
ಯಲ್ಲಾಪುರ: ಇಂದು ಕುಮಟಾ ಎಪಿಎಂಸಿ ಅಧ್ಯಕ್ಷ ರಮೇಶ್ ಸೀತಾರಾಮ್ ಪ್ರಸಾದ್ ಇವರ ನೇತೃತ್ವದಲ್ಲಿ ಉತ್ತರಕನ್ನಡಜಿಲ್ಲೆಯ ಎಪಿಎಂಸಿಅಧ್ಯಕ್ಷರ ಗಳ ಒಕ್ಕೂಟ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶಿವರಾಮ ಹೆಬ್ಬಾರ್ ಅವರನ್ನು ಯಲ್ಲಾಪುರ ಎಪಿಎಂಸಿ ಕಚೇರಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿರಸಿ ಎಪಿಎಂಸಿ ಅಧ್ಯಕ್ಷರಾದ ವಿಶ್ವನಾಥ್ ಹೆಗಡೆ ಯಲ್ಲಾಪುರ ಎಪಿಎಂಸಿ ಅಧ್ಯಕ್ಷರಾದ ಎಂ ಜಿ ಭಟ್ ಕಾರವಾರ್ ಎಪಿಎಂಸಿ ಅಧ್ಯಕ್ಷರಾದ ಸಾಯಿನಾಥ ಗಾಂವ್ಕರ್ ಕುಮಟಾ ಎಪಿಎಂಸಿ ಸದಸ್ಯರಾದ ಅರವಿಂದ ಪೈ ,ಯಲ್ಲಾಪುರ ಬಿಜೆಪಿ ತಾಲೂಕು ಅಧ್ಯಕ್ಷ ಹಾಗೂ ಎಪಿಎಂಸಿ ವರ್ತಕ ಪ್ರ ನಿಧಿಯಾದ ಗೋಪಾಲಕೃಷ್ಣ ಗಾಂವ್ಕರ್ ಹಾಗೂ ಯಲ್ಲಾಪುರ ಎಪಿಎಂಸಿ ಕಾರ್ಯದರ್ಶಿ ಉಪಸ್ಥಿತರಿದ್ದರು.
ಉಸ್ತುವಾರಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಮನವಿಯ ಬಗ್ಗೆ ಪರಿಶೀಲಿಸಿ ಸರಕಾರದ ಮಟ್ಟದಲ್ಲಿ ನ್ಯೂನ್ಯತೆ ಸರಿಪಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್










