೆ. ಶಿರಸಿಯಿಂದ ಕುಮಟಾ- ಕಾರವಾರಕ್ಕೆ ತೆರಳುವ ವಾಹನಗಳಿಗೆ ತೊಂದರೆ ಉಂಟಾಗಲಿದೆ. ಅದಕ್ಕೆ ಪರ್ಯಾಯ ಮಾರ್ಗವಾಗಿ ಕುಮಟಾಕ್ಕೆ ಹೋಗುವ ಲಘು ವಾಹನಗಳು ಸಿದ್ದಾಪುರ ಮಾರ್ಗವಾಗಿ ತೆರಳಬಹುದು, ಇನ್ನು ಅಂಕೋಲಾ-ಕಾರವಾರಕ್ಕೆ ತೆರಳುವವರು ಯಲ್ಲಾಪುರ ಮಾರ್ಗವಾಗಿ ಎನ್ಎಚ್ 63 ನಲ್ಲಿ ಸಂಚರಿಸಬಹುದಾಗಿದೆ ಮತ್ತು ಭಾರೀ ಸೇರಿ ಎಲ್ಲಾ ತರಹದ ವಾಹನಗಳು ಶಿರಸಿಯಿಂದ- ಸಿದ್ದಾಪುರ- ಮಾವಿನಗುಂಡಿ- ಹೊನ್ನಾವರ- ಮಂಗಳೂರಿಗೆ ಸಂಚರಿಸಬಹುದಾಗಿದೆ ಎಂಬ ವರದಿಗಳು ಕೇಳಿಬಂದಿದ್ದವು.


ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಿ.ಡಬ್ಲ್ಯು.ಡಿ ಎಂಜಿನಿಯರ್‌ಗಳು, ಸಾರಿಗೆ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ಸಭೆಕರೆದು ಅಂತಿಮ ನಿರ್ಣಯ ತೆಗೆದುಕೊಳ್ಳುವಂತೆ ಕುಮಟಾ ಸಹಾಯಕ ಆಯುಕ್ತರಾದ ಅಜೀತ್ ಎಮ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈ ಕುರಿತಾಗಿ ನಮ್ಮ ವಿಸ್ಮಯ ಟಿ.ವಿ ಗೆ ಸಹಾಯಕ ಆಯುಕ್ತರಾದ ಅಜಿತ್ ಎಮ್ ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ 14 ರ ಬುಧವಾರದಂದು ಬೆಳಿಗ್ಗೆ 11 ಗಂಟೆಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಂಬoಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗಿದೆ. ಆ ಒಂದು ಸಭೆಯಲ್ಲಿ ಕುಮಟಾ-ಶಿರಸಿ ಹೆದ್ದಾರಿ ಕಾಮಗಾರಿ ಪ್ರಾರಂಭದ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು.
-ಅಜಿತ್ ಎಮ್, ಸಹಾಯಕ ಆಯುಕ್ತರು, ಕುಮಟಾ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version