ಕರೊನಾ: ರಾಜ್ಯದಲ್ಲೇ ಉತ್ತರಕನ್ನಡಕ್ಕೆ ಮೂರನೇ ಸ್ಥಾನ

ಕುಮಟಾದಲ್ಲಿ ಎರಡು ಕೇಸ್
ಹೊನ್ನಾವರದಲ್ಲಿ ಒಂದು ಪ್ರಕರಣ ದಾಖಲು

ಕುಮಟಾ: ತಾಲೂಕಿನಲ್ಲಿ ಇಂದು ಎರಡು ಕರೊನಾ ಕೇಸ್ ದಾಖಲಾಗಿದೆ. ತಾಲೂಕಿನ ಮುರೂರು ಹಾಗೂ ಕೋಟಿತೀರ್ಥದಲ್ಲಿ ಒಂದೊಂದು ಪ್ರಕರಣ ಕಂಡುಬಂದಿದೆ. ಮೂರೂರಿನ 43 ವರ್ಷದ ಮಹಿಳೆ, ಕೋಟಿತೀರ್ಥದ 53 ವರ್ಷದ ಮಹಿಳೆಯಲ್ಲಿ ಸೋಂಕು ದೃಡಪಟ್ಟಿದೆ. ಇಂದು 2 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1683 ಕ್ಕೆ ಏರಿಕೆಯಾಗಿದೆ.

ಹೊನ್ನಾವರ: ತಾಲೂಕಿನಲ್ಲಿ ಕೆಲವು ದಿನಗಳಿಂದ ಹೆಚ್ಚಾಗಿದ್ದ ಕರೊನಾ ಇಂದು ಇಳಿಮುಖವಾಗಿದೆ. ಇಂದು ಹೊನ್ನಾವರ ತಾಲೂಕಿನ ಮಂಕಿ ಮಾವಿನಕಟ್ಟೆಯ 20 ವರ್ಷದ ಯುವಕನಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತಿದ್ದ 8 ಜನರು ಬಿಡುಗಡೆಯಾಗಿದ್ದಾರೆ.

ಉತ್ತರಕನ್ನಡಕ್ಕೆ ಮೂರನೇ ಸ್ಥಾನ:

ಕರೊನಾ ಹಾಟ್‍ಸ್ಪಾಟ್ ಅಂತಲೂ ಗುರುತಿಸಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲೀಗ ಪ್ರತಿದಿನ ಹೊಸ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಈಗ ಅತಿ ಕಡಿಮೆ ಸೋಂಕಿತ ಪ್ರಕರಣ ದಾಖಲಾಗುವ ಜಿಲ್ಲೆಗಳ ಪೈಕಿ ಉತ್ತರಕನ್ನಡ 3ನೇ ಸ್ಥಾನದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೀಗ ಪ್ರತಿದಿನ ಹೊಸ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿದ್ದು, ಸೋಂಕಿನ ಪ್ರಮಾಣ ದರ ಕೂಡ ಶೇಕಡಾ 2 ಕ್ಕೆ ಇಳಿಕೆಯಾಗಿದೆ. ಆದರೆ, ಹಬ್ಬ-ಹರಿದಿನಗಳಲ್ಲಿ ಮೈ ಮರೆತರೆ ಈ ಪ್ರಮಾಣ ಮತ್ತೆ ಏರಿಕೆಯಾಗುವ ಸಾಧ್ಯತೆಯೂ ಇದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

ವಿಸ್ಮಯ ನ್ಯೂಸ್ ನಾಗೇಶ ದೀವಗಿ ಕುಮಟಾ ಮತ್ತು ಶ್ರೀಧರ ನಾಯ್ಕ ಹೊನ್ನಾವರ

Exit mobile version